ಪ್ರಪಂಚದಲ್ಲಿರುವ ಅದ್ಭುತವಾದ ವ್ಯಕ್ತಿಗೆ 22 ವರ್ಷಗಳ ಹಿಂದೆ ನಾನು 'I do' ಎಂದು ಹೇಳಿದೆ. ಅಲ್ಲಿಂದ ನಾವು ಸಾಕಷ್ಟು ನಗು, ಸಂತೋಷ ಮತ್ತು ಪ್ರೀತಿಯನ್ನು ನೋಡಿದ್ದೀವಿ.
ಅಷ್ಟೇ ಅಲ್ಲದೆ ನಾವು ಸಾಕಷ್ಟು ಚಾಲೆಂಜ್‌ಗಳನ್ನು ಎದುರಿಸಿದ್ದೀವಿ, ಕಷ್ಟ ಮತ್ತು ನೋವುಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೀವಿ.
ಏನೇ ಆದರೂ ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಂಡು ಕೇರ್ ಮಾಡಿಕೊಂಡು ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದೀನಿ ಎಂದು ಆದಿ ಲೋಕೇಶ್ ಬರೆದುಕೊಂಡಿದ್ದಾರೆ.
ನೀನು ನನ್ನ ಬೆಸ್ಟ್‌ಫ್ರೆಂಡ್, ನನ್ನ ಸೋಲ್‌ಮೇಟ್, ಮತ್ತು ನಾನು ಮಾಡುವ ಎಲ್ಲಾ ಕೆಲಸಗಳಿಗೂ ಪಾರ್ಟನರ್ ಆಗಿರುವೆ ಎಂದಿದ್ದಾರೆ ಆದಿ.
ನಾವಿಬ್ಬರು ಒಟ್ಟಿಗೆ ಜೀವನ ಕಟ್ಟಿಕೊಂಡಿರುವ ಕ್ಷಣ ನೆನಪಿಸಿಕೊಂಡರೆ ಖುಷಿಯಾಗುತ್ತದೆ. ನನ್ನ ಮುಖದಲ್ಲಿ ನಗು ಇರುವುದಕ್ಕೆ ನೀನೇ ಕಾರಣ.
ಹ್ಯಾಪಿ 22 ಆನಿವರ್ಸರಿ ಮೈ ಲವ್. ಯು ಆರ್ ಮೈ Everything ಎಂದು ಆದಿ ಲೋಕೇಶ್ ಇನ್‌ಸ್ಟಾಗ್ರಾಂನಲ್ಲಿ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Vaishnavi Chandrashekar