ಕೆಂಪು, ಹಳದಿ ಲಂಗ ದಾವಣಿಯಲ್ಲಿ ಶ್ರೀಲೀಲಾ…. ಅಂದವನ್ನೇಲ್ಲಾ ಸೇರಿ ಮಾಡಿದ ಬೊಂಬೆ ಅಂತಿದ್ದಾರೆ ಫ್ಯಾನ್ಸ್

Published : Jan 27, 2024, 05:37 PM IST

ಕನ್ನಡ ಮತ್ತು ತೆಲುಗು ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಪೋಸ್ಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.   

PREV
18
ಕೆಂಪು, ಹಳದಿ ಲಂಗ ದಾವಣಿಯಲ್ಲಿ ಶ್ರೀಲೀಲಾ…. ಅಂದವನ್ನೇಲ್ಲಾ ಸೇರಿ ಮಾಡಿದ ಬೊಂಬೆ ಅಂತಿದ್ದಾರೆ ಫ್ಯಾನ್ಸ್

ಸೌತ್ ಇಂಡಿಯಾ ಸಿನಿಮಾಗಳ, ಅದರಲ್ಲೂ ತೆಲುಗು ಸಿನಿಮಾದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಶ್ರೀಲೀಲಾ (Sreeleela) ಸೋಶಿಯಲ್ ಮೀಡಿಯಾದಲ್ಲಿ ಟ್ರೆಡಿಶನಲ್ ಲುಕ್ ನಲ್ಲಿ ಫೋಸ್ ಕೊಟ್ಟಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. 
 

28

ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಶ್ರೀಲೀಲಾ, ಹೆಚ್ಚಾಗಿ ಮಾಡರ್ನ್ (Modern), ಟ್ರೆಡೀಶನಲ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಕೆಂಪು ಮತ್ತು ಹಳದಿ ಬಣ್ಣದ ಲಂಗ ದಾವಣಿ ಹಾಕಿ ಸಖತ್ತಾಗಿ ಮಿಂಚಿದ್ದಾರೆ. 
 

38

ಕೆಂಪು ಬಣ್ಣದ ಬಾಟಿಕ್ ಲೆಹೆಂಗಾದ ಜೊತೆ ಹಳದಿ ಬಣ್ಣದ ದಾವಣಿ ಧರಿಸಿದ್ದಾರೆ. ಇದರ ಬಾರ್ಡರ್ ಪೂರ್ತಿಯಾಗಿ ವಿವಿಧ ರೀತಿಯ ಬಣ್ಣ ಬಣ್ಣದ ಆರ್ಟ್ ಗಳನ್ನು ಕಾಡಬಹುದು. ಈ ಡಿಸೈನರ್ ವೇರ್ ನಲ್ಲಿ (desinger wear) ಲೀಲಾ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. 

48

ಕನ್ನಡ ಚಿತ್ರ ಕಿಸ್ ಮೂಲಕ ನಟನೆ ಆರಂಭಿಸಿದರೂ ಸದ್ಯ ತೆಲುಗು ಸಿನಿಮಾಗಳಲ್ಲಿ  (telugu cinema) ಭರ್ಜರಿಯಾಗಿ ಮಿಂಚುತ್ತಿರುವ ಶ್ರೀಲೀಲಾಗೆ ಕನ್ನಡ, ತೆಲುಗಿನ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ದೇವರೇ ಹೇಗೆ ಇಷ್ಟೊಂದು ಅಂದವಾಗಿ ಕಾಣಿಸಿಕೊಳ್ಳೋಕೆ ಸಾಧ್ಯ ಎಂದು ಹೇಳಿದ್ದಾರೆ. 
 

58

ಮತ್ತೊಬ್ಬರು ಕಾಮೆಂಟ್ ಮಾಡಿ ಹಳದಿ ಹಸಿರು ಉಡುಗೆ ರಾಜಕುಮಾರಿ ಬೊಂಬೆ ಮಿಶ್ರ ಬಣ್ಣದ ಉಡುಗೆ ರಾಜಕುಮಾರಿ, ಬೊಂಬೆ ಸಿಂಡ್ರೆಲ್ಲಾ ಆಯಿತು.  ದೃಷ್ಟಿ ಆಗುತ್ತೆ ಜೋಪಾನ. ನಿಮ್ಮನ್ನ ನೋಡುವಾಗ ಮಿಕ್ಸ್ಡ್ ಫ್ರುಟ್ಸ್ ಐಸ್ ಕ್ರೀಂ ತರ ಕಲರ್ ಫುಲ್ ಆಗಿ ಕಾಣಿಸುತ್ತೀರಿ ಎಂದಿದ್ದಾರೆ. 
 

68

ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ ಸ್ವರ್ಗಲೋಕದಿಂದ ಏಂಜಲ್ ಗಳು (angel) ಭೂಮಿ ಮೇಲೆ ನಡೆದು ಬಂದಿದ್ದಾರೆ ಅನ್ನೋದಕ್ಕೆ ನೀನೆ ಉದಾಹರಣೆ ಎಂದು, ಕಿನ್ನರಿಗೆ ಹೋಲಿಕೆ ಮಾಡಿದ್ದಾರೆ. 
 

78

ಸ್ಯಾಂಡಲ್ ವುಡ್ ನ (Sandalwood) ಕಿಸ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ನಂತರ ಭರಾಟೆ, ಬೈ ಟು ಲವ್, ಜೇಮ್ಸ್ ಚಿತ್ರದಲ್ಲಿ ನಟಿಸಿದ್ದರು, ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಲ್ಪಾವಧಿಯಲ್ಲೇ ಭರ್ಜರಿ ಯಶಸ್ವಿ ಪಡೆದರು. 
 

88

ತಮ್ಮ ಸೌಂದರ್ಯ, ಲುಕ್ ಮತ್ತು ಅದ್ಭುತ ಡ್ಯಾನ್ಸ್ ನಿಂದಾಗಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದಿರುವ ಶ್ರೀಲೀಲಾ. ತೆಲುಗಿನಲ್ಲಿ ಪೆಲ್ಲಿ ಸಂಡಾಡಿ, ಧಮಾಕ, ಸ್ಕಂದ, ಭಗವಂತ ಕೇಸರಿ, ಆದಿ ಕೇಶವ, ಎಕ್ಸ್ ಟ್ರಾ ಆರ್ಡಿನರಿ ಮ್ಯಾನ್ ಮೊದಲಾದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸದ್ದು ಮಾಡ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories