ಸಡನ್ ಆಗಿ ಬದಲಾದ ಐಶಾನಿ ಶೆಟ್ಟಿ: So Sad ಅಂತಿದ್ದಾರೆ ನೆಟ್ಟಿಗರು!

Published : Oct 19, 2023, 12:32 PM IST

'ವಾಸ್ತು ಪ್ರಕಾರ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಐಶಾನಿ ಶೆಟ್ಟಿ ತಮ್ಮ ಡಿಸೆಂಟ್‌ ನೋಟದ ಮೂಲಕ ಸಿನಿರಸಿಕರ ಮನಗೆದ್ದ ಚೆಲುವೆ. 'ರಾಕೆಟ್‌' ಸಿನಿಮಾದಲ್ಲಿ ಕ್ಯೂಟ್‌ ಆಕ್ಟ್‌ ಮೂಲಕ ಪ್ರೇಕ್ಷಕರ ಮನಗೆದ್ದ ಚೆಲುವೆಯ ನ್ಯೂ ಲುಕ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

PREV
17
ಸಡನ್ ಆಗಿ ಬದಲಾದ ಐಶಾನಿ ಶೆಟ್ಟಿ: So Sad ಅಂತಿದ್ದಾರೆ ನೆಟ್ಟಿಗರು!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಐಶಾನಿ ಶೆಟ್ಟಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುದ್ದು ಗೊಂಬೆಯ ಸಡನ್ನಾಗಿ ಈ ತರ ಯಾಕೆ ಬದಲಾದ್ರು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

27

ಐಶಾನಿ ಶೆಟ್ಟಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಮುದ್ದು ಮುಖದ ಗೊಂಬೆ, ಸುಂದರಿ, ಸೋ ಸೆಕ್ಸಿ ಬೇಬಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

37

ಆದರೆ ಮತ್ತೊಬ್ಬ ನೆಟ್ಟಿಗ, ರೀ ಮೇಡಂ ಹೊಸ ಫೋಟೋಗಳನ್ನು ಅಪ್‌ಲೋಡ್ ಮಾಡಿ. 2 ವರ್ಷದ ಹಿಂದಿನ ಪೋಟೋಗಳನ್ನು ಅಪ್‌ಲೋಡ್ ಮಾಡ್ತೀರಾ ನಾನು ನಿಮ್ಮ ಫ್ಯಾನ್. ಇನ್ನು ಮುಂದಾದರೂ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿ, ಸೋ ಸ್ಯಾಡ್ ಮೇಡಂ ಎಂದು ಪ್ರತಿಕ್ರಿಯೆ ನೀಡಿದ್ದಾನೆ. 

47

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಐಶಾನಿ ಶೆಟ್ಟಿ 2015 ರಲ್ಲಿ ‘ವಾಸ್ತು ಪ್ರಕಾರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ‘ಪ್ಲಸ್’, ‘ರಾಕೆಟ್’, ‘ನಡುವೆ ಅಂತರವಿರಲಿ’, ‘ನಮ್ ಗಣಿ ಬಿಕಾಂ ಪಾಸ್’, ‘ಧರಣಿ ಮಂಡಲ ಮಧ್ಯದೊಳಗೆ’ ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದಾರೆ. 

57

ಇತ್ತೀಚೆಗಷ್ಟೇ ಐಶಾನಿ ಶೆಟ್ಟಿ ಅಭಿನಯದ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಯಾಗಿತ್ತು. ಓಟಿಟಿ ವೇದಿಕೆಯಲ್ಲಿ ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.

67

ಕನ್ನಡದ ನಟಿ ಐಶಾನಿ ಶೆಟ್ಟಿ ಒಂದು ರೀತಿ ಮಲ್ಟಿ ಟ್ಯಾಲೆಂಟೆಡ್ ನಾಯಕಿ ನಟಿ ಅಂದ್ರೆ ಯಾರೂ ತಪ್ಪು ತಿಳಿದುಕೊಳ್ಳೋದಿಲ್ಲ. ಹೌದು ಇದು ನಿಜ ಅಂತಲೇ ಇಂಡಸ್ಟ್ರೀಯ ಜನ ಕೂಡ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಬಲವಾದ ಕಾರಣವೂ ಇದೆ. 

77

ಐಶಾನಿ ಶೆಟ್ಟಿ ನಟಿಯಷ್ಟೇ ಅಲ್ಲ, ನಿರ್ದೇಶಕಿ ಕೂಡ ಹೌದು. ಕಾಜಿ ಹೆಸರಿನ ಪುಟ್ಟ ಸಿನಿಮಾವನ್ನ ನಿರ್ದೇಶನ ಮಾಡಿ ಐಶಾನಿ ಭೇಷ್ ಎನಿಸಿಕೊಂಡಿದ್ದಾರೆ. ತುಂಬಾ ಚಂದದ ಕಥೆ ಇದಾಗಿತ್ತು. ಮಹಿಳೆಯೊಬ್ಬಳ ಕೈ ಬಳೆಯ ಕಥೆ ಇದಾಗಿತ್ತು. ಬಳೆಗೆ ತುಳು ಭಾಷೆಯಲ್ಲಿ ಕಾಜಿ ಅಂತಲೇ ಕರೆಯುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories