ಬಾಲನಟಿಯಾಗಿ ಕನ್ನಡಿಗರ ಮನಗೆದ್ದ ಬೇಬಿ ಶಾಮಿಲಿ ಈಗ ಫೇಮಸ್ ಕುಂಚ ಕಲಾವಿದೆ!

First Published | Dec 20, 2023, 5:29 PM IST

ಬಾಲನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ ನಟಿ ಬೇಬಿ ಶಾಮಿಲಿ, ಇದೀಗ ಜನಪ್ರಿಯ ಕುಂಚ ಚಿತ್ರ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. 
 

ಬೇಬಿ ಶಾಮಿಲಿ (Baby Shamlee) ನಿಮಗೆ ನೆನಪಿದ್ಯಾ? ಖಂಡಿತಾ ನೆನಪಿರಬೇಕು ಅಲ್ವಾ? ಕನ್ನಡ, ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ಬಾಲನಟಿಯಾಗಿ ಜನಪ್ರಿಯತೆ ಪಡೆದು, ತನ್ನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದ ನಟಿ ಅವರು. ಸದ್ಯ ಕುಂಚ ಚಿತ್ರ ಕಲಾವಿದೆಯಾಗಿ ಮಿಂಚುತ್ತಿದ್ದಾರೆ.
 

ಬಾಲು ಮತ್ತು ಅಲೈಸ್ ಎಂಬ ದಂಪತಿಗೆ 1987ರಲ್ಲಿ ಜನಿಸಿದ ಈಕೆ ಮೂರು ವರ್ಷದಲ್ಲೆ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟರು. ಪುಟ್ಟ ಮಗುವಾಗಿ ರಾಜನದೈ, ಮಗಡು ಸಿನಿಮಾದಲ್ಲಿ ನಟಿಸಿದರು. ಮೂರನೇ ವರ್ಷದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಅಂಜಲಿ ಚಿತ್ರ ಸೂಪರ್ ಹಿಟ್ ಚಿತ್ರವಾಗಿದೆ. 
 

Tap to resize

ಅಂಜಲಿ ಚಿತ್ರದಲ್ಲಿ ಶಾಮಿಲಿ ಮೂರು ವರ್ಷದ ಮಗುವಾದರೂ ಅದ್ಭುತವಾಗಿ ನಟಿಸಿ, ಜನಮನ ಗೆದ್ದಿದ್ದ ನಟಿ, ಈ ಚಿತ್ರಕ್ಕಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ (National Award) ಮತ್ತು ತಮಿಳು ನಾಡು ರಾಜ್ಯ ಪ್ರಶಸ್ತಿ ಸಹ ಗಳಿಸಿದ್ದರು. 
 

ಕನ್ನಡದಲ್ಲಿ ಮತ್ತೆ ಹಾಡಿತು ಕೋಗಿಲೆ, ಶಾಂಭವಿ, ದಾಕ್ಷಾಯಿಣಿ, ಹೂವು ಹಣ್ಣು, ಮಕ್ಕಳ ಸೈನ್ಯ, ಭುವನೇಶ್ವರಿ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ನಮ್ಮ ಕನ್ನಡದ ಜನಪ್ರಿಯ ಬಾಲನಟಿಯಾಗಿ ಹೆಸರು ಮಾಡಿದರು. 
 

ಬಾಲನಟಿಯಾಗಿ ಸುಮಾರು 45 ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದ ಶಾಮಿಲಿ, ಭವಿಷ್ಯದಲ್ಲಿ ಸಿನಿಮಾ ರಂಗದಲ್ಲಿ ಮಿಂಚಲಿರುವ ಭರವಸೆಯ ನಟಿಯಾಗಬಹುದು ಎನ್ನುವ ಮಾತು ಕೇಳಿ ಬಂದಿತ್ತು, ಆದರೆ ಬಾಲನಟಿಯಾಗಿ ಮಿಂಚಿದ ಶಾಮಿಲಿ, ನಾಯಕಿಯಾಗಿ ವಿಫಲವಾದರು. 
 

ತೆಲುಗಿನಲ್ಲಿ ಓಯೆ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಪಡೆದ ಶಾಮಿಲಿ, ನಂತರ ವಲ್ಲೀಮ್ ತೆಟ್ಟಿ, ಪುಲೀಮ್ ತೆಟ್ಟಿ, ವೀರೆ ಶಿವಾಜಿ, ಅಮ್ಮಮ್ಮಗಾರಿಲ್ಲು ಸಿನಿಮಾಗಳಲ್ಲಿ ಅದೃಷ ಪರೀಕ್ಷಿಸಿ ಸೋತರು. ನಂತರ ಚಿತ್ರ ರಂಗಕ್ಕೆ ಕಾಲಿಡಲೇ ಇಲ್ಲ. 
 

ಶಾಮಿಲಿ ಸಹೋದರಿ ಶಾಲಿನಿ (Shalini) ಕೂಡ ಬಾಲನಟಿಯಾಗಿ ಹಾಗೂ ಮಲಯಾಳಂ, ತಮಿಳು, ತೆಲುಗಿನಲ್ಲಿ ಜನಪ್ರಿಯ ನಟಿಯಾಗಿದ್ದರು. ಸದ್ಯ ಸಿನಿಮಾಗಳಿಂದ ದೂರವಿರುವ ಶಾಮಿಲಿ ಪೈಂಟಿಂಗ್ ಮಾಡೋದರಲ್ಲಿ ಎಕ್ಸ್ ಪರ್ಟ್ ಆಗಿದ್ದಾರೆ. ಇವರೊಬ್ಬ ಅದ್ಭುತ ಚಿತ್ರ ಕಲಾವಿದೆ ಹೌದು. 
 

ಶಾಮಿಲಿ ಸೋಶಿಯಲ್ ಮೀಡಿಯಾ ಖಾತೆ ತೆರೆದರೆ ಸಾಕಷ್ಟು ಚಿತ್ರಗಳ ಪೈಂಟಿಂಗ್ ಕಾಣಬಹುದು, ಚಿತ್ರಗಳ ಮಾರಾಟ ಕೂಡ ಮಾಡುತ್ತಾರೆ. ಅಲ್ಲದೇ ಇತ್ತೀಚೆಗೆ ಇವರು ಬಿಡಿಸಿದಂತಹ ಚಿತ್ರಗಳ ಪ್ರದರ್ಶನ (Art exibition) ಕೂಡ ನಡೆದಿತ್ತು, ಈ ಕಾರ್ಯಕ್ರಮಕ್ಕೆ ಮಣಿ ರತ್ನಂ, ಸುಹಾಸಿನಿ, ರೆಹಮಾನ್ ಅವರು ಸಹ ಆಗಮಿಸಿ ಶಾಮಿಲಿಯ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. 

ಸಹೋದರ ರಿಚರ್ಡ್ ಮತ್ತು ಸಹೋದರಿ ಶಾಲಿನಿಯವರ ಬೆಂಬಲದೊಂದಿಗೆ ತನ್ನ ಪ್ಯಾಶನ್ ಆಗಿರುವ ಚಿತ್ರಕಲೆಯಲ್ಲೇ ಮುಂದುವರೆಯುತ್ತಿರುವ ಶಾಮಿಲಿಯ ಅದ್ಭುತ ಚಿತ್ರಕಲೆಗಳನ್ನು ನೀವು ನೋಡಿದೀರಾಲ್ವಾ? ಹೇಗಿದೆ ಚಿತ್ರಗಳು ತಿಳಿಸಿ… . 

Latest Videos

click me!