ವಕೀಲೆಯಾಗಿ ಕಿರುತೆರೆಗೆ ಸ್ಯಾಂಡಲ್‌ವುಡ್ ಬ್ಯೂಟಿ ಹರಿಪ್ರಿಯಾ…. ಪ್ರೋಮೋ ನೀಡಿ ಸರ್ಪ್ರೈಸ್ ಕೊಟ್ಟ ಸ್ಟಾರ್ ಸುವರ್ಣ

Published : Apr 06, 2024, 03:39 PM IST

ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಹರಿಪ್ರಿಯಾ ಅವರು ಸಿನಿಮಾ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ರಾ? ಕುತೂಹಲ ಹುಟ್ಟಿಹಾಕಿದ ಸ್ಟಾರ್ ಸುವರ್ಣ ಪೋಮೋ.   

PREV
17
ವಕೀಲೆಯಾಗಿ ಕಿರುತೆರೆಗೆ ಸ್ಯಾಂಡಲ್‌ವುಡ್ ಬ್ಯೂಟಿ ಹರಿಪ್ರಿಯಾ…. ಪ್ರೋಮೋ ನೀಡಿ ಸರ್ಪ್ರೈಸ್ ಕೊಟ್ಟ ಸ್ಟಾರ್ ಸುವರ್ಣ

ಕನ್ನಡ ಸಿನಿಮಾರಂಗದ ಜನಪ್ರಿಯ ನಟಿ ಹರಿಪ್ರಿಯಾ (Haripriya). ಕನ್ನಡ, ತಮಿಳು, ತೆಲುಗು ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಈ ಕನ್ನಡದ ಚೆಲುವೆ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 6 ಸಿನಿಮಾಗಳು ನಟಿಯ ಕೈಯಲ್ಲಿದೆ. 

27

ಇದೆಲ್ಲದರ ನಡುವೆ ಹರಿಪ್ರಿಯಾ ಅವರ ಪ್ರೋಮೋ ಒಂದನ್ನು ಸ್ಟಾರ್ ಸುವರ್ಣ (Star Suvarna) ವಾಹಿನಿ ಸೋಶಿಯಲ್ ಮೀಡೀಯಾದಲ್ಲಿ ಹರಿಯಬಿಟ್ಟಿದ್ದು, ಇದು ಭಾರೀ ಕುತೂಹಲವನ್ನು ಕೆರಳಿಸಿದ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹರಿಪ್ರಿಯ, ಕಿರುತೆರೆಯಲ್ಲೂ ನಟಿಸಲಿದ್ದಾರೆಯೇ? ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.
 

37

ಪ್ರೋಮೋ ಒಂದನ್ನು ಶೇರ್ ಮಾಡಿರುವ ಸ್ಟಾರ್ ಸುವರ್ಣ. ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ (beauty queen) ಹರಿಪ್ರಿಯಾ ಶೀಘ್ರದಲ್ಲಿ! ಎಂದಷ್ಟೇ ಬರೆದುಕೊಂಡಿದೆ. 
 

47

ವಕೀಲೆಯಾಗಿ ಕಾಣಿಸುತ್ತಿರುವ ಹರಿಪ್ರಿಯಾ ಅವರ ಸಿನಿಮಾ ಸುವರ್ಣ ವಾಹಿನಿಯಲ್ಲಿ ಬರಲಿದೆಯೋ? ಅಥವಾ ಸಿನಿಮಾ ಬಿಟ್ಟು ಕಿರುತೆರೆಯ ಹೊಸ ಧಾರಾವಾಹಿಯಲ್ಲಿ ಹರಿಪ್ರಿಯ ವಕೀಲೆಯಾಗಿ ನಟಿಸ್ತಿದ್ದಾರೆಯೇ? ಅಥವಾ ಯಾವುದೋ ಸೀರಿಯಲ್ ಗೆ (Serial) ವಿಶೇಷ ಅತಿಥಿಯಾಗಿ ಎಂಟ್ರಿ ಕೊಡ್ತಿದ್ದಾರೆಯೇ? ಅನ್ನೋದು ತಿಳಿದು ಬಂದಿಲ್ಲ. 

57

ಯಾವುದೇ ವಿಷಯವನ್ನು ಸರಿಯಾಗಿ ತಿಳಿಸದೇ ಹರಿಪ್ರಿಯ ವಿಡೀಯೋ ಪೋಸ್ಟ್ ಮಾಡಿರುವ ಸ್ಟಾರ್ ಸುವರ್ಣ ಬಗ್ಗೆ ಜನರಲ್ಲಿ ಭಾರಿ ಕುತೂಹಲ ಎದ್ದಿದೆ. ಜೊತೆಗೆ ಜನರು ಮೇಡಂ ಸಿನಿಮಾ ಬಿಟ್ಟು ಸೀರಿಯಲ್ ಮಾಡೋದೇ ಬೇಡ, ಸಿನಿಮಾದಲ್ಲೇ ಮುಂದುವರೆಯಿರಿ ಎನ್ನುತ್ತಿದ್ದಾರೆ. 

67

ಹೆಚ್ಚಿನ ಜನರು ಇದು ಸಿನಿಮಾನೋ, ಹೊಸ ಸೀರಿಯಲ್ ಬಗ್ಗೆ ಹೇಳ್ತಿದ್ದೀರಾ,  ಅಹನಾ ಅಗ್ನಿಹೋತ್ರ ಅನ್ನೋದು ಸೀರಿಯಲ್ ಹೆಸರೇ? ಅಥವಾ ಯಾವುದಾದರೂ ಸಿರಿಯಲ್ ನಲ್ಲಿ ಗೆಸ್ಟ್ ಅಪಿಯರೆನ್ಸ್ ಆಗಿ ಬರ್ತಿದ್ದಾರೆ, ಏನೇ ಇದ್ರು ಸರಿಯಾಗಿ ಹೇಳಿ ಎಂದು ಸಹ ಕೇಳ್ತಿದ್ದಾರೆ ಜನ. ಯಾವುದಕ್ಕೂ ಕಾದು ನೋಡಬೇಕು. 

77

ಸದ್ಯ ಹರಿಪ್ರಿಯ ಬೆಲ್ ಬಾಟಮ್ 2 (Bell Bottom 2), ಹ್ಯಾಪಿ ಎಂಡಿಂಗ್, ಲಗಾಮ್ ಮತ್ತು ಇನ್ನೂ ಹೆಸರಿಡದ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ಅಮೃತಮತಿ, ತಾಯಿ ಕಸ್ತೂರ್ ಗಾಂಧಿ ಎನ್ನುವ ಎರಡು ಸಿನಿಮಾಗಳು ಸಹ ಹರಿಪ್ರಿಯ ಕೈಯಲ್ಲಿದೆ. 

Read more Photos on
click me!

Recommended Stories