ಒಂದು ಪ್ರದರ್ಶನಕ್ಕೆ ಒದ್ದಾಡಿದ ದಿನದಿಂದ 5000 ಹೌಸ್‌ಫುಲ್‌ ಶೋವರೆಗೆ: ರಿಷಬ್ ಶೆಟ್ಟಿ

Published : Oct 04, 2025, 05:56 AM IST

ರಿಷಬ್‌ ಶೆಟ್ಟಿ ಉಲ್ಲೇಖಿಸಿರುವ 2016ರ ಪೋಸ್ಟ್‌ ಸಹ ಈಗ ಟ್ರೆಂಡಿಂಗ್‌ನಲ್ಲಿದೆ. ಇದು ರಿಷಬ್‌ ಚೊಚ್ಚಲ ನಿರ್ದೇಶನದ, ರಕ್ಷಿತ್‌ ಶೆಟ್ಟಿ ನಟನೆಯ ‘ರಿಕ್ಕಿ’ ಸಿನಿಮಾದ ಕುರಿತಾದ ಪೋಸ್ಟ್‌ ಆಗಿದೆ.

PREV
15
ನಾನು ನಿಮಗೆ ಸದಾ ಋಣಿ

‘2016ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್‌ಫುಲ್‌ ಶೋಗಳವರೆಗಿನ ಈ ಪಯಣ ಅದ್ಭುತ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ’ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

25
ಟ್ರೆಂಡಿಂಗ್‌ನಲ್ಲಿದೆ 2016ರ ಪೋಸ್ಟ್‌

ರಿಷಬ್‌ ಶೆಟ್ಟಿ ಉಲ್ಲೇಖಿಸಿರುವ 2016ರ ಪೋಸ್ಟ್‌ ಸಹ ಈಗ ಟ್ರೆಂಡಿಂಗ್‌ನಲ್ಲಿದೆ. ಅಂತೂ ಇಂತೂ ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್‌ ಸಿನಿಮಾನಲ್ಲಿ ನಾಳೆಯಿಂದ ಸಂಜೆ 7ಗಂಟೆ ಶೋ ಸಿಕ್ಕಿದೆ.

35
ಟಿಕೆಟ್‌ ಬುಕ್‌ ಮಾಡಿ

ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್‌ ಬುಕ್‌ ಮಾಡಿ ಎಂದು ರಿಷಬ್‌ ಈ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ಇದು ರಿಷಬ್‌ ಚೊಚ್ಚಲ ನಿರ್ದೇಶನದ, ರಕ್ಷಿತ್‌ ಶೆಟ್ಟಿ ನಟನೆಯ ‘ರಿಕ್ಕಿ’ ಸಿನಿಮಾದ ಕುರಿತಾದ ಪೋಸ್ಟ್‌ ಆಗಿದೆ.

45
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾ

ರಿಷಬ್‌ ಶೆಟ್ಟಿಯವರ ಕಾಂತಾರ ಚಾಪ್ಟರ್‌ 1 ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಕರ್ನಾಟಕ, ದೇಶ-ವಿದೇಶದಾದ್ಯಂತ ಹೌಸ್‌ಫುಲ್‌ ಪ್ರದರ್ಶನ ಕಂಡು ಸಿನಿಮಾ ಹವಾ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ.

55
ಸಿನಿಮಾಗೆ ಮೆಗಾ ಓಪನಿಂಗ್

2022ರಲ್ಲಿ ಬಂದ ಕಾಂತಾರ ವಿಶ್ವದಾದ್ಯಂತ ಪ್ರಶಂಸೆ ಪಡೆದ ಮೇಲೆ, ಅದರ ಪ್ರೀಕ್ವೆಲ್ ಮಾಡೋ ಸಾಹಸಕ್ಕೆ ಕೈ ಹಾಕಿದ್ರು. ನಿರಂತರ 3 ವರ್ಷಗಳ ಸಾಹಸ ಬಳಿಕ ಕಾಂತಾರ ಚಾಪ್ಟರ್-1 ಸಿದ್ದಗೊಂಡಿದೆ. ಸದ್ಯ ವಿಶ್ವದಾದ್ಯಂತ ಸಿನಿಮಾಗೆ ಮೆಗಾ ಓಪನಿಂಗ್ ಸಿಕ್ಕಿದ್ದು ರಿಷಬ್ ಪ್ರತಿಭೆಯನ್ನ ಎಲ್ಲರೂ ಕೊಂಡಾಡ್ತಾ ಇದ್ದಾರೆ.

Read more Photos on
click me!

Recommended Stories