ಸ್ವಿಜರ್‌ಲ್ಯಾಂಡ್‌ ಹಿಮದಲ್ಲಿ ಕುಣಿದಾಡಿದ ಡಿಂಪಲ್ ಕ್ವೀನ್: ಸ್ವಿಸ್ ಟ್ರೆಡಿಷನಲ್ ಡ್ರೆಸ್‌ನಲ್ಲೇ ರಚ್ಚು ಕಾಣಿಸಿಕೊಂಡಿದ್ದೇಕೆ?

Published : Dec 20, 2023, 08:51 AM IST

'ಸಂಜು ವೆಡ್ಸ್​ ಗೀತಾ 2' ಚಿತ್ರತಂಡ ಶೂಟಿಂಗ್​ಗಾಗಿ ಸ್ವಿಜರ್ಲ್ಯಾಂಡ್​ಗೆ ತೆರಳಿದ್ದಾರೆ. ಅಲ್ಲಿನ ಫೋಟೋಗಳನ್ನು ನಟಿ ರಚಿತಾ ರಾಮ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
16
ಸ್ವಿಜರ್‌ಲ್ಯಾಂಡ್‌ ಹಿಮದಲ್ಲಿ ಕುಣಿದಾಡಿದ ಡಿಂಪಲ್ ಕ್ವೀನ್: ಸ್ವಿಸ್ ಟ್ರೆಡಿಷನಲ್ ಡ್ರೆಸ್‌ನಲ್ಲೇ ರಚ್ಚು ಕಾಣಿಸಿಕೊಂಡಿದ್ದೇಕೆ?

ಒಳ್ಳೆಯ ಕಂಟೆಂಟ್‌​, ಇಂಪಾದ ಹಾಡುಗಳೊಂದಿಗೆ 12 ವರ್ಷಗಳ ಹಿಂದೆ ಬೆಳ್ಳಿ ತೆರೆಗೆ ಬಂದಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಕನ್ನಡ‌ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್​ ಬರುತ್ತಿದೆ. 

26

ಪ್ರೇಕ್ಷಕರ ಕುತೂಹಲವೂ ಹೆಚ್ಚಾಗಿದೆ. ನಾಗಶೇಖರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಫಾರ್ ಎ ಚೇಂಜ್​ ಎಂಬಂತೆ ಮೋಹಕತಾರೆ ರಮ್ಯಾ ಅವರ ಬದಲಿಗೆ ಡಿಂಪಲ್​ ಕ್ವೀನ್​​ ರಚಿತಾ ರಾಮ್ ನಾಯಕಿಯಾಗಿದ್ದಾರೆ.  

36

ಇದೀಗ ಚಿತ್ರತಂಡ ಶೂಟಿಂಗ್​ಗಾಗಿ ಸ್ವಿಜರ್ಲ್ಯಾಂಡ್​ಗೆ ತೆರಳಿದ್ದಾರೆ. ಸುಂದರ ತಾಣಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟಿ ರಚಿತಾ ರಾಮ್​ ಈ ಬಗ್ಗೆ ಅಪ್​ಡೇಟ್​ ನೀಡಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ​ಸ್ವಿಸ್​ ಪದ್ಧತಿಯಂತೆ ನಯಾ ಡ್ರೆಸ್​ ತೊಟ್ಟು ಹಿಮದಲ್ಲಿ ಕುಣಿದು ಡಿಂಪಲ್​ ಕ್ವೀನ್​ ಸಂಭ್ರಮಿಸಿದ್ದಾರೆ.

46

ಸಿನಿಮಾ ಚಿತ್ರೀಕರಣಕ್ಕಾಗಿ ಈ ಉಡುಗೆ ತೊಡಲು ತುಂಬಾ ಥ್ರಿಲ್​ ಆಗಿದ್ದೇನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಟಿಯ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ. ರಚಿತಾ ರಾಮ್ ರಾಣಿ ರೀತಿ ಕಾಣಿಸುತ್ತಿದ್ದಾರೆ. 

56

ಸ್ವಿಸ್ ಸಾಂಪ್ರದಾಯಿಕ ಉಡುಗೆ ತೊಟ್ಟು ಹೊಳೆಯುತ್ತಿದ್ದಾರೆ. ರಚಿತಾ ಈ ರೀತಿ ಎಲ್ಲೂ ಕಂಡು ಬಂದಿಲ್ಲ. ಆದರೆ ಇದು ನಿಜಕ್ಕೂ ನೋಡುಗರಿಗೂ ಹೊಸ ರೀತಿಯ ಅನುಭವ ಕೊಡುತ್ತಿದೆ. ಸ್ವತಃ ರಚಿತಾ ರಾಮ್ ಅವರಿಗೂ ಇನ್ನಿಲ್ಲದ ಹೊಸ ಫೀಲ್ ಬಂದಿದೆ. ಅದೇ ಒಂದು ಖುಷಿಯಲ್ಲಿಯೇ ಸ್ವಿಜರ್‌ಲ್ಯಾಂಡ್‌ನ ಸುಂದರ ತಾಣದಲ್ಲಿ ಕುಣಿದು ಕುಪ್ಪಳ್ಳಿಸಿದ್ದಾರೆ.

66

ರಚಿತಾ 2013 ರಲ್ಲಿ ಬುಲ್‌ಬುಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಡೈಲಾಗ್ ಡೆಲಿವರಿ ಶೈಲಿ, ವ್ಯಕ್ತಿತ್ವ ಮತ್ತು ಅಭಿನಯದಿಂದ ಅನೇಕ ಜನರು ಪ್ರಭಾವಿತರಾಗಿದ್ದರು. ಅವರು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದರು. ರಚಿತಾ ಬ್ಯೂಟಿಗೆ ಸಾವಿರಾರು ಅಭಿಮಾನಿಗಳು ಮರುಳಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories