'ಕಾಂತಾರ ಚಾಪ್ಟರ್-1' ಚಿತ್ರವು ಹಿಂದಿ ಡಬ್ಬಿಂಗ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಹಿಂದಿಯಲ್ಲಿ ಅತಿ ಹೆಚ್ಚು ಆರಂಭಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 'ಪುಷ್ಪ 2' ಮತ್ತು 'ಕೆಜಿಎಫ್ 2' ಮೊದಲ ಎರಡು ಸ್ಥಾನಗಳಲ್ಲಿದ್ದರೆ, 'ಕಾಂತಾರ ಚಾಪ್ಟರ್-1' ಎಷ್ಟನೇ ಸ್ಥಾನದಲ್ಲಿದೆ?
ಕಾಂತಾರ ಚಾಪ್ಟರ್-1 (Kantara Chapter 1) ಸಕತ್ ಸೌಂಡ್ ಮಾಡುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ 7 ಸಾವಿರಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಬಾಲಿವುಡ್ ಅನ್ನು ಮೀರಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಇದು ಕಾರಣವಾಗಿದೆ. ಇದಾಗಲೇ ಹೇಳಿದಂತೆ ಈ ಚಿತ್ರವು ಹಿಂದಿಯಲ್ಲಿಯೂ ಡಬ್ ಮಾಡಲಾಗಿದೆ. ಹಾಗಿದ್ದರೆ, ಆರಂಭದ ದಿನವೇ ಹೈಯೆಸ್ಟ್ ಕಲೆಕ್ಷನ್ ಮಾಡಿರುವ ಹಿಂದಿ ಡಬ್ಬಿಂಗ್ ದಕ್ಷಿಣದ ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ ಚಾಪ್ಟರ್-1ಕ್ಕೆ ಎಷ್ಟನೇ ಸ್ಥಾನವಿದೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಹಾಗಿದ್ದರೆ ಹಿಂದಿಗೆ ಡಬ್ ಆಗಿರೋ ಸೌತ್ ಸಿನಿಮಾಗಳ ಟಾಪ್ 10ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
27
ಪುಷ್ಪ 2 ದಾಖಲೆ
ಮೊದಲ ಸ್ಥಾನದಲ್ಲಿ ಇರುವುದು ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಮಟ್ಟದ ಪುಷ್ಪ 2: ದಿ ರೂಲ್. ಇದು ಹಿಂದಿ ಡಬ್ನಲ್ಲಿ 72 ಕೋಟಿ ರೂ. ಓಪನಿಂಗ್ ಡೇಯಲ್ಲಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಇತಿಹಾಸ ಸೃಷ್ಟಿಸಿದೆ. ಈ ಸಂಖ್ಯೆಯು ಪ್ರತಿ ಇತರ ದಕ್ಷಿಣ ಬಿಡುಗಡೆಗಿಂತ ಬಹಳ ಮುಂದಿದೆ ಮತ್ತು ಪುಷ್ಪ 2 ಅನ್ನು ನಿಜವಾದ ಪ್ಯಾನ್-ಇಂಡಿಯಾ ದೈತ್ಯ ಎಂದು ದೃಢವಾಗಿ ಬಿಂಬಿಸಿದೆ.
37
ಕನ್ನಡಕ್ಕೆ ಒಲಿದ 2ನೇ ಸ್ಥಾನ
ಎರಡನೆಯ ಸ್ಥಾನದಲ್ಲಿ ಇರುವುದು ಕನ್ನಡ ಸೂಪರ್‌ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್-2! ಇದು 53.95 ಕೋಟಿ ನಿವ್ವಳ ಓಪನಿಂಗ್‌ನೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಪುಷ್ಪ-2 ಬರುವವರೆಗೂ ಈ ದಾಖಲೆ ಬಲವಾಗಿತ್ತು. ಇನ್ನು ಮೂರನೆಯ ಸ್ಥಾನದಲ್ಲಿ ಎಸ್‌ಎಸ್ ರಾಜಮೌಳಿ ಅವರ ಮಹಾಕಾವ್ಯ ಬ್ಲಾಕ್‌ಬಸ್ಟರ್ ಬಾಹುಬಲಿ 2: ದಿ ಕನ್ಕ್ಲೂಷನ್ ಇದೆ. ಇದರ ಗಳಿಕೆ 41 ಕೋಟಿ ರೂ. ಗಮನಿಸಬೇಕಾದ ಅಂಶವೆಂದರೆ, ಹಿಂದಿ ಬೆಲ್ಟ್‌ಗಳಲ್ಲಿ ದಕ್ಷಿಣದ ಪ್ರಾಬಲ್ಯಕ್ಕೆ ಬಾಗಿಲು ತೆರೆದಿದ್ದು ಬಾಹುಬಲಿ ಫ್ರಾಂಚೈಸ್.
ಹಿಂದಿ ಮಾರುಕಟ್ಟೆಯಲ್ಲಿ ಸುಲಭವಾಗಿ ಅತಿದೊಡ್ಡ ದಕ್ಷಿಣ ಭಾರತದ ತಾರೆ ಪ್ರಭಾಸ್. ಟಾಪ್ 10 ರ ಪಟ್ಟಿಯಲ್ಲಿ ಇವರು ಹಲವಾರು ದಾಖಲೆ ಬರೆದಿದ್ದಾರೆ. ಇವರ ನಟನೆಯ ಸಾಹೋ ಟಾಪ್ 4ನೇ ಸ್ಥಾನ ಪಡೆದುಕೊಂಡಿದೆ. ಇದರ ಗಳಿಗೆ 24.40 ಕೋಟಿ ರೂಪಾಯಿ. ಇನ್ನು 5ನೇ ಸ್ಥಾನದಲ್ಲಿ ಇರುವುದು ಕಲ್ಕಿ 2898 AD. ಇದರ ಗಳಿಕೆ 22.50 ಕೋಟಿ ರೂ. ಅದಾದ ಬಳಿಕ 6ನೇ ಸ್ಥಾನದಲ್ಲಿ ರೋಬೋಟ್-02 ಇದ್ದು ಇದರ ಗಳಿಕೆ 20.25 ಕೋಟಿ ರೂಪಾಯಿ.
57
ಕಾಂತಾರ ಚಾಪ್ಟರ್-1ಗೆ 8ನೇ ಸ್ಥಾನ
7ನೇ ಸ್ಥಾನದಲ್ಲಿರುವುದು ರಾಜಮೌಳಿ ಅವರ RRR. ಇದರ ಗಳಿಕೆ 20.07 ಕೋಟಿಯಾದರೆ, ಕಾಂತಾರಾ ಚಾಪ್ಟರ್-1 ಹಿಂದಿಯ ಡಬ್ನಲ್ಲಿ ಓಪನಿಂಗ್ ಡೇ ಗಳಿಕೆಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಇದರ ಗಳಿಕೆ 18.50 ಕೋಟಿ ರೂ. ಅದಾದ ಬಳಿಕ 9ನೇ ಸ್ಥಾನದಲ್ಲಿ ಸಲಾರ್ ಸೀಜ್ಫೈರ್ ಮತ್ತು 10ನೇ ಸ್ಥಾನದಲ್ಲಿ ಗೇಮ್ ಚೇಂಜರ್ ಚಿತ್ರಗಳಿವೆ.
67
ಬಹುದೊಡ್ಡ ಸಾಧನೆಯ ಕಾಂತಾರಾ
ಇನ್ನು ಓವರ್ ಆಲ್ ಆಗಿ ಹೇಳುವುದಾದರೆ, ಕಾಂತಾರ: ಚಾಪ್ಟರ್ 1 ಕೇವಲ 2 ದಿನಗಳಲ್ಲಿ 100 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಈ ವರ್ಷದ ಎರಡನೇ 100 ಕೋಟಿ ಗಳಿಸಿದ ಕನ್ನಡ ಚಿತ್ರವಾಗಿದೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ 'ಕೆಜಿಎಫ್ 2' ನಂತರದ ದೊಡ್ಡ ಸಾಧನೆ ಮಾಡಿದೆ.
77
ಕಲೆಕ್ಷನ್ ಹೀಗಿದೆ...
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ ಮೊದಲಾದವರು ನಟಿಸಿರೋ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಈ ಚಿತ್ರ ಮೊದಲ ದಿನ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಿದೆ. ಈ ಸಿನಿಮಾ ಶುಕ್ರವಾರ 43.65 ಕೋಟಿ ರೂಪಾಯಿ ಗಳಿಕೆ ಮಾಡಿದೆ.