ಪತ್ನಿ, ಮಗು ಸಮೇತ ಶ್ರೀ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ

First Published | Aug 3, 2024, 4:32 PM IST

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಿನ್ನೆ ಚಾಮುಂಡೇಶ್ವರಿ ದರ್ಶನ ಪಡೆದು ಬಂದಿದ್ದಾರೆ. 
 

ಆಷಾಢ ಮಾಸದಲ್ಲಿ ರಾಜ್ಯದೆಲ್ಲೆಡೆ ದೇಗುಲಗಳಲ್ಲಿ ಸಂಭ್ರಮದ ಪೂಜೆಗಳು ನಡೆಯುತ್ತವೆ. ಮೈಸೂರಿನ ಚಾಮುಂಡೇಶ್ವರಿ (CHamundeshwari Temple) ಸನ್ನಿಧಿಯಲ್ಲೂ ಆಷಾಢ ಮಾಸದಲ್ಲಿ ಪೂಜೆ ನಡೆಯುತ್ತಿದ್ದು, ನಿನ್ನೆ ಕೊನೆಯ ಆಷಾಢ ಶುಕ್ರವಾರ ಪೂಜೆ ಸಂಭ್ರಮದಿಂದ ನಡೆದಿದೆ. 

ಆಷಾಢ ಶುಕ್ರವಾರ ಪೂಜೆ ಸಲ್ಲಿಸಲು ಚಾಮುಂಡೇಶ್ವರಿ ಸನ್ನಿಧಿಗೆ ರಾಜ್ಯದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಹಾಗೇಯೇ ನಿನ್ನೆ ಆಷಾಢದ ಕೊನೆಯ ಶುಕ್ರವಾರ ದೈವ ಭಕ್ತ, ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಮ್ಮ ಕುಟುಂಬ ಸಮೇತ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದಾರೆ. 
 

Tap to resize

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ , ಹರಕೆ ಸಲ್ಲಿಸಿ ಅಲ್ಲಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಕಡೆ (ನಾಲ್ಕನೇ) ಆಷಾಡ ಶುಕ್ರವಾರ ಹಿನ್ನೆಲೆ ಇಂದು ಕುಟುಂಬದೊಂದಿಗೆ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ, ತಾಯಿಯ ಆಶೀರ್ವಾದ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ ಎಂದು ಬರೆದು ಕೊಂಡಿದ್ದಾರೆ. 
 

ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿ ನಿಖಿಲ್ (Revathi Nikhil) ಮತ್ತು ಮಗ ಅಯಾನ್ ದೇವ್ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದು, ಹರಕೆ ಸಲ್ಲಿಸಿ ಬಂದಿದ್ದಾರೆ. ಇವರ ಜೊತೆ ಇತರ ರಾಜಕೀಯ ವ್ಯಕ್ತಿಗಳು ಸಹ ದೇವಿ ದರ್ಶನ ಪಡೆದಿದ್ದಾರೆ. 
 

ಈ ಸಂದರ್ಭದಲ್ಲಿ ಹುಣಸೂರು ವಿಧಾನಸಭೆ ಕ್ಷೇತ್ರದ ಶಾಸಕರಾದ ಜಿ.ಡಿ ಹರೀಶ್ ಗೌಡ ದಂಪತಿ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ಪ್ರಸನ್ನ, ಮನ್ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರು, ರವಿ ಕುಮಾರ್, ಮಂಜು ಸೇರಿ ಪ್ರಮುಖರು ಜೊತೆಯಲ್ಲಿದ್ದರು.
 

ನಿಖಿಲ್ ಕುಮಾರಸ್ವಾಮಿ ದೈವ ಭಕ್ತರಾಗಿದ್ದು, ಹೆಚ್ಚಾಗಿ ತಮಗೆ ಬಿಡುವು ಸಿಕ್ಕಾಗಲೆಲ್ಲಾ ವಿವಿಧ ತೀರ್ಥ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆದು ಬರುತ್ತಾರೆ. ಈ ಹಿಂದೆ ನಿಖಿಲ್, ತಮ್ಮ ತಂದೆ ತಾಯಿ ಹಾಗೂ ಕುಟುಂಬ ಸಮೇತರಾಗಿ ಶಿರಡಿ ಶ್ರೀ ಸಾಯಿಬಾಬ ದರ್ಶನ ಪಡೆದು ಬಂದಿದ್ದರು. 
 

Latest Videos

click me!