ಅಮ್ಮನಾದರೂ ಬಳುಕುವ ಬಳ್ಳಿಯಾದ ಪ್ರಣಿತಾ ಸುಭಾಷ್: ಮಿಲ್ಕಿ ಬ್ಯೂಟಿ ಅಂದ ನೋಡಿ ಫ್ಯಾನ್ಸ್‌ ಹೀಗಾ ಅನ್ನೋದು!

First Published | Jan 26, 2024, 1:00 AM IST

ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ ಪ್ರಣಿತಾ ಸುಭಾಷ್‌ ಪ್ರೆಗ್ನೆನ್ಸಿ ಬಳಿಕ ಸಹ ಫಿಟ್ನೆಸ್ ಕಾಪಾಡಿಕೊಂಡು ಬರುತ್ತಿದ್ದು, ಈಕೆ ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ. ಈ ನಟಿ ಹೊಸ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
 

ಸ್ಯಾಂಡಲ್‌ವುಡ್‌ ಬ್ಲಾಕ್‌ಬಸ್ಟರ್‌ 'ಪೋರ್ಕಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿನಯ ಮತ್ತು ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳು ಗಳಿಸಿದ್ದಾರೆ. ಇತ್ತೀಚಿಗೆ ಪ್ರಣಿತಾ ಶೇರ್‌ ಮಾಡಿರುವ ಫೋಟೋಗಳು ನೆಟಿಜನ್‌ಗಳನ್ನು ಆಕರ್ಷಿಸುತ್ತಿದ್ದು, ಅಮ್ಮನಾದರೂ ಸಹ ಅಂದ ಕಡಿಮೆಯಾಗಿಲ್ಲ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.

ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇದೀಗ ಹೊಸ ಫೋಟೊಶೂಟ್ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ. ಬಳುಕುವ ಬಳ್ಳಿಯಂತಾಗಿರುವ ನಟಿಯನ್ನು ಕಂಡು ಫ್ಯಾನ್ಸ್‌ ಫಿದಾ ಆಗಿದ್ದಾರೆ. 

Tap to resize

ಪ್ರಣೀತಾ ಸುಭಾಷ್ ಹಂಚಿಕೊಂಡರುವ ಫೋಟೊದಲ್ಲಿ  ನೆಕ್ ಟಾಪ್ ಹಾಗೂ ಹೂವಿನ ಶಿಮ್ಮೆರ್ ಡಿಸೈನರ್ ಮಿಡಿಯನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ. ಇದರ ಜೊತೆ ಒಂದು ಮಗುವಿನ ತಾಯಿಯಾಗಿದ್ದರೂ ತಾನೆಷ್ಟು ಫಿಟ್ ಆಗಿದ್ದೇನೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. 

ನಟಿ ಪ್ರಣೀತಾ ಸುಭಾಷ್ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಬಳಿಕ ಪ್ರೆಗ್ನೆನ್ಸಿ, ಮಗು ಅಂತ ಚಿತ್ರರಂಗದಿಂದ ದೂರುವೇ ಉಳಿದು ಬಿಟ್ಟಿದ್ದರು. ಇತ್ತೀಚೆಗೆ ಈ ನಟಿ ಮಲಯಾಳಂನ 'ಥಂಕಮಣಿ' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಪ್ರಣಿತಾ ಸುಭಾಷ್‌ ಈಗಾಗಲೇ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯುಸಿಯಾಗುವ ಸಾಧ್ಯತೆಯಿದೆ. ಇದೇ ವೇಳೆ ಗ್ಲಾಮರಸ್ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಈ ಫೋಟೊಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಚಂದನವನದ ಸುಂದರಿ ಪ್ರಣಿತಾ ಪ್ರೆಗ್ನೆನ್ಸಿ ಬಳಿಕ ಕೂಡ ಫಿಟ್ನೆಸ್ ಕಾಪಾಡಿಕೊಂಡು ಬಂದಿರುವುದಕ್ಕೆ, ಈಕೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬಂದಿರುವ  ಫೋಟೊನೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕಳೆದ ಮೂರು ವರ್ಷಗಳಿಂದ ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿಯೀಗ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.

ಕನ್ನಡದ ಮಿಲ್ಕಿ ಬ್ಯೂಟಿ ಪ್ರಣಿತಾ ನಟಿಸಿರುವ 'ರಾಮನ ಅವತಾರ' ರಿಲೀಸ್ ಆಗಬೇಕಿದೆ. 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಜೊತೆ ಪ್ರಣೀತಾ ನಟಿಸಿದ್ದಾರೆ. ಈ ನಟಿ ದರ್ಶನ್ ಜೊತೆಗೆ 'ಪೊರ್ಕಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಅಲ್ಲಿಂದ ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು.

ಇದೀಗ ಪ್ರಣೀತಾ 'ಥಂಕಮಣಿ' ಮೂಲಕ ಸಿನಿಮಾರಂಗ ಮತ್ತೆ ಕ್ಯಾಮ್ ಬ್ಯಾಕ್ ಮಾಡುತ್ತಿದ್ದು, ಆಗಾಗ ಫುಲ್ ಸ್ಲಿಮ್ ಆಗಿರುವ ಫೋಟೊಗಳನ್ನು ಶೇರ್ ಮಾಡುತ್ತಾ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.  

Latest Videos

click me!