ಈ ಕಾರಣಕ್ಕಾಗಿಯೆ ನಾಯಕಿಯಾಗಿ ರಾಧಿಕಾ ಪಂಡಿತ್ ಜನಕ್ಕೆ ಇಷ್ಟವಾಗೋದು

Published : Apr 28, 2025, 11:17 PM ISTUpdated : Apr 29, 2025, 10:30 AM IST

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸಿನಿಮಾದಲ್ಲಿ ನಟಿಸಿ ವರ್ಷಗಳು ಹಲವಾರು ವರ್ಷಗಳು ಕಳೆದರೂ ಇಂದಿಗೂ ಜನ ಆಕೆಯನ್ನು ಇಷ್ಟಪಡ್ತಿದ್ದಾರೆ ಅಂದ್ರೆ ಅದಕ್ಕೇನು ಕಾರಣ ಗೊತ್ತ?   

PREV
17
ಈ ಕಾರಣಕ್ಕಾಗಿಯೆ ನಾಯಕಿಯಾಗಿ ರಾಧಿಕಾ ಪಂಡಿತ್ ಜನಕ್ಕೆ ಇಷ್ಟವಾಗೋದು

ಸ್ಯಾಂಡಲ್ ವುಡ್ ನಲ್ಲಿ 10 ವರ್ಷಗಳ ಕಾಲ ಮಿಂಚಿದ ಚೆಲುವೆ, ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಂತಾನೇ ಜನಪ್ರಿಯತೆ ಪಡೆದ ನಟಿ ರಾಧಿಕಾ ಪಂಡಿತ್ (Radhika Pandit). ಇವರು ತಮ್ಮ ವಿಭಿನ್ನ ನಟನೆಯಿಂದಾನೇ ಜನಪ್ರಿಯತೆ ಪಡೆದರು. ಅಷ್ಟಕ್ಕೂ ಜನರು ಯಾಕೆ ರಾಧಿಕಾ ಪಂಡಿತ್ ಅವರನ್ನು ಇಷ್ಟಪಡುತ್ತಾರೆ ಗೊತ್ತಾ?   
 

27

ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ
ರಾಧಿಕಾ ಪಂಡಿತ್ ಅಭಿನಯಿಸಿರುವ ಯಾವುದೇ ಸಿನಿಮಾವನ್ನು ನೋಡಿದ್ರೂ, ಅವರ ಸ್ಕ್ರೀನ್ ಪ್ರೆಸೆನ್ಸ್ (Screen Presence) ನೋಡಿದ್ರೆ, ವಾವ್ ಅಂತ ಅನಿಸುತ್ತೆ. ರಾಧಿಕಾ ಪಂಡಿತ್ ಅಂದ ನೋಡಿದ್ರೆ, ನೋಡುತ್ತಲೇ ಇರಬೇಕು ಅನಿಸುತ್ತೆ, ಅಂತಹ ಸ್ಕ್ರೀನ್ ಪ್ರೆಸೆನ್ಸ್ ಅವರದ್ದು. 

37

ಡೈಲಾಗ್ ಡೆಲಿವರಿ ಸಖತ್ತಾಗಿದೆ
ರಾಧಿಕಾ ಪಂಡಿತ್ ಮಾಡಿದ ಎಲ್ಲಾ ಸಿನಿಮಾಗಳನ್ನು ಅವರು ಹೇಳುವಂತಹ ಡೈಲಾಗ್ ಗಳು  (dialogue delivery) ಪಂಚಿಂಗ್ ಆಗಿರುತ್ತೆ. ಅದಕ್ಕಾಗಿಯೇ ಆಕೆ ಎಲ್ಲರಿಗೂ ಇಷ್ಟವಾಗುತ್ತಾರೆ. 

47

ಬಾಡಿ ಲಾಂಗ್ವೇಜ್ ಸೂಪರ್
ರಾಧಿಕಾ ಪಂಡಿತ್ ಹೆಚ್ಚು ಹೈಟ್ ವೈಟ್ ಇಲ್ಲಾಂದ್ರೂ, ಅವರ ಬಾಡಿ ಲಾಂಗ್ವೇಜ್ (body language) ನೋಡೋದಕ್ಕೆ ಚೆನ್ನಾಗಿರುತ್ತೆ. ಪ್ರತಿ ಪಾತ್ರಕ್ಕೂ ಬೇಕಾಗುವ ಮ್ಯಾನರಿಸಂ ಅವರ ಪಾತ್ರದಲ್ಲಿ ಎದ್ದು ಕಾಣುತ್ತೆ. 
 

57

ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ
ಮೊಗ್ಗಿನ ಮನಸ್ಸು (Moggina Manasu) ಸಿನಿಮಾದಿಂದ ಹಿಡಿದು, ಕೃಷ್ಣನ್ ಲವ್ ಸ್ಟೋರಿ, ಹುಡುಗರು, ದೊಡ್ಮನೆ ಹುಡುಗ, ಅದ್ಧೂರಿ, ಮಿ. ಅಂಡ್ ಮಿಸಸ್ ರಾಮಾಚಾರಿ ಎಲ್ಲಾ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.
 

67

ಎಕ್ಸ್ ಪ್ರೆಶನ್ ಗೆ ಫಿದಾ ಆಗದವರು ಯಾರೂ ಇಲ್ಲ
ರಾಧಿಕಾ ಪಂಡಿತ್ ಅವರ ಮುದ್ದು ಮುದ್ದಾದ ಎಕ್ಸ್ ಪ್ರೆಶನ್ (expression), ಅವರ ನಗು, ಸಿಟ್ಟು ಬಂದಾಗ ಮುಖದಲ್ಲಿ ಕಾಣಿಸುವ ಆ ಕೋಪ,ಅತ್ತಾಗ ನಮ್ಮನ್ನು ಅಳಿಸುವಂತಹ ಆ ಅಭಿನಯ ನೋಡಿದ್ರೆ ಎಲ್ಲರೂ ಫಿದಾ ಆಗೋದೆ. 
 

77

ಸ್ಥಿರತೆ
ರಾಧಿಕಾ ಪಂಡಿತ್ ಅವರ ಯಾವ ಸಿನಿಮಾದಲ್ಲೂ ಅವರು ಓವರ್ ಆಗಿ ನಟಿಸಿದ್ದಾರೆ ಅಂತ ಅನಿಸೋದೆ ಇಲ್ಲ. ಪ್ರತಿಯೊಂದು ಪಾತ್ರಗಳು, ನಟನೆ, ಡ್ಯಾನ್ಸ್, ಎಲ್ಲದರಲ್ಲೂ ಸ್ಥಿರತೆ (Consistency) ಕಾಯ್ಡುಕೊಂಡು ನಟಿಸುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿಯೇ ರಾಧಿಕಾ ಪಂಡಿತ್ ಎಲ್ಲರಿಗೂ ಇಷ್ತವಾಗ್ತಾರೆ.

Read more Photos on
click me!

Recommended Stories