ಮಾವನ ಭೀಮ ರಥ ಶಾಂತಿ ಸಂಭ್ರಮದಲ್ಲಿ ಮಿಂಚಿದ ನಟ ರಿಷಿ ದಂಪತಿ

First Published | Dec 16, 2023, 5:59 PM IST

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟ ರಿಷಿ ತನ್ನ ಮಾವನವರ 70ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಡೆದಂತಹ ಭೀಮ ರಥ ಶಾಂತಿ ಪೂಜೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. 
 

ಕನ್ನಡ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಮಿಂಚಿದ ನಟ ರಿಷಿ (Rishi). ಆಪರೇಶನ್ ಅಲಮೇಲಮ್ಮ,  ಕವಲುದಾರಿಯಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟ ರಿಷಿ ಸದ್ಯ ತೆಲುಗು ವೆಬ್ ಸೀರೀಸ್ ಶೈತಾನ್ ನಲ್ಲಿ ಮಿಂಚುತ್ತಿದ್ದಾರೆ. 
 

ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ನಟ ರಿಷಿ ಮತ್ತು ಪತ್ನಿ ಸ್ವಾತಿ ದಂಪತಿಯ ಮುದ್ದಾದ ಫೋಟೋಗಳು ಸದ್ದು ಮಾಡುತ್ತಿವೆ. ಪಿಂಕ್ ಬಣ್ಣದ ಕುರ್ತಾ ಮತ್ತು ಪ್ಯಾಂಟ್ ನಲ್ಲಿ ರಿಷಿ ಮತ್ತು ಮರೂನ್ ಸೀರೆ ಜೊತೆ ಪಿಂಕ್ ಬಣ್ಣದ ಬ್ಲೌಸಲ್ಲಿ ಪತ್ನಿ ಸ್ವಾತಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. 
 

Tap to resize

2019 ರಲ್ಲಿ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮಿಳು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗಿಯಾಗಿರುವ ಸ್ವಾತಿ ಪರಶುರಾಮನ್ (Swathi Parashuraman) ಅವರು ರಿಷಿಯವರನ್ನು ನಾಟಕಗಳಲ್ಲಿ ನೋಡಿ, ಅವರ ಹೈಟ್ ಪರ್ಸನಾಲಿಟಿಗೆ ಸೋತು, ನಂತರ ಇಬ್ಬರು ಗೆಳೆಯರಾಗಿ, ಪ್ರೀತಿಸಿ ಮತ್ತೆ ಮದುವೆಯಾಗಿದ್ದರು. 
 

ಕಳೆದ ನವಂಬರ್ ಗಷ್ಟೇ ಈ ಮುದ್ದಾದ ದಂಪತಿಗಳ ದಾಂಪತ್ಯ ಜೀವನದಕ್ಕೆ ನಾಲ್ಕು ವರ್ಷ ತುಂಬಿತ್ತು. ಆ ಸಂಭ್ರಮವನ್ನು ಸ್ವತಃ ರಿಷಿ ತಮ್ಮ ಸೋಶಿಯಲ್ ಮೀಡೀಯಾ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. 
 

ಇದೀಗ ಈ ಜೋಡಿಯ ಟ್ರೆಡಿಶನಲ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ರಿಷಿ ಪತ್ನಿ ಸ್ವಾತಿಯವರ ತಂದೆಯ 70 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಡೆದಂತಹ ಭೀಮ ರಥ ಶಾಂತಿಯ ಸಮಯದಲ್ಲಿ ತೆಗೆಸಿಕೊಂಡ ಫೋಟೋಗಳು ಅವು. 
 

ದಂಪತಿಗಳಿಬ್ಬರು ಜೊತೆಗಿದ್ದು, ಪತಿಯು 70ನೇ ವಯಸ್ಸನ್ನು ತಲುಪುವಾಗ ತಮಿಳು ಪಂಚಾಂಗದಂತೆ ಭೀಮ ರಥ ಶಾಂತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಶಾಂತಿ ಹೋಮ, ಕಲಶಾಭಿಷೇಕ, ಅಲ್ಲದೇ ಮದುವೆಯಂದು ನಡೆಯುವ ಸಕಲ ಕ್ರಮಗಳೂ ನಡೆಯುತ್ತವೆ. ಸ್ವಾತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಇನ್ನು ಸಿನಿಮಾ ವಿಷಯಕ್ಕೆ ಬಂದರೆ ನಟ ರಿಷಿಯಂತೂ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಾಮನ ಅವತಾರ (Ramana Avatara), ಸಕಲಾಕಲ ವಲ್ಲಭ, ಸೀರೆ ಮೊದಲಾದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಒಂದು ತೆಲುಗು ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. 
 

ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಷಿ ಅಭಿನಯದ ತೆಲುಗು ಸೀರೀಸ್ ಶೈತಾನ್ ಸಖತ್ತಾಗಿ ಸದ್ದು ಮಾಡುತ್ತಿದೆ. ಈ ಸೀರೀಸ್ ಅಭಿನಯಕ್ಕಾಗಿ ಇತ್ತೀಚೆಗೆ ರಿಷಿ ನೆಗೆಟಿವ್ ರೋಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು (best actor in gray role) ಸಹ ಪಡೆದಿದ್ದಾರೆ. 
 

Latest Videos

click me!