ಕಪಿಲ್‌ ಶರ್ಮಾ ಜೊತೆ ಗಣೇಶ್‌; ಶೀಘ್ರದಲ್ಲಿ ಗುಡ್‌ ನ್ಯೂಸ್‌ ಕೊಡಲಿರುವ ಗೋಲ್ಡನ್‌ ಸ್ಟಾರ್‌

Published : Feb 10, 2023, 12:31 PM IST

ಹಿಂದಿ ಜನಪ್ರಿಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿರುವ ಕನ್ನಡ ಸ್ಟಾರ್ ನಟ ಗಣೇಶ್. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಹೀರೋ...

PREV
17
ಕಪಿಲ್‌ ಶರ್ಮಾ ಜೊತೆ ಗಣೇಶ್‌; ಶೀಘ್ರದಲ್ಲಿ ಗುಡ್‌ ನ್ಯೂಸ್‌ ಕೊಡಲಿರುವ ಗೋಲ್ಡನ್‌ ಸ್ಟಾರ್‌

ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್‌ ನಟಿಸಿರುವ ಇನ್‌ಸ್ಟಾಗ್ರಾಂನಲ್ಲಿ ಹೊಸ ರೀಲ್ಸ್‌ ಅಪ್ಲೋಡ್ ಮಾಡಿದ್ದಾರೆ. ಮೇಕಪ್ ಮಾಡಿಸಿಕೊಂಡು ರಿಯಾಲಿಟಿ ಶೋನಲ್ಲಿ ಭಾಗಿಯಾಗುತ್ತಿದ್ದಾರೆ.

27

'ನನ್ನ ನೆಚ್ಚಿನ ಶೋನಲ್ಲಿ ಭಾಗಿಯಾಗುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ. ಥ್ಯಾಂಕ್ಸ್‌ ಕಪಿಲ್ ಶರ್ಮಾ ಸರ್ ನಿಮ್ಮ ಪ್ರೀತಿ ಮತ್ತು ಹಾರೈಕೆಗೆ' ಎಂದು ಗಣೇಶ್ ಬರೆದುಕೊಂಡಿದ್ದಾರೆ.

37

ಖ್ಯಾತ ನಿರೂಪಕ, ನಟ ಕಪಿಲ್‌ ಶರ್ಮಾ ಕಾರ್ಯಕ್ರಮದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಭಾಗವಹಿಸುತ್ತಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಗಣೇಶ್‌, ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ತಿಳಿಸುತ್ತೇನೆ ಎಂದಿದ್ದಾರೆ.

47

ಮುಂಬೈ ಪ್ರಯಾಣ ಮಾಡಿರುವುದು ಅಲ್ಲಿ ಮೇಕಪ್ ಮಾಡಿಕೊಂಡು ಕಾರಿನಲ್ಲಿ ಶೂಟಿಂಗ್‌ ಸೆಟ್‌ಗೆ ಪ್ರಯಾಣ ಮಾಡಿರುವುದು ಹಾಗೂ ಕಪಿಲ್ ಜೊತೆ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 

57

ಈವರೆಗೂ ಕಪಿಲ್ ಶರ್ಮಾ ಶೋನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪ್ರಣೀತಾ ಶುಭಾಷ್‌ ಮತ್ತು ರಶ್ಮಿಕಾ ಮಂದಣ್ಣ ನಂತರ ಭಾಗಿಯಾಗಿರುವುದ ಗಣೇಶ್. 

67

ಕನ್ನಡ ಚಿತ್ರವನ್ನು ಹಿಂದಿ ರಿಯಾಲಿಟಿ ಶೋನಲ್ಲಿ ಪ್ರಚಾರ ಮಾಡುತ್ತಿದ್ದಾರಾ ಅಥವಾ ಹಿಂದಿ ಚಿತ್ರಕ್ಕೆ ಸಹಿ ಮಾಡಿದ್ದಾರಾ ಎಂದು ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ಕಾಮೆಂಟ್‌ನಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. 

77

ಗಣೇಶ್ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಬಾನ ದಾರಿಯಲ್ಲಿ ಸಿನಿಮಾದ ಗೋಲ್ಡ್‌ ಫಿಶ್ ಹಾಡು ಬಿಡುಗಡೆಯಾಗಿದೆ. ಸಖತ್ ಡಿಫರೆಂಟ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Read more Photos on
click me!

Recommended Stories