ಸಮುದ್ರ ತೀರದಿ ಕುಳಿತು ನನ್ನ ಸಮುದ್ರ ನೀನೆಂದ ಚ್ರೈತ್ರಾ, ಸಮುದ್ರದ ಅಲೆ ನಿನ್ನ ಕಣ್ಣೆಂದ ಅನುಶ್ರೀ

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚೆಲುವೆ ಚೈತ್ರಾ ಆಚಾರ್ ಇದೀಗ ಸಮುದ್ರ ತೀರದಲ್ಲಿ ಕುಳಿತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಸ್ಯಾಂಡಲ್‌ವುಡ್ ನಟಿಯರು ರಿಯಾಕ್ಟ್ ಮಾಡಿದ್ದು, ಆ್ಯಂಕರ್ ಅನುಶ್ರೀಯೂ ಚಂದದ ಕಮೆಂಟ್ ಮಾಡಿದ್ದಾರೆ. ಅದೆಂಥ ಫೋಟೋಸ್ ಶೇರ್ ಮಾಡಿದ್ದಾರೆ ಸ್ಯಾಂಡಲ್‌ವುಡ್ ಆಲಿಯಾ ಭಟ್. 
 

ರಕ್ಷಿತ್ ಶೆಟ್ಟಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ಸುರಭಿ ಪಾತ್ರದ ಮೂಲಕ ನೈಜ ಅಭಿನಯ ತೋರಿಸಿ ಸೈ ಎನಿಸಿಕೊಂಡ ನಟಿ ಚೈತ್ರಾ ಆಚಾರ್ (Chaithra Achar). ಇವರ ನಟನೆಗೆ ಸಿನಿ ಪ್ರೇಕ್ಷಕರು ಮನ ಸೋತಿದ್ದರು. 
 

ನಟನೆ, ಹಾಡುಗಾರಿಕೆಯಲ್ಲಿ ಗುರುತಿಸಿಕೊಂಡಿರುವ ಈ ಮಲ್ಟಿ ಟ್ಯಾಲೆಂಟೆಡ್ ಬೆಡಗಿ (multi talented atctress) ಚೈತ್ರಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿ ಮಾಡ್ತಿರೋದೆ ಸೋಶಿಯಲ್ ಮೀಡಿಯಾದಲ್ಲಿ ತಾವು ಹಂಚಿಕೊಳ್ಳುತ್ತಿರುವ ವಿವಿಧ ಫೋಟೋ ಶೂಟ್  ಮೂಲಕ. 
 


ತಮ್ಮ ಹೊಸ ಹೊಸ ಫೋಟೋ ಶೂಟ್, ಬೋಲ್ಡ್ ಲುಕ್, ಅದಕ್ಕಿಂತ ಬೋಲ್ಡ್ ಡ್ರೆಸ್ ಮೂಲಕವೇ ಇಂಟರ್ನೆಟ್ ತುಂಬಾ ಸಂಚಲನ ಮೂಡಿಸೋ ನಟಿ ಚೈತ್ರಾ ಈ ಬಾರಿ ಸಮುದ್ರ ತೀರದಲ್ಲಿ ಮೈ ಚೆಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

ಬಿಳಿ ಬಣ್ಣದ ಸೀರೆ ಮತ್ತು ಅದಕ್ಕೆ ಮ್ಯಾಚ್ ಆಗುವ ಕೆಂಪು ಬಣ್ಣದ ಬ್ಲೌಸ್ ಧರಿಸಿರುವ ಚೈತ್ರಾ ಆಚಾರ್, ಸಮುದ್ರದ ಅಲೆಗಳ ಮಧ್ಯೆ, ಮರಳಿನ ಮೇಲೆ, ದೋಣಿಯ ಅಂಚಿನಲ್ಲಿ ಕುಳಿತು ಸೆರಗು ಜಾರಿಸಿ ಸುಂದರವಾಗಿ ಪೋಸ್ ನೀಡಿದ್ದಾರೆ. 
 

ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿರುವ ಚೈತ್ರಾ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಡೈಲಾಗ್ ‘ನನ್ನ ಸಮುದ್ರ ನೀನು’ ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಚೈತ್ರಾ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದ್ದು, ಜನ ಮೆಚ್ಚಿಕೊಂಡಿದ್ದಾರೆ. 
 

ಚೈತ್ರಾ ಫೋಟೋ ನೋಡಿ, ನಿರೂಪಕಿ ಅನುಶ್ರೀ (Anchor Anushree), ಸಮುದ್ರದ ಅಲೆ ನಿನ್ನ ಕಣ್ಣು ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಚೈತ್ರಾ ನೀವು ನನ್ನ ಚಿನ್ನು ಎಂದು ಹೇಳಿದ್ದಾರೆ. ಮತ್ತೊಬ್ಬರು ಇದು ಸಪ್ತಸಾಗರದಾಚೆ ಸೈಡ್ ಬಿ ಬೆಂಗಾಲಿ ರಿಮೇಕ್ ಇರಬಹುದು ಎಂದಿದ್ದಾರೆ. 
 

ಇನ್ನು ಮತ್ತೊಬ್ಬ ನಟಿ ನಿಧಿ ಹೆಗ್ಡೆ ಕಾಮೆಂಟ್ ಮಾಡಿ ಯಾಕೆ ಯಾವ ನ್ಯೂಸ್ ಚಾನೆಲ್ ಈ ಮತ್ಸ್ಯ ಕನ್ಯೆ ಸಮುದ್ರದಲ್ಲಿ ಕಾಣ ಸಿಕ್ಕಿರುವ ಬಗ್ಗೆ ಸುದ್ದಿ ನೀಡಲೇ ಇಲ್ಲ ಎಂದಿದ್ದಾರೆ. ಇದಕ್ಕೆ ಚೈತ್ರಾ ನಾಚಿಕೆಯಾಗುತ್ತಿದೆ ಎಂದು ಉತ್ತರಿಸಿದ್ದಾರೆ. 
 

Latest Videos

click me!