ಕರ್ನಾಟಕದ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ನಿರ್ಮಾಪಕಿ ಹಾಗೂ ಉದ್ಯಮಿ ಅಶ್ವಿನಿ ರೇವಂತ್ ಹೆಸರಿನಲ್ಲಿ ಅಭಿಮಾನಿಗಳು ಫ್ಯಾನ್ ಪೇಜ್ ಓಪನ್ ಮಾಡಿದ್ದಾರೆ.
ಅಪ್ಪು ನಮ್ಮನ್ನು ಅಗಲಿದ ನಂತರ ಯಾವುದೇ ಸಿನಿಮಾ ಕಾರ್ಯಕ್ರಮ, ಓಪನಿಂಗ್ ಅಥವಾ ಈವೇಂಟ್ ಇದ್ದಲ್ಲಿ ಅಶ್ವಿನಿ ಪುನೀತ್‌ರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ.
ಹೀಗೆ ಸಾವಿರಾರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅಶ್ವಿನಿ ಅವರು ಸಾಮಾನ್ಯವಾಗಿ ಟ್ರೆಡಿಷನಲ್ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ ಅದರಲ್ಲೂ ಪ್ರಮುಖವಾಗಿ ಸೀರೆ.
ತುಂಬಾ ಸಿಂಪಲ್ ಸೀರೆಗಳಲ್ಲಿ ಕಾಣಿಸಿಕೊಳ್ಳುವ ದೊಡ್ಡಮನೆ ಸೊಸೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೋಟಿ ಇದ್ದರೂ ಆಡಂಭರವಿಲ್ಲ ಎನ್ನುತ್ತಾರೆ.
ಸೀರೆಯಲ್ಲಿ ಎಷ್ಟು ಸೌಂದರ್ಯ ಇದೆ ಅಂತ ಅಶ್ವಿನಿ ಮೇಡಂ ನೋಡಿ ಅನ್ಸುತ್ತೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಇದರಿಂದ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದೆ.
ಅಪ್ಪಟ ಪುನೀತ್ ಅಭಿಮಾನಿಗಳು ಅಶ್ವಿನಿ ಅವರ ರೀತಿ ಸೀರೆನೇ ಬೇಕು ಎಂದು ಹುಡುಕಿದ್ದಾರೆ. ಯಾವುದೆ ಓವರ್ ಡಿಸೈನ್ ಇರುವುದಿಲ್ಲ ಸಿಂಪಲ್ ಕಲರ್ ಸಿಂಪಲ್ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ.