ಕನ್ನಡ ಚಿತ್ರರಂಗದ ಅದ್ಭುತ ನಟ, ಹಿರಿಯ ನಟ ಜೈ ಜಗದೀಶ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
ಅದರಲ್ಲೂ ಹಿರಿಯ ಪುತ್ರಿ ವೈಭವಿ ಜಗದೀಶ್ ಇನ್‌ಸ್ಟಾಗ್ರಾಂನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಈಗ ಸೀರೆ ಫೋಟೋ ಅಪ್ಲೋಡ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ವೈಭವಿ ಜಗದೀಶ್ ಸಖತ್ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಸೀರೆಯಲ್ಲೂ ಹಾಟ್ ಕಾಣಿಸಬಹುದು ಎಂದು ತೋರಿಸಿಕೊಡುತ್ತಿದ್ದಾರೆ.
ಬಳಿ ಬಣ್ಣದ ಡಿಸೈನರ್ ಸೀರೆಯಲ್ಲಿ ಮಿಂಚಿರುವ ವೈಭವ್ ಸಖತ್ ಸಿಂಪಲ್ ವೈಟ್ ಬ್ಲೌಸ್ ಧರಿಸಿದ್ದಾರೆ. ಯಾವ ಆಭರಣವೂ ಧರಿಸಿಲ್ಲ.
ಸಮ್ಯಾಕ್ ಕ್ಲೋಥಿಂಗ್ ಡಿಸೈನ್ ಮಾಡಿರುವ ಸೀರೆ ಇದಾಗಿತ್ತು ಚೇತನ್ ರಾಯ್ ರಜಪುತ್ ಫೋಟೋ ಕ್ಲಿಕ್ ಮಾಡಿದ್ದಾರೆ. ದೀಪ್ತಿ ಮೇಕಪ್ ಮಾಡಿದ್ದಾರೆ.
ಇದ್ದಕ್ಕಿದ್ದಂತೆ ಇಷ್ಟೊಂದು ಸಣ್ಣಗಾಗಿ ಬ್ಯಾಕ್ ಟು ಬ್ಯಾಕ್ ಫೋಟೋ ಶೂಟ್ ಮಾಡಿಸಲು ಕಾರಣ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ತಾಯಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶನ ಮಾಡಿರುವ ಯಾನಾ ಸಿನಿಮಾದಲ್ಲಿ ವೈಭವಿ, ವೈನಿಧಿ ಹಾಗೂ ವೈಸಿರಿ ನಟಿಸಿದ್ದಾರೆ. ಇದಾದ ಮೇಲೆ ಸಿನಿಮಾ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ.