ಬರ್ತ್‌ಡೇ ದಿನ ನಾನು ವೈಜಾಗ್‌ನಲ್ಲಿ ‘ಮಾರ್ಟಿನ್’ ಚಿತ್ರದ ಶೂಟಿಂಗ್‌ನಲ್ಲಿರುತ್ತೇನೆ. ಪ್ರತಿವರ್ಷದಂತೆ ಈ ಬಾರಿಯೂ ನಿಮ್ಮ ಆಶೀರ್ವಾದ(Blessing) ನನ್ನ ಮೇಲಿರಲಿ. ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
46
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊರೋನಾ ಸೋಂಕನ್ನು ಗಮನದಲ್ಲಿ ಇಟ್ಟುಕೊಂಡು ಈ ವರ್ಷ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ.
ಅಕ್ಟೋಬರ್ 6ರಂದು 33ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆಂದು ವಿಶಾಖಪಟ್ಟಣಂ ತೆರಳುತ್ತಿರುವೆ. ದಯವಿಟ್ಟು ಯಾರೂ ಪ್ರಯಾಣ ಮಾಡಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
66
ತಮಗಾಗಿ ಮೂರು ವರ್ಷಗಳ ಕಾಲ ಪೊಗರು ಸಿನಿಮಾ ನಿರ್ಮಾಣ ಮಾಡಿದ, ನಿರ್ಮಾಪಕ ಗಂಗಾಧರ್ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಅವರ ಋಣ ತೀರಿಸಲು ಮುಂದಾಗಿದ್ದಾರೆ.