ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರುತ್ತಾನೆ; ಧನ್ವೀರ್ 'ವಾಮನ' ಕೊನೆ ದಿನ

Published : Feb 08, 2023, 09:28 AM IST

ವಾಮನ ಸಿನಿಮಾ ಚಿತ್ರೀಕರಣ ಮುಗಿಸಿದ ನಟ ಧನ್ವೀರ್. ಶಂಕರ್ ರಾಮನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು...  

PREV
16
ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರುತ್ತಾನೆ; ಧನ್ವೀರ್ 'ವಾಮನ' ಕೊನೆ ದಿನ

ಧನ್ವೀರ್‌ ಗೌಡ ನಟನೆಯ ‘ವಾಮನ’ ಚಿತ್ರದ ಶೂಟಿಂಗ್‌ ಮುಕ್ತಾಯ ಆಗಿದೆ. ಶಂಕರ್‌ ರಾಮನ್‌ ನಿರ್ದೇಶನ, ಚೇತನ್‌ ಗೌಡ ನಿರ್ಮಾಣದ ಚಿತ್ರವಿದು.

26

ಚಿತ್ರೀಕರಣದ ಕೊನೆಯ ದಿನ ಮಾತನಾಡಿದ ನಿರ್ದೇಶಕ ಶಂಕರ್‌ ರಾಮನ್‌, ‘ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಇರುತ್ತಾನೆ. ಹಾಗೆ ಕೆಟ್ಟವನು ಇರುತ್ತಾನೆ. 

36

ಆದರೆ, ನಾವು ಏನಾಗಿರಬೇಕು ಎಂಬುದರ ಆಯ್ಕೆ ನಮ್ಮದಾಗಿರಬೇಕು. ಅದು ಹೇಗೆ ಮತ್ತು ಯಾಕೆ ಎಂಬುದನ್ನು ಹೇಳುವ ಸಿನಿಮಾ ಇದು. ಎಲ್ಲರ ಬೆಂಬಲದಿಂದ ಚಿತ್ರೀಕರಣ ಮುಗಿದಿದೆ’ ಎಂದರು.

46


ನಿರ್ಮಾಪಕ ಚೇತನ್‌ ಗೌಡ, ‘ಚಿತ್ರರಂಗದಲ್ಲಿ ನಾವು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಉದ್ದೇಶದಿಂದ ಬಂದಿದ್ದೇವೆ. ನಮ್ಮ ಮೊದಲ ಪ್ರಯತ್ನಕ್ಕೆ ಬೆಂಬಲ ಕೊಡಿ’ ಎಂದರು. 

56

‘ಇಂಥದ್ದೊಂದು ಒಳ್ಳೆಯ ತಂಡದ ಜತೆಗೆ ನೋಡುವಂತಹ ಕತೆಯಲ್ಲಿ ನಟಿಸಿದ್ದು ಖುಷಿ ಆಗುತ್ತಿದೆ’ ಎಂದು ಧನ್ವೀರ್‌ ಗೌಡ ಹೇಳಿಕೊಂಡರು. ಮಹೇಂದ್ರ ಸಿಂಹ ಕ್ಯಾಮೆರಾ, ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ.

66

 ನೃತ್ಯ ನಿರ್ದೇಶಕ ಭೂಷಣ್‌, ಸಂಪತ್‌, ಆದಿತ್ಯ ಮೆನನ್‌, ಅಚ್ಯುತ್‌ ಕುಮಾರ್‌, ಅವಿನಾಶ್‌, ತಾರಾ, ಶಿವರಾಜ್‌ ಕೆ ಆರ್‌ ಪೇಟೆ, ಪೆಟ್ರೋಲ… ಪ್ರಸನ್ನ, ಕಾಕ್ರೋಚ್‌ ಸುಧಿ ಪಾತ್ರಧಾರಿಗಳು.

Read more Photos on
click me!

Recommended Stories