ಗ್ಯಾಪಲ್ಲಿ ಬಂದು ಬಾಕ್ಸಾಫೀಸ್‌ ಹೊಡ್ಕೊಂಡು ಹೋಗೋ ಸಿನಿಮಾಗಳೇ ಗ್ರೇಟ್‌ : ಉಪೇಂದ್ರ

Published : Feb 06, 2023, 09:11 AM IST

ಫೆ.24ಕ್ಕೆ ಸೌತ್‌ ಇಂಡಿಯನ್‌ ಹೀರೋ ಸಿನಿಮಾ ಬಿಡುಗಡೆ. ಚಿತ್ರತಂಡಕ್ಕೆ ಸಾಥ್ ಕೊಟ್ಟ ರಿಯಲ್ ಸ್ಟಾರ್...

PREV
16
ಗ್ಯಾಪಲ್ಲಿ ಬಂದು ಬಾಕ್ಸಾಫೀಸ್‌ ಹೊಡ್ಕೊಂಡು ಹೋಗೋ ಸಿನಿಮಾಗಳೇ ಗ್ರೇಟ್‌ : ಉಪೇಂದ್ರ

‘ನಾವು ವರ್ಷಗಟ್ಟಲೆ ಸಮಯ ತಗೊಂಡು ಒಂದು ಸಿನಿಮಾ ಮಾಡ್ತೀವಿ. ಕೆಲವು ಸಿನಿಮಾಗಳು ಗ್ಯಾಪಲ್ಲಿ ಬಂದು ಬಾಕ್ಸಾಫೀಸ್‌ ದೋಚಿಕೊಂಡು ಹೋಗುತ್ತವೆ. ಸೌತ್‌ ಇಂಡಿಯನ್‌ ಹೀರೋ ಚಿತ್ರ ಆ ರೀತಿಯ ಸಕ್ಸಸ್‌ ಕಾಣುವ ಎಲ್ಲ ಲಕ್ಷಣ ಕಾಣ್ತಿದೆ’

26

ಉಪೇಂದ್ರ ಈ ಮಾತುಗಳನ್ನು ಹೇಳಿದ್ದು ‘ಸೌತ್‌ ಇಂಡಿಯನ್‌ ಹೀರೋ’ ಸಿನಿಮಾದ ಟ್ರೇಲರ್‌ ಬಿಡುಗಡೆಯಲ್ಲಿ. ಈ ಚಿತ್ರ ಫೆ.24ಕ್ಕೆ ಬಿಡುಗಡೆಯಾಗಲಿದೆ. 

36

‘ಫಸ್ಟ್‌ ರಾರ‍ಯಂಕ್‌ ರಾಜು’ ಸಿನಿಮಾ ನಿರ್ದೇಶಿಸಿದ್ದ ನರೇಶ್‌ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರವನ್ನು ಉಪೇಂದ್ರ ಅವರಿಗೆ ತೋರಿಸಿ ಅವರಿಂದ ಶಹಭಾಸ್‌ಗಿರಿ ಪಡೆದ ಖುಷಿಯಲ್ಲಿ ನರೇಶ್‌ ಇದ್ದರು.
 

46

‘ನಾನಿಷ್ಟುವರ್ಷ ಇಂಡಸ್ಟ್ರಿಯಲ್ಲಿದ್ದರೂ ಈ ಸಿನಿಮಾದ ಹೀರೋ ಪಾತ್ರದಂಥಾ ಒಂದು ಪಾತ್ರ ನನಗೆ ಸಿಗಲಿಲ್ಲ. ಹೀರೋ ಸಾರ್ಥಕ್‌ ನೋಡಿ ನನಗೆ ಜಲಸ್‌ ಆಯ್ತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಆಗೋ ವಿಶ್ವಾಸ ಇದೆ’ ಅಂತ ಉಪೇಂದ್ರ ಹೇಳಿದ್ದು ಚಿತ್ರತಂಡದÜ ಆತ್ಮವಿಶ್ವಾಸ ಹೆಚ್ಚಿಸಿತು.

56

ನಿರ್ದೇಶಕ ನರೇಶ್‌, ‘ಜನ ಮೊದಲ ವಾರವೇ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದರೆ ನಮಗೆ ಆನೆ ಬಲ. ಮೂರ್ನಾಲ್ಕು ವಾರಗಳಷ್ಟುಕಾಯುವ ಆರ್ಥಿಕ ಚೈತನ್ಯ ನಮ್ಮಂಥ ತಂಡಕ್ಕಿಲ್ಲ. ದಕ್ಷಿಣ ಭಾರತೀಯ ಹೀರೋಗಳ ಬಯೋಪಿಕ್‌ನಂತೆ ಸಿನಿಮಾ ಮೂಡಿಬಂದಿದೆ’ ಎಂದರು.

66

ನಾಯಕ ಸಾರ್ಥಕ್‌, ‘ಈ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ಪಾತ್ರವನ್ನಷ್ಟೇ ಮಾಡಿದ್ದೆ. ರಿಯಲ್ಲಾಗಿ ಅವ್ರು ಹೇಗಿರ್ತಾರೆ ಅಂತ ಇವತ್ತು ಉಪ್ಪಿ ಸರ್‌ ಬಂದಾಗ ಜನ ಮುತ್ತಿಕೊಂಡ ರೀತಿ ನೋಡಿ ತಿಳಿಯಿತು’ ಎಂದರು.ನಾಯಕಿ ಕಾಶಿಮಾ, ಸಂಗೀತ ನಿರ್ದೇಶಕ ಅನಿಲ್‌ ಸಿಜೆ, ಹರ್ಷ ಹಾಗೂ ಚಿತ್ರತಂಡದವರು ಸಮಾರಂಭದಲ್ಲಿದ್ದರು.

Read more Photos on
click me!

Recommended Stories