ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ಮಾರುತ್ತೇನೆ ಅಂದ್ರು ರಶ್ಮಿಕಾ; ಫುಲ್ ಶಾಕ್ ಆಗಿದಾರೆ ಫ್ಯಾನ್ಸ್!

First Published | Mar 13, 2024, 7:44 PM IST

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಶ್ಮಿಕಾಗೆ ಫ್ಯಾನ್ಸ್ 'ಕರ್ನಾಟಕ ಕ್ರಶ್' ಬಿರುದು ನೀಡಿದ್ದರು. ಬಳಿಕ ನಟ ವಿಜಯ್ ದೇವರಕೊಂಡ ಜತೆ 'ಗೀತ ಗೋವಿಂದಂ' ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಸಖತ್ ಸಂಚಲನ ಸೃಷ್ಟಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಾತನಾಡಿದರೂ, ಕೆಲವೊಮ್ಮೆ ಮಾತನ್ನೇ ಆಡದೇ ಕೇವಲ ರಿಯಾಕ್ಷನ್ ಮಾಡಿದರೂ ಸುದ್ದಿಯೇ ಆಗಿಬಿಡುತ್ತದೆ. 

ಇತ್ತೀಚೆಗೆ ಚಿಟ್‌ ಚಾಟ್‌ನಲ್ಲಿದ್ದ ರಶ್ಮಿಕಾ, 'ನನಗೆ ಪಾನೀಪುರಿ ಮಾರಬೇಕೆಂದು ಬಯಕೆ ಆಗಿದೆ' ಎಂದಿದ್ದಾರೆ. ಪಕ್ಕದಲ್ಲಿದ್ದ ನಿರೂಪಕಿ ಶಾಕ್ ಆಗಿದ್ದರೂ ನಕ್ಕು 'ಹೌದಾ' ಅದ್ಯಾಕೆ ಹಾಗೆ..' ಎಂದು ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ಕೂಲ್ ಆಗಿ ಉತ್ತರಿಸಿದ್ದಾರೆ.

Tap to resize

ಅದಕ್ಕೆ ನಟಿ ರಶ್ಮಿಕಾ 'ಹೌದು, ಅದ್ಯಾಕೋ ಗೊತ್ತಿಲ್ಲ, ನನಗೆ ಹಾಗೆ ಅನ್ನಿಸುತ್ತಿದೆ. ನಾನು ಒಂದು ದಿನ ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ತಯಾರಿಸಿ 'ಪಾನೀಪುರಿ ಪಾನೀಪುರಿ..' ಎನ್ನುತ್ತಾ ಅದನ್ನು ಮಾರಬೇಕು. ಅದೊಂಥರಾ ಮಜವಾಗಿರುತ್ತದೆ, ಖುಷಿ ಕೊಡುತ್ತದೆ' ಎಂದಿದ್ದಾರೆ. 
 

ಪಕದಲ್ಲಿದ್ದ ನಿರೂಪಕಿ ರಶ್ಮಿಕಾ ಮಾತಿಗೆ ಅಚ್ಚರಿ ಹಾಗು ಖುಷಿ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಸಿಂಪಲ್ ಲೈಫ್‌ನ್ನು ಕೂಡ ಎಂಜಾಯ್ ಮಾಡುವ ಮೆಂಟಾಲಿಟಿ ಹೊಂದಿದ್ದಾರೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ ಎನ್ನಬಹುದು. 
 

ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಶ್ಮಿಕಾಗೆ ಫ್ಯಾನ್ಸ್ 'ಕರ್ನಾಟಕ ಕ್ರಶ್' ಬಿರುದು ನೀಡಿದ್ದರು. ಬಳಿಕ ನಟ ವಿಜಯ್ ದೇವರಕೊಂಡ ಜತೆ 'ಗೀತ ಗೋವಿಂದಂ' ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಸಖತ್ ಸಂಚಲನ ಸೃಷ್ಟಿಸಿದ್ದಾರೆ. 

ಅಲ್ಲಿಂದ ತಮಿಳು, ಬಳಿಕ ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಈಗ 'ನ್ಯಾಷನಲ್ ಕ್ರಶ್‌' ಆಗಿ ಗುರುತಿಸಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸದ್ಯ ಬಾಲಿವುಡ್, ತಮಿಳು ಹಾಗು ತೆಲುಗು ಚಿತ್ರರಂಗಗಳಲ್ಲಿಯೇ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. 

ಅಂದಹಾಗೆ, ನಟಿ ರಶ್ಮಿಕಾ ಈಗ ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಇತ್ತಿಚೆಗಷ್ಟೇ ತಮಿಳು ನಟ ಧನುಷ್ ನಟನೆಯ 'ಕುಬೇರ' ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಆಗಿರುವ ರಶ್ಮಿಕಾ ಮಂದಣ್ಣ ಆ ಚಿತ್ರದ ಶೂಟಿಂಗ್‌ಗೆ ಕೂಡ ಹಾಜರಾಗುತ್ತಿದ್ದಾರೆ. 
 

ಒಟ್ಟಿನಲ್ಲಿ, ಕಾಲಿಟ್ಟ ಕಡೆಯಲ್ಲೆಲ್ಲ ಸಕ್ಸಸ್ ಕಂಡಿರುವ ರಶ್ಮಿಕಾಗೆ ಸದ್ಯವೇ ಕಂಕಣ ಭಾಗ್ಯ ಕೂಡಿ ಬರಲಿದೆ ಎನ್ನಲಾಗುತ್ತಿದೆ. ನಟ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಗಾಸಿಪ್ ಹಂತದಲ್ಲೇ ಇದೆ, ಇಬ್ಬರೂ ಈ ಸುದ್ದಿಯನ್ನು ಕನ್ಫರ್ಮ್ ಮಾಡಿಲ್ಲ. 
 

Latest Videos

click me!