ಬಿಗ್ ಬಾಸ್ ಕಾರ್ತಿಕ್ ತಂಗಿ ಮಗನ ಫೋಟೋ ವೈರಲ್; ಮೇಕಪ್ ಹಾಕದಿದ್ದರೂ ಎಷ್ಟು ಲಕ್ಷಣ ಎಂದ ನೆಟ್ಟಿಗರು!

First Published | Aug 21, 2024, 2:57 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಾವ ಅಳಿಯನ ಫೋಟೋ. ನಿಮ್ಮ ತಂಗಿ ಸೂಪರ್ ಎಂದ ನೆಟ್ಟಿಗರು.....

ಕನ್ನಡ ಬಿಗ್ ಬಾಸ್ ಸೀಸನ್ 10ರ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾದ ಸ್ಯಾಂಡಲ್‌ವುಡ್‌ ನಟ ಕಾರ್ತಿಕ್ ಮಹೇಶ್.

ಮೈಸೂರು ಮೂಲಕ ಕಾರ್ತಿಕ್ ಬಿಗ್ ಬಾಸ್ ಟ್ರೋಫಿ ಕೈ ಹಿಡಿದ ಮೇಲೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಸೋಷಿಯಲ್ ಮೀಡಿಯಾ ತುಂಬಾ ಫ್ಯಾನ್ ಪೇಜ್‌ಗಳು.

Tap to resize

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ತಂಗಿ ಗರ್ಭಿಣಿ ಆಗಿದ್ದರು. ಆಕೆಯ ಸೀಮಂತ ಮುಗಿಸಿಕೊಂಡು ಬಂದ ಕಾರ್ತಿಕ್ ಮಗುವಿನ ನಿರೀಕ್ಷೆಯಲ್ಲಿದ್ದರು. 

ಅಳಿಯ ಜನಿಸಿದ ವಿಚಾರವನ್ನು ಬಿಗ್ ಬಾಸ್ ಘೋಷಣೆ ಮಾಡಿದ್ದರು. ವಿಡಿಯೋ ಕಾಲ್ ಮೂಲಕ ತಂಗಿ ಜೊತೆ ಮಾತನಾಡಿ ಮಗುವನ್ನು ನೋಡಿದ್ದರು.

ಅಂದಿನಿಂದ ಕಾರ್ತಿಕ್ ಸಹೋದರಿ ತೇಜಸ್ವಿನಿ ಕೂಡ ಕೊಂಚ ಫೇಮಸ್ ಆಗಿಬಿಟ್ಟರು. ಪ್ರತಿಯೊಬ್ಬ ಅಭಿಮಾನಿನೂ ಮೆಸೇಜ್ ಮಾಡಿ ಮಗುವಿನ ಆರೋಗ್ಯವನ್ನು ವಿಚಾರಸಿಕೊಳ್ಳುತ್ತಾರೆ.

ಇತ್ತೀಚಿಗೆ ಕಾರ್ತಿಕ್, ತೇಜಸ್ವಿನಿ ಮತ್ತು ಪುಟ್ಟ ಕಂದಮ್ಮ ಫೋಟೋಶೂಟ್ ಮಾಡಿಸಿದ್ದಾರೆ. ಮೂವರು ವೈಟ್ ಆಂಟ್ ವೈಟ್ ಔಟ್‌ಫಿಟ್‌ನಲ್ಲಿ ಮಿಂಚಿರುವ ಪೋಟೋವನ್ನು ತೇಜಸ್ವಿನಿ ಅಪ್ಲೋಡ್ ಮಾಡಿದ್ದಾರೆ.

ಸ್ವಲ್ಪ ಹೆಸರು ಬಂದ್ರೆ ಸಾಕು ಲಿಪ್‌ಸ್ಟಿಕ್ ಹಾಕೋಂಡು ರೀಲ್ಸ್ ಮಾಡೋಕೆ ಶುರು ಮಾಡುತ್ತಾರೆ ಆದರೆ ನೀವು ಯಾವುದೇ ಮೇಕಪ್ ಹಾಕದೆ ಎಷ್ಟು ಸಿಂಪಲ್ ಆಗಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!