ಕಿರುತೆರೆ ಜೋಡಿ ಐಶ್ವರ್ಯ- ಅರುಣ್ ನಿಶ್ಚಿತಾರ್ಥ; ಅಯೋಧ್ಯೆಯಲ್ಲಿ ಮದುವೆ!

First Published | Jan 27, 2024, 3:31 PM IST

 ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಅಯೋಧ್ಯೆಯಲ್ಲಿ ಮದುವೆಯಾಗಲು ಮುಂದಾದ ಕಿರುತೆರೆ ಸೆಲೆಬ್ರಿಟಿ ಜೋಡಿ..

ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್‌,ಧಾರಾವಾಹಿ ಮತ್ತು ನಿರೂಪಣೆ ಮೂಲಕ ಗುರುತಿಸಿಕೊಂಡಿ ಐಶ್ವರ್ಯ ಗೌಡ ಮತ್ತು ನಟ ಅರುಣ್ ರಾಮ್ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

'ನಾನು ರಾಮ್‌ನ ಭಕ್ತ ಆಗಿರುವ ಕಾರಣ ಅಯೋಧ್ಯೆ ರಾಮ ಮಂದಿರ ಪ್ರತಿಷ್ಥಾಪನೆ ದಿನವೇ ನಿಶ್ಚಿತಾರ್ಥ ಮಾಡಿಕೊಂಡೆವು'ಎಂದು ಅರುಣ್ ಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

 'ನಿಶ್ಚಿತಾರ್ಥ ಕಾರ್ಯಕ್ರಮ ಸರಳವಾಗಿತ್ತು. ಸುಮಾರು 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೀವಿ. ಗೆಳೆಯರ ಬಳಗ ನಾಟಕ ಕಂಪನಿಯನ್ನು ಸೇರಿಕೊಂಡಾಗ ಇಬ್ಬರು ಸ್ನೇಹಿತರಾಗಿದ್ದು'

'ಇಷ್ಟ ಪಡಲು ಶುರು ಮಾಡಿದಾಗ ನಾವು ಚಿಕ್ಕವರು ಹೀಗಾಗಿ ವೃತ್ತಿ ಬದುಕಿನ ಮೇಲೆ ಹೆಚ್ಚಿಗೆ ಗಮನ ಹರಿಸಿದೆವು. ನಮ್ಮ ಕಾಲಿನ ಮೇಲೆ ನಾವು ನಿಂತಿಕೊಳ್ಳುವ ನಿರ್ಧಾರ ಮಾಡಿದೆವು'

'ನಾವು ಮದುವೆಯಾಗಲು ನಿರ್ಧಾರ ಮಾಡಿದಕ್ಕೆ ಫ್ಯಾಮಿಲಿಯಲ್ಲಿ ಪ್ರತಿಯೊಬ್ಬರೂ ಖುಷಿಯಾಗಿದ್ದಾರೆ. ಐಶ್ವರ್ಯ ತುಂಬಾ ಒಳ್ಳೆ ಹುಡುಗಿ. ನಾನು ಹೋಟೆಲ್‌ ಬ್ಯುಸಿನೆಸ್ ಮಾಡುತ್ತಿರುವೆ, ನನ್ನ ಜೀವನ ಎಷ್ಟು ಹೆಕ್ಟಿಕ್‌ ಆಗಿರುತ್ತದೆ ಎಂದು ಆಕೆಗೆ ಗೊತ್ತಿದೆ' 

'ಈ ವರ್ಷದ ಕೊನೆಯಲ್ಲಿ ಅಯೋಧ್ಯೆಯಲ್ಲಿ ನಾವು ಮದುವೆಯಾಗಬೇಕು ಎಂದು ತೀರ್ಮಾನ ಮಾಡಿದ್ದೀವಿ. ಇನ್ನು 6 ತಿಂಗಳಲ್ಲಿ ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ ಎಂದು ಅರುಣ್ ಹೇಳಿದ್ದಾರೆ.

Latest Videos

click me!