ಅ.10ರಂದು ದುನಿಯಾ ವಿಜಿಯ ಸಲಗ ಚಿತ್ರದ ಪ್ರಿ-ರಿಲೀಸ್‌ ಸಂಭ್ರಮ

First Published | Oct 6, 2021, 10:12 AM IST
  • ಅ.10ರಂದು ಸಂಜೆ 6 ಗಂಟೆಗೆ ಸಲಗ ಚಿತ್ರದ ಪ್ರಿ-ರಿಲೀಸ್‌ ಇವೆಂಟ್‌
  • ಅದೇ ದಿನ ಚಿತ್ರದ ಟ್ರೈಲರ್‌ ಬಿಡುಗಡೆಯಾಗುವ ಸಾಧ್ಯತೆ

ದುನಿಯಾ ವಿಜಿ ನಟನೆಯ ‘ಸಲಗ’ (Salaga)ಚಿತ್ರದ ಪ್ರಿ-ರಿಲೀಸ್‌(Pre-release) ಇವೆಂಟ್‌ ಅ.10ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರ ರಿವೀಲ್‌ ಮಾಡಿದೆ.

ಅದೇ ದಿನ ಚಿತ್ರದ ಟ್ರೈಲರ್‌ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವೆಂಟ್‌ ಎಲ್ಲಿ ನಡೆಯಲಿದೆ, ಯಾರೆಲ್ಲ ಭಾಗವಹಿಸುತ್ತಾರೆ ಅನ್ನೋ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Tap to resize

‘ಸಲಗ’ ಚಿತ್ರಕ್ಕೆ ಸೆನ್ಸಾರ್‌ನಿಂದ ‘ಎ’ ಸರ್ಟಿಫಿಕೇಟ್‌ ದೊರೆತಿದ್ದು, ಅ.14ರಂದು ಚಿತ್ರ ಬಿಡುಗಡೆಯಾಗಲಿದೆ. ದುನಿಯಾ ವಿಜಿ ನಿರ್ದೇಶಿಸಿ(Direction) ನಟಿಸುತ್ತಿರುವ ಚಿತ್ರವನ್ನು ಕೆ.ಪಿ. ಶ್ರೀಕಾಂತ್‌ ನಿರ್ಮಿಸಿದ್ದಾರೆ.

ಸಲಗ ಟೀಂ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಂಡಿದೆ. ಸಿನಿಮಾ ನೋಡಲು ಅಭಿಮಾನಿಗಳು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ 

ಇತ್ತೀಚೆಗೆ ಸ್ಯಾಂಡಲ್‌ವುಡ್ ನಿರ್ದೇಶಕರು ಮೂರಕ್ಷರದ ಪದಗಳ ಟೈಲ್ ಹಿಂದೆ ಬಿದ್ದಿದ್ದಾರೆ. ಮೂರಕ್ಷರದ ಟೈಟಲ್ ಇರುವ ಸಿನಿಮಾಗಳು ಸಖತ್ ಫೇಮಸ್ ಆಗುತ್ತವೆ. ಹಾಗಾಗಿ ಸಲಗವೂ ಈಗ ಹಿಟ್ ಆಗಿದ್ದು ರಿಲೀಸ್ ಮುನ್ನವೇ ಸಾಕಷ್ಟು ಹವಾ ಎಬ್ಬಿಸಿದೆ. ಸಿನಿಮಾ ಕುರಿತು ಸಖತ್ ಥ್ರಿಲ್ ಆಗಿದ್ದಾರೆ ಸಿನಿ ಪ್ರಿಯರು.

ಥಿಯೇಟರ್‌ನಲ್ಲಿ ಘೀಳಿಡೋಕೆ ಸಲಗ(Salaga) ಸಿದ್ಧವಾಗಿದೆ. ಒಡ್ಡೋಲಗ ರೆಡಿ ಮಾಡ್ಕೊಳ್ಳಿ ಎಂದಿದೆ ಚಿತ್ರತಂಡ.

'ಚಿತ್ರಮಂದಿರ ತುಂಬಲಿದೆ... ಸಲಗ, ಕೋಟಿಗೊಬ್ಬ, ಭಜರಂಗಿ ತೆರೆಗೆ ದಿನಾಂಕ ಫಿಕ್ಸ್!

Latest Videos

click me!