ಸಿಲ್ಕ್ ಸ್ಮಿತಾ ಅರ್ಧ ತಿಂದಿಟ್ಟ ಸೇಬು ಹಣ್ಣು ಆ ಕಾಲದಲ್ಲಿ ಹರಾಜಾಗಿದ್ದು ದುಬಾರಿ ಬೆಲೆಗೆ !

First Published | Aug 22, 2024, 11:33 AM IST

ಸಿಲ್ಕ್ ಸ್ಮಿತಾ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇತ್ತು ಅನ್ನೋದಕ್ಕೆ  ಈ ಘಟನೆ ಸಾಕ್ಷಿಯಾಗಿದೆ. ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಅರ್ಧ ತಿಂದು ಬಿಟ್ಟಿದ್ದ ಸೇಬು ದುಬಾರಿ ಬೆಲೆಗೆ ಹರಾಜಾಗಿತ್ತು. 
 

ಸಿಲ್ಕ್ ಸ್ಮಿತಾ (Silk Smitha) ಬೆಳ್ಳಿ ಪರದೆಯ ಮೇಲಿನ ಸೆನ್ಸೇಷನ್ ಎಂದೇ ಹೇಳಬಹುದು. ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಇದ್ದಾರೆ ಅಂದ್ರೆ ಸಾಕು ಸಿನಿಮಾ ಮಂದಿರಗಳು ತುಂಬುತ್ತಿದ್ದವು. ಸಿಲ್ಕ್ ಸ್ಮಿತಾ ಆರಾಧಕರ ಸಂಖ್ಯೆಯೇ ಹೆಚ್ಚಾಗಿತ್ತು, ಸಿಲ್ಕ್ ಸ್ಮಿತಾ ಇದ್ರೆ ಸಿನಿಮಾ ಸೂಪರ್ ಹಿಟ್ ಎನ್ನುತ್ತಿದ್ದ ಸಮಯವೂ ಇತ್ತು. 
 

ಹೆಚ್ಚೇನು ವಿದ್ಯಾಭ್ಯಾಸ ಇಲ್ಲದ, ಲೋಕ ಜ್ಞಾನವೂ ಇಲ್ಲದ ವಿಜಯಲಕ್ಷ್ಮಿ ವಡ್ಲಪಾಟಿ ನಟಿಯಾಗಿ ಬೆಳೆದ ರೀತಿ ಅದ್ಭುತವಾಗಿದೆ. ಬಡತನದ ಕಾರಣದಿಂದಾಗಿ ವಿಜಯಲಕ್ಷ್ಮಿ ಚಿಕ್ಕ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅತ್ತೆ-ಮಾವನ ಕಿರುಕುಳ ತಾಳಲಾರದೆ ಚೆನ್ನೈ ಓಡಿಹೋಗಿದ್ದರು ಸಿಲ್ಕ್ ಸ್ಮಿತಾ. 
 

Tap to resize

ಸಿಲ್ಕ್ ಸ್ಮಿತಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು, ನಂತರ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲ ಹಿಂದಿಯಲ್ಲಿ ಸಹ ಕೆಲವು ಚಲನಚಿತ್ರಗಳನ್ನು ಮಾಡಿದ್ದಾರೆ. ಒಟ್ಟಲ್ಲಿ ಸಿಲ್ಕ್ ಸ್ಮಿತಾ ನಟಿಯಾಗಿ, ಐಟಂ ಡ್ಯಾನ್ಸರ್ (Item Dacer) ಆಗಿ ಭಾರತೀಯ ಸಿನಿಮಾ ರಂಗದಲ್ಲಿ ಜನಪ್ರಿಯತೆ ಗಳಿಸಿದರು. 
 

ಸಿಲ್ಕ್ ಸ್ಮಿತಾ ಐಟಂ ಗರ್ಲ್ ಆಗಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿದರು. ಜ್ಯೋತಿ ಲಕ್ಷ್ಮಿ ಮತ್ತು ಜಯಲಕ್ಷ್ಮಿಯಂತಹ ನೃತ್ಯಗಾರ್ತಿಗಳನ್ನು ಹಿಂದಿಕ್ಕಿ, ಅತ್ಯುತ್ತಮ ಡ್ಯಾನ್ಸರ್ ಆಅಗಿ ಮೋಡಿ ಮಾಡಿದ್ದರು. ಆ ಕಾಲದ ಹುಡುಗರು ಸಿಲ್ಕ್ ಸ್ಮಿತಾರನ್ನು ಪ್ರಣಯದ ದೇವತೆಯಾಗಿ ಪೂಜಿಸುತ್ತಿದ್ದರು. 

ನೂರಾರು ಚಿತ್ರಗಳಲ್ಲಿ ನಟಿಸಿರುವ ಸಿಲ್ಕ್ ಸ್ಮಿತಾ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಅವರು ಹಾಸ್ಯ, ಗಂಭೀರ, ಭಾವನಾತ್ಮಕ ಮತ್ತು ಖಳ ನಟಿಯ ಪಾತ್ರಗಳಲ್ಲಿ ಸಹ ಮಿಂಚಿದ್ದಾರೆ. ಜೊತೆಗೆ ಸ್ಪೆಷಲ್ ಹಾಡುಗಳಲ್ಲಿ ಮಿಂಚುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನ ಪಡೆದರು ಸಿಲ್ಕ್. 
 

ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಕ್ರೇಜ್ ಹೇಗಿತ್ತು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಿಲ್ಕ್ ಸ್ಮಿತಾ ಅರ್ಧ ತಿಂದಿದ್ದ ಸೇಬು ಹಣ್ಣನ್ನು ಹರಾಜಿಗೆ ಹಾಕಿದ ಘಟನೆ ನಡೆದಿತ್ತು. ಜನರು ಆ ಸೇವನ್ನು ಖರೀದಿಸೋದಕ್ಕೆ ತಾನು ಮುಂದು, ನಾ ಮುಂದು ಎಂದು ಜನ ಹರಾಜಿಗೆ ಬಂದಿದ್ದರಂತೆ.

ಅವತ್ತು ಸಿಲ್ಕ್ ಸ್ಮಿತಾ ಒಂದು ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸಿಲ್ಕ್ ತಮ್ಮ ಶಾಟ್ ಗ್ಯಾಪ್ ನಲ್ಲಿ ಸೇಬು ಹಣ್ಣು ತಿನ್ನುತ್ತಿದ್ದರಂತೆ. ಸಿಲ್ಕ್ ಸ್ಮಿತಾ ಒಂದು ತುಂಡು ಆಪಲ್ ಕಚ್ಚುತ್ತಿದ್ದಂತೆ, ಶಾಟ್ ರೆಡಿಯಾಗಿತ್ತು, ಹಾಗೇ ಆಕೆ ಅರ್ಧ ತಿಂದ ಆಪಲ್ ಅಲ್ಲೇ ಬಿಟ್ಟು ಹೋದರಂತೆ.  ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಸೇಬನ್ನು ಮೆಲ್ಲನೆ ಅಲ್ಲಿಂದ ಕದ್ದುಕೊಂಡು ಹೋಗಿದ್ರಂತೆ. 

ಇದನ್ನು ಸಿಲ್ಕ್ ಸ್ಮಿತಾ ತಿಂದ ಸೇಬು ಎಂದು ಹರಾಜು ಹಾಕಲಾಯಿತು. ಇದನ್ನ ತಿಳಿದ ಜನರು ಆ ಸೇಬು ಖರೀದಿಸಲು ಓಡೋಡಿ ಬಂದಿದ್ರಂತೆ. ಸಿಲ್ಕ್ ಸ್ಮಿತ್ ಅರ್ಧ ತಿಂದ ಸೇಬನ್ನು ಹರಾಜಿನಲ್ಲಿ ಎಷ್ಟು ಖರೀದಿಸಿದರು ಎಂಬುದರ ಬಗ್ಗೆ ವಿಭಿನ್ನ ವಾದಗಳಿವೆ.  ಕೆಲವರು 1 ಲಕ್ಷ ರೂ.ಗೆ ಹರಾಜಾಯ್ತು ಎಂದರೆ, ಇನ್ನೂ ಕೆಲವರು 5 ಲಕ್ಷಕ್ಕೆ ಹರಾಜು ಮಾಡಲಾಯಿತು ಎಂದಿದ್ದಾರೆ.  ಇನ್ನೂ ಕೆಲವರು ನಿಜವಾಗಿ ಸೇಬು ಹಣ್ಣು ಮಾರಾಟವಾಗಿದ್ದು, 200 ರೂಪಾಯಿಗೆ ಎಂದಿದ್ದಾರೆ. ಆ ಕಾಲದಲ್ಲಿ 200 ರೂಪಾಯಿಗಳೇ ದುಬಾರಿಯಾಗಿತ್ತು. ಒಟ್ಟಲ್ಲಿ ಸಿಲ್ಕ್ ಸ್ಮಿತಾ ತಿಂದಂತಹ ಸೇಬು ಕೂಡ ಮಾರಾಟ ಮಾಡಲಾಗಿತ್ತು ಅನ್ನೋದು ಮಾತ್ರ ಅವರ ಮೇಲಿನ ಕ್ರೇಜ್ ಎಷ್ಟಿತ್ತು ಅನ್ನೋದು ತಿಳಿಯುತ್ತೆ. 
 

ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯ ಹೊಂದಿದ್ದ ಸಿಲ್ಕ್ ಸ್ಮಿತಾ 1996 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಗ ಸಿಲ್ಕ್ ಸ್ಮಿತಾಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಪ್ರೀತಿಯಲ್ಲಿ ದ್ರೋಹಕ್ಕೊಳಗಾದ ಸಿಲ್ಕ್ ಸ್ಮಿತಾ ಏಕಾಂಗಿಯಾಗಿ ಜೀವನ ಕಳೆದರು.  ಆತ್ಮಹತ್ಯೆ (Suicide) ಪತ್ರದಲ್ಲಿ ಸಿಲ್ಕ್ ಸ್ಮಿತಾ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ಸಿಲ್ಕ್ ಸ್ಮಿತಾ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಭಾಗವಹಿಸಲಿಲ್ಲ. ಆಕೆ ಅನಾಥಳಾಗಿ ಪರಲೋಕಕ್ಕೆ ತೆರಳಿದಳು ಅನ್ನೋದು ಮಾತ್ರ ನಿಜಾ.. 
 

Latest Videos

click me!