Published : Apr 03, 2025, 04:33 PM ISTUpdated : Apr 03, 2025, 05:01 PM IST
ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ..’ ಹಾಡಿಗೆ ಬಿಡುಗಡೆ ಬೆನ್ನಲ್ಲೇ ಭರ್ಜರಿ ರೆಸ್ಪಾನ್ಸ್. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ 78 ಲಕ್ಷ ವೀಕ್ಷಣೆ. ಪ್ರೇಮ್ ಬರೆದ ಈ ಹಾಡು ಹಾಡಿದ್ದು ಜನಪ್ರಿಯ ಗಾಯಕ ಮಿಖಾ ಸಿಂಗ್. ಹಾಡಿಗೆ ಧ್ರುವ ಸರ್ಜಾ ಜತೆ ನಟಿ ರೀಶ್ಮಾ ನಾಣಯ್ಯ ಅದ್ಭುತ ಸ್ಟೆಪ್.
ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ..’ ಹಾಡು ಬಿಡುಗಡೆಯಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ 7.8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ನಿರ್ದೇಶಕ ಪ್ರೇಮ್ ರಚಿಸಿರುವ ಈ ಹಾಡನ್ನು ಜನಪ್ರಿಯ ಗಾಯಕ ಮಿಖಾ ಸಿಂಗ್ ಹಾಡಿದ್ದಾರೆ.
25
ನಟ ಧ್ರುವ ಸರ್ಜಾ ಮಾತನಾಡಿ, ‘ಆ ಶಿವನ ಅನುಗ್ರಹದಿಂದ ಶಿವ ಶಿವ ಸಾಂಗ್ ಹಿಟ್ ಆಗಿದೆ. 6 ಲಕ್ಷಕ್ಕಿಂತ ಹೆಚ್ಚಾಗಿ ರೀಲ್ಸ್ ಆಗಿದೆ. ನಾಯಕಿ ರೀಶ್ಮಾ ನಾಣಯ್ಯ ಅದ್ಭುತವಾದ ಡಾನ್ಸರ್, ಅವರಿಗೆ ಮ್ಯಾಚ್ ಮಾಡಲು ನಾನೂ ಟ್ರೈ ಮಾಡಿದ್ದೇನೆ’ ಎಂದರು.
35
ನಿರ್ದೇಶಕ ಪ್ರೇಮ್, ‘70ರ ದಶಕದಲ್ಲಿ ನಡೆಯೋ ಕಾಳಿದಾಸನ ರಾ ಲವ್ ಸ್ಟೋರಿ ಇದು. ಕಾಳಿದಾಸ ಎಷ್ಟು ಮುಗ್ಧನೋ ಅಷ್ಟೇ ರಾ ಆಗಿರುತ್ತಾನೆ. ನೈಜ ಘಟನೆಗಳ ಜತೆಗೆ ಮೂಡಿ ಬರುತ್ತಿರುವ ಗ್ಯಾಂಗ್‌ಸ್ಟರ್ ಕತೆ ಈ ಚಿತ್ರದಲ್ಲಿದೆ’ ಎಂದರು.
45
ಧ್ರುವ ಸರ್ಜಾ ಪಾತ್ರದ ಸುತ್ತ ಕೇಂದ್ರೀಕೃತವಾಗಿರುವ ಕೆಡಿ ಚಿತ್ರದ ಭಾವನಾತ್ಮಕ ಕಥಾಹಂದರವು 70 ಮತ್ತು 80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೆ ತಡ ಮಾಡುವುದಿಲ್ಲ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.
55
ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ರೀಶ್ಮಾ ನಾಣಯ್ಯ, ಆನಂದ್ ಆಡಿಯೋ ಸಂಸ್ಥೆಯ ಶಾಮ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದರು. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಚಿತ್ರವಿದು.