ಕಲರ್‌ಫುಲ್ ಸೀರೆ, ತೋಳಿಲ್ಲದ ಬ್ಲೌಸ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ: ಕಿವಿ ಹುಷಾರು ತಾಯಿ ಎಂದ ಫ್ಯಾನ್ಸ್‌!

First Published | Dec 23, 2023, 9:40 AM IST

ಕಿರುತೆರೆಯಲ್ಲಿ ಮಿಂಚು ಹರಿಸಿ, ಸದ್ಯ ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಈ ನಟಿ, ಸರಣಿ ಫೋಟೋ ಹಂಚಿಕೊಳ್ಳುವುದರಲ್ಲಿ ಸದಾ ಮುಂದು. 

ಜೊತೆ ಜೊತೆಯಲಿ ಸೀರಿಯಲ್‌ ಮೂಲಕವೇ ಇಡೀ ನಾಡಿಗೆ ಪರಿಚಿತರಾದವರು ಮೇಘಾ ಶೆಟ್ಟಿ. ಅನು ಸಿರಿಮನೆ ಹೆಸರಿನ ಪಾತ್ರ ದೊಡ್ಡ ಮಟ್ಟದ ಯಶಸ್ಸಿನ ಜತೆಗೆ ಹಲವು ಅವಕಾಶಗಳನ್ನೂ ತೆರೆದಿಟ್ಟಿತು. 

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಮೇಘಾ ಶೆಟ್ಟಿ, ಬಗೆಬಗೆ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಸ್ಲೀವ್‌ ಲೆಸ್ ಬ್ಲೌಸ್‌ನಲ್ಲಿ ಕಲರ್‌ಫುಲ್ ಸೀರೆಯಲ್ಲಿ ಮಿಂಚಿದ್ದಾರೆ. ಫೋಟೋಸ್ ನೋಡಿ ಫ್ಯಾನ್ಸ್‌ ಹುಬ್ಬೇರಿಸಿದ್ದಾರೆ.

Tap to resize

ಇತ್ತೀಚಿನ ಕೆಲ ದಿನಗಳಿಂದ ಕಲರ್‌ಫುಲ್‌ ಫೋಟೋಗಳ ಮೂಲಕವೇ ಮೇಘಾ ಶೆಟ್ಟಿ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಕಲರ್‌ಫುಲ್ ಸೀರೆಯಲ್ಲಿ ಗಮನ ಸೆಳೆದಿದ್ದಾರೆ. ನೆಟ್ಟಿಗರಿಂದಲೂ ಮಹಾರಾಣಿ, ದೇವತೆ ಎಂಬ ಕಾಮೆಂಟ್‌ಗಳು ಬಂದಿವೆ.

ಮೇಘಾ ಶೆಟ್ಟಿ ಕಲರ್‌ಫುಲ್ ಸೀರೆಯಲ್ಲಿ ಮಿಂಚಿದ್ದು, ಸರಳವಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಜೊತೆಗೆ ಇಂದು ಕೈಗೆ ಬಳೆ ತೊಟ್ಟರೆ, ಇನ್ನೊಂದು ಕೈ ಬಳೆಗಳನ್ನು ತೊಟ್ಟಿಲ್ಲ. ಜತೆಗೆ ಹಣೆಗೆ ಬಿಂದಿಯನ್ನು ಸಹ ಇಟ್ಟಿಲ್ಲ. ವಿಶೇಷವಾಗಿ ಅವರು ಕಿವಿಗೆ ದೊಡ್ಡದಾಗ ಓಲೆ ಜುಮುಕಿಯನ್ನು ಧರಿಸಿರುವುದು ಹೈಲೈಟ್ ಆಗಿದೆ.

ಮೇಘಾ ಶೆಟ್ಟಿಯನ್ನು ನೋಡಿದ ನೆಟ್ಟಿಗರು, ಸೀರೆಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ ಟೆಂಪ್ರೆಚರು, ಬ್ಯೂಟಿಫುಲ್ ಬಂಗಾರ, ಜಸ್ಟ್‌ ಲೈಕ್‌ ಅ ವಾವ್, ಕಿವಿ ಹುಷಾರು ತಾಯಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ನಟಿ ಮೇಫಾ ಶೆಟ್ಟಿ ಅಭಿನಯದ ತ್ರಿಬಲ್‌ ರೈಡಿಂಗ್‌, ದಿಲ್‌ಪಸಂದ್‌ ಸಿನಿಮಾ ಈಗಾಗಲೇ ತೆರೆಕಂಡು, ಇದೀಗ ಗ್ರಾಮಾಯಣ, ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ ಸಿನಿಮಾ ಕೆಲಸಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. 

ಗ್ರಾಮಾಯಣ ಸಿನಿಮಾಗೆ ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್‌ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದಾರೆ. ಇನ್ನು ಮೇಘಾ ಶೆಟ್ಟಿ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 11 ಲಕ್ಷಕ್ಕೂಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. 

Latest Videos

click me!