Haldi Ceremony: ತರುಣ್ ಸುಧೀರ್‌-ಸೋನಲ್​ ಮೊಂತೆರೋ ಮದುವೆ ಸಮಾರಂಭ ಶುರು: ಹಳದಿ ಶಾಸ್ತ್ರದ ಸ್ಟೈಲಿಶ್ ಫೋಟೊಸ್ ವೈರಲ್!

First Published | Aug 9, 2024, 11:18 PM IST

ತರುಣ್ ಸುಧೀರ್‌ ಹಾಗೂ ಸೋನಲ್​ ಮೊಂತೆರೋ ಮನೆಯಲ್ಲಿ ಮದುವೆ ರಂಗು ರಂಗೇರಿದ್ದು, ಹಳದಿ ಶಾಸ್ತ್ರದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ನ ನಿರ್ದೇಶಕ ತರುಣ್ ಸುಧೀರ್‌ ಹಾಗೂ ಸೋನಲ್​ ಮೊಂತೆರೋ ಮದುವೆ ಅದ್ದೂರಿಯಾಗಿಯೇ ನೆರವೇರಲಿದೆ. ಆಗಸ್ಟ್ 10 ಮತ್ತು 11 ರಂದು ನಡೆಯುವ ಈ ಮದುವೆಗೆ ಈಗಾಗಲೇ ತರುಣ್ ಎಲ್ಲರನ್ನೂ ಆಹ್ವಾನಿಸಿದ್ದಾರೆ.

ಇದೀಗ ತರುಣ್ ಸುಧೀರ್‌ ಮತ್ತು ಸೋನಲ್​ ಮೊಂತೆರೋ ಜೋಡಿ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ವಿಶೇಷವಾಗಿ ನಟ, ನೆನಪಿರಲಿ ಪ್ರೇಮ್ ಹಾಗೂ ಶರಣ್ ಸೇರಿದಂತೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

Tap to resize

ತರುಣ್ ಮತ್ತು ಸೋನಲ್‌ ಹಳದಿ ಕಾರ್ಯಕ್ರಮದಲ್ಲಿ ಸಖತ್ತಾಗಿ ಮಿಂಚಿದ್ದು, ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಇಬ್ಬರೂ ಹಳದಿ ಶಾಸ್ತ್ರದ ನೀರಲ್ಲಿ ಮಿಂದೆದ್ದಿದ್ದಾರೆ.

ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲಿರುವ ತರುಣ್‌ ಮತ್ತು ಸೋನಲ್‌ ಜೋಡಿ ತಮ್ಮ ಸುಂದರ ಪೋಟೋಶೂಟ್‌ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಸೋನಲ್, ತರುಣ್ ಇವರಿಬ್ಬರು ಪರಸ್ಪರ ರಿಲೇಶನ್‌ಶಿಪ್‌ನಲ್ಲಿದ್ದಾರೆ ಮತ್ತು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ತರುಣ್‌ ಹಾಗೂ ಸೋನಲ್‌ ಈ ವಿಷಯವನ್ನು ಅಧಿಕೃತಗೊಳಿಸಿ, ಮದುವೆ ದಿನಾಂಕವನ್ನು ಈ ಹಿಂದೆ ತಿಳಿಸಿದ್ದರು.

ತರುಣ್, ಸೋನಲ್ ಪ್ರೇಮಕ್ಕೆ ಕಾರಣವಾಗಿದ್ದು ಸದ್ಯ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇರುವ ದರ್ಶನ್. ನಾವಿಬ್ಬರು ಮೊದಲು ಪರಸ್ಪರ ಪರಿಚಯರಾಗಿದ್ದು, ರಾಬರ್ಟ್‌ ಸಿನಿಮಾ ಸಮಯದಲ್ಲಿ. ಆಗ ಸೆಟ್‌ನಲ್ಲಿಅನೇಕರು ನಮ್ಮಿಬ್ಬರ ಕಾಲೆಳೆಯುತ್ತಿದ್ದರು ಎಂದು ಸೋನಾಲ್ ಹೇಳಿದ್ದರು.

ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ನಟಿ ಸೋನಲ್ ಮೊಂತೆರೋಗೆ 29 ವರ್ಷ ವಯಸ್ಸಾಗಿದೆ. ಇನ್ನು ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರುವುದರಿಂದ ವಯಸ್ಸಿನ ಅಂತರ ಲೆಕ್ಕಕ್ಕೆ ಬರುವುದಿಲ್ಲ.

ತರುಣ್ ಮತ್ತು ಸೋನಲ್‌ ಮದುವೆ ಆಗಸ್ಟ್ 10 ಮತ್ತು 11 ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ನಾಳೆ ಸಂಜೆ ಆರತಕ್ಷತೆ ಕಾರ್ಯಕ್ರಮ ಹಾಗೂ ನಾಡಿದ್ದು ದಾರೆ ಮಹೂರ್ತ ಅದ್ದೂರಿಯಾಗಿ ನಡೆಯಲಿದೆ.

Latest Videos

click me!