ಮುಖದಲ್ಲಿ ಮುಗ್ದತೆ, ಏನೋ ಹೇಳುವ ತವಕ, ರಾಧಿಕಾ ಕುಮಾರಸ್ವಾಮಿ ಫೋಟೋಗೆ ಫ್ಯಾನ್ಸ್ ಫಿದಾ!

Published : Dec 18, 2023, 12:13 PM IST

ನವೆಂಬರ್ 11ರಂದು ಹುಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡ ಸ್ಯಾಂಡಲ್‌ವುಡ್, ಸಿನಿಮಾ ವಿಷಯಕ್ಕೆ ಬಂದರೆ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಆದರೆ, ಇವರ ಹೆಸರಿನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಪೋಟೋಸ್ ಪೋಸ್ಟ್ ಮಾಡಿದರೆ ಸಾಕು, ಜನರು ಫುಲ್ ಖುಷಿಯಾಗುತ್ತಾರೆ. 

PREV
111
ಮುಖದಲ್ಲಿ ಮುಗ್ದತೆ, ಏನೋ ಹೇಳುವ ತವಕ, ರಾಧಿಕಾ ಕುಮಾರಸ್ವಾಮಿ ಫೋಟೋಗೆ ಫ್ಯಾನ್ಸ್ ಫಿದಾ!

ಸ್ಯಾಂಡಲ್‌ವುಡ್ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾಗಿಂತ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿ ಇದ್ದಿದ್ದೇ ಹೆಚ್ಚು. ವಿಜಯ್ ರಾಘವೇಂದ್ರ ಜೊತೆ ನಿನಗಾಗಿ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿಯ ಬ್ಯೂಟಿ ಇನ್ನೂ ಸ್ವಲ್ಪವೂ ಮಾಸಿಲ್ಲ. 

211

ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಗಳೊಂದಿಗೆ ಆಚರಿಸಿಕೊಂಡು ರಾಧಿಕಾ ತಮ್ಮ ವಿಳಾಸ ಕೊಟ್ಟು, ಮನೆ ಹತ್ತಿರ ಬನ್ನಿ ಅಂತ ಹೇಳಿದ್ದು ಸುದ್ದಿಯಾಗಿತ್ತು. 

311

ಚ್ಚಿನ ನಟಿಯನ್ನು ಭೇಟಿಯಾಗಲು ಅವಕಾಶ ಪಡೆದುಕೊಂಡು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರು. ಅವರ ಮನೆ ಸಮೀಪ ಹೋಗಿ, ವಿಶ್ ಮಾಡಿ ನಟಿಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. 

411

ಭೈರಾದೇವಿಯಲ್ಲಿ ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ನಟಿಯ ದಮಯಂತಿ, ಒಪ್ಪಂದ ಮತ್ತು ರವಿ ಬೋಪಣ್ಣ ಚಿತ್ರಗಳೂ ಅದ್ಭುತ ಪ್ರತಿಕ್ರಿಯೆ ಪಡೆದಿದ್ದವು. 

511

ಎಲ್ಲರಲ್ಲಿ ಒಳ್ಳೆಯತನ ಹುಡುಕುವ ಮನಸು. ನಿಮ್ಮಲ್ಲಿ ವ್ಯಕ್ತವಾಗುತ್ತಿದೆ. ಒಳ್ಳೆಯದಾಗಲಿ ಮೇಡಂ, ಎಂದು ಅಭಿಮಾನಿಗಳು ರಾಧಿಕಾ ಇತ್ತೀಚೆಗೆ ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ಕಮೆಂಟ್ ಮಾಡಿದ್ದಾರೆ. 

611

ನೀಲ ಮೇಘಾ ಶ್ಯಾಮ, ಪ್ರೇಮಾ ಕೈದಿ, ರೋಮಿಯೋ ಜೂಲಿಯಟ್, ತವರಿಗೆ ಬಾ ತಂಗಿ, ತಾಯಿ ಇಲ್ಲದ ತಬ್ಬಲಿ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ರಾಧಿಕಾ, ತಂಗಿ ಪಾತ್ರದಲ್ಲಿ ನಟಿಸಿ, ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದ್ದರು. 

711

ಹುಡುಗಿಗಾಗಿ, ಹೋ ಲಲ, ಮನೆ ಮಗಳು, ಮಣಿ, ವರ್ಣಜಲಂ, ಭದ್ರಾದ್ರಿ ಮಾಮುಡ್, ಮೀಸೈ ಮಾಧವನ್ ಸೇರಿ ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 

811

ಸ್ಯಾಂಡಲ್ ಸ್ವೀಟಿ ಎಂದೆ ಕರೆಯಲ್ಪಡುವ ರಾಧಿಕಾ ಸ್ವೀಟಿ ನ್ನ ಜೋಡಿಯಿಂದ ಜನಮನ ಗೆದ್ದಿದ್ದರು. ಕಾಂಟ್ರ್ಯಾಕ್ಟ್‌ನಲ್ಲಿ ಅರ್ಜುನ್ ಸರ್ಜಾ ಜೊತೆ ಮಾಡಿದ ರೊಮ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. 

911

ಭೈರಾದೇವಿಯ ಅಘೋರಿ ಪಾತ್ರ ರಾಧಿಕಾರ ಒಳಗಿನ ಕಲಾವಿದೆ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಸ್ವೀಟಿ ನನ್ನ ಜೋಡಿ ಹಾಗೂ ಲಕ್ಕಿ ಚಿತ್ರವನ್ನು ನಿರ್ಮಿಸಿರುವ ರಾಧಿಕಾ ಕುಮಾರಸ್ವಾಮಿ,  ಅಲ್ಲಿಯೂ ಯಶ ಕಂಡಿದ್ದಾರೆ.

1011

ಮಗಳು ಶಮಿಕಾ ಕುಮಾರಸ್ವಾಮಿಯೂ ಸಹ ನಟನೆಗೆ ಬರುತ್ತಾಳೆಂದು ಹೇಳಲಾಗುತ್ತಿದ್ದು, ಅದಕ್ಕೆ ಅಗತ್ಯ ಇರುವ ನಟನಾ ಶಾಲೆಯಲ್ಲಿಯೇ ಕಲಿಯುತ್ತಿದ್ದಾಳೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಏನೂ ಇಲ್ಲ.

1111

ಸೀರೆಯಾಗಲಿ, ಮಾಡರ್ನ್ ಬ್ಯೂಟಿಯಾಗಲಿ ಅದ್ಭುತವಾಗಿ ಕಾಣಿಸಿಕೊಳ್ಳುವ ರಾಧಾಕಿ ಕುಮಾರಸ್ವಾಮಿ ಆರೋಗ್ಯ ಮತ್ತು ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ. 

Read more Photos on
click me!

Recommended Stories