ರೆಡ್ ಡ್ರೆಸ್​ನಲ್ಲಿ ಕಾಟೇರ ಕ್ವೀನ್: ಆರಾಧನಾ ಬೋಲ್ಡ್ ಅವತಾರಕ್ಕೆ ಅರ್ಧಂಬರ್ಧ ಬಟ್ಟೆಗಳನ್ನು ಹಾಕಬೇಡಿ ಎಂದ ಫ್ಯಾನ್ಸ್‌!

First Published | Dec 22, 2023, 9:03 AM IST

ಸ್ಯಾಂಡಲ್‌ವುಡ್‌ನ ದರ್ಶನ್‌ ಹೀರೋಯಿನ್ ಆರಾಧನಾ ರಾಮ್ ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಆರಾಧನಾ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಇನ್ನೇನು ತೆರೆಗೆ ಎಂಟ್ರಿಯಾಗಲಿದೆ. ಈ ಸಿನಿಮಾದ ಮೂಲಕ ಕೆಲ ನಟಿಯರು ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಅವರಲ್ಲಿ ಒಬ್ಬರು ಆರಾಧನಾ ರಾಮ್.​

ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ದಿವಂಗತ ರಾಮ್ ಹಾಗೂ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ. ಇವರು ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕಾಟೇರದ ಮೂಲಕ ಸಿನಿಲೋಕಕ್ಕೆ ಕಾಲಿಡುತ್ತಿದ್ದಾರೆ. ​

Tap to resize

ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರು ಕೆಂಪು ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಆರಾಧನಾ ಮಾದಕ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. 

ರಾಧನಾ ಫೋಟೋಸ್‌ಗೆ ನೆಟ್ಟಿಗರು, ದರ್ಶನ್‌ ನಾಯಕಿ ಪಸಂದಾಗವ್ಳೆ, ಇಂಗ್ಲಿಷ್ ಜೊತೆಗೆ ಕನ್ನಡ ಬಳಸಿ ಆರಾಧನ ರಾಮು, ದಯವಿಟ್ಟು ಅರ್ಧಂಬರ್ಧ ಬಟ್ಟೆಗಳನ್ನು ಹಾಕಬೇಡಿ ಸೇರಿದಂತೆ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಕನ್ನಡಿಗರ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ, ಅಮ್ಮನನ್ನೇ ಮೀರಿಸುವಷ್ಟು ಸೌಂದರ್ಯವತಿ. ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ​, ಮೊದಲ ಸಿನಿಮಾದಲ್ಲೇ ದರ್ಶನ್ ಅವರ ಜೊತೆ ಅಭಿನಯಿಸುವ ಅವಕಾಶ ಪಡೆದಿದ್ದಾರೆ.

ಕಾಟೇರ ಚಿತ್ರದ ‘ಪಸಂದಾಗವ್ನೆ’ ಎಂಬ ಸಾಂಗ್‌ನಲ್ಲಿ ಆರಾಧನಾ ಸಖತ್ ಆಗಿ ಡಿಬಾಸ್ ಜೊತೆ ಹೆಜ್ಜೆ ಹಾಕಿದ್ದಾರೆ.  ಅಂದಹಾಗೆ ಮೂಲಗಳ ಪ್ರಕಾರ ಆರಾಧನಾ ಕಾಟೇರ ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಧನಾ ರಾಮ್ ಅಂತ ಇದ್ದ ಮಾಲಾಶ್ರೀ ಪುತ್ರಿಯ ಹೆಸ್ರು ಈಗ ಆರಾಧನಾ ರಾಮ್ ಆಗಿ ಬದಲಾಗಿದೆ. ಮಾಲಾಶ್ರೀ ಮಗಳ ಮೊದಲ ಹೆಸರು ಅನನ್ಯಾ ರಾಮ್. ಆದ್ರೆ ಅನನ್ಯಾ ಹೆಸರು ಕಾಮನ್ ಆಗುತ್ತೆ ಅಂತ ಸಿನಿಮಾದಲ್ಲಿ ಆಫರ್‌ಗಳು ಬರುತ್ತಿದ್ದ ಹಾಗೆ ಮಗಳಿಗೆ ರಾಧನಾ ರಾಮ್ ಅಂತ ಯುನಿಕ್ ಆಗಿರೋ ಹೆಸರನ್ನ ನಾಮಕರಣ ಮಾಡಿದ್ದಾರೆ.

Latest Videos

click me!