RIP Spandana Vijay: ಸೌಮ್ಯ ಮುಖದ ಸುಂದರ ಹಠಮಾರಿ ಸ್ಪಂದನಾ ಸೀರೆ ಕ್ರೇಜ್

Published : Aug 07, 2023, 03:13 PM IST

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಆ.6ರಂದು ಬ್ಯಾಂಕಾಂಕ್‌ನಲ್ಲಿ ನಿಧನರಾಗಿದ್ದು, ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಸ್ಪಂದನಾ ಮತ್ತು ವಿಜಯ್ ಅವರ ದಾಂಪತ್ಯ ಜೀವನ ಅನೇಕರಿಗೆ ಆದರ್ಶವಾಗಿತ್ತು.   

PREV
112
RIP Spandana Vijay: ಸೌಮ್ಯ ಮುಖದ ಸುಂದರ ಹಠಮಾರಿ ಸ್ಪಂದನಾ ಸೀರೆ ಕ್ರೇಜ್

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನೇಕ ಸೀರೆಯುಟ್ಟ ಫೋಟೋಗಳನ್ನು  ಸ್ಪಂದನಾ ವಿಜಯ್ ಅಪ್‌ಲೋಡ್ ಮಾಡಿದ್ದಾರೆ. ಸೀರೆಯಲ್ಲಿ ಆಕೆ ಅಪ್ಪಟ ಸೌಂದರ್ಯ ಕಣ್ಣು ಕುಕ್ಕುವಂತಿದೆ.

212

ಸೌಮ್ಯ ಸ್ವಭಾವದ ಸುಂದರಿ ಸ್ಪಂದನಾ ಅವರಿಗೆ ಸೀರೆ ಎಂದರೆ ಅಚ್ಚುಮೆಚ್ಚು. ನವರಾತ್ರಿ ಹಬ್ಬದ ಸಮಯದಲ್ಲಿ ಪ್ರತೀದಿನ ವಿವಿಧ ಬಣ್ಣದ ಸೀರೆಯುಟ್ಟು  ಮಿಂಚಿದ್ದರು.

312

ವಿಜಯ್‌ ಪತ್ನಿ ಸ್ಪಂದನಾ ಅವರು  ಮೂರು ದಿನಗಳ ಹಿಂದೆ ಬ್ಯಾಂಕಾಕ್‌ (Bankok) ಪ್ರವಾಸಕ್ಕೆ ತೆರಳಿದ್ದಾಗ ಲೋ ಬಿಪಿ ಮತ್ತು ಹೃದಯಾಘಾತವಾಗಿದೆ. 

412

ಇನ್ನು ಸ್ಪಂದನಾ ವಿಜಯ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಭಾರತೀಯ ರಾಯಭಾರ ಕಛೇರಿ ಮತ್ತು ಥೈಲ್ಯಾಂಡ್ ರಾಯಭಾರ ಕಛೇರಿ ನಡುವೆ ಮಾತುಕತೆ ನಡೆದಿದ್ದು, ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ

512

ಅಪ್ಪು ನಿಧನದ ಶಾಕ್‌ನಿಂದ ಹೊರಬರುವ ಮುನ್ನವೇ ರಾಜ್ ಕುಟುಂಬ ಮತ್ತು ಸಂಬಂಧಿಕರಿಗೆ ಮತ್ತೊಂದು ಆಘಾತಕಾರಿ ವಿಚಾರ  ಶಾಕ್‌ ನೀಡಿದೆ.

612

ಪುನೀತ್ ರಾಜ್​ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಗ ಸ್ಪಂದನಾ ಕೂಡ ನಿಧನ ಹೊಂದಿದ್ದು ನಿಜಕ್ಕೂ ಶಾಕಿಂಗ್ ಆಗಿದೆ.  

712

2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ  ಅವರು ಪ್ರೇಮ ವಿವಾಹವಾಗಿದ್ದರು. ವಿಜಯ್‌ ಪ್ರಪಂಚದಲ್ಲಿ ಪತ್ನಿಗೆ ಮೊದಲ ಸ್ಥಾನ ನೀಡಿದ್ದರು. ಇವರಿಗೆ ಶೌರ್ಯ ಎಂಬ ಮಗನಿದ್ದಾನೆ.

812

2016ರಲ್ಲಿ ಸ್ಪಂದನಾ ಅವರು  ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ  ನಟಿಸಿದ್ದರು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

912

ಇನ್ನು 19 ದಿನ ಕಳೆದಿದ್ದರೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದರಲ್ಲಿತ್ತು. ಆದರೆ ವಿಧಿಯ ಕ್ರೂರತೆಗೆ ಸ್ಪಂದನಾ ನಿಧನರಾಗಿದ್ದಾರೆ.

1012

ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಅವರ ಚಿನ್ನದಂತ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಪ್ರೀತಿಯ ಮಡದಿ ವಿಜಯ್‌ ಅವರನ್ನು ಬಿಟ್ಟು ಸ್ಪಂದನಾ ಬಾರದ ಲೋಕಕ್ಕೆ ಮರಳಿದ್ದಾರೆ.

1112

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಮುದ್ದಾದ ಜೋಡಿ. ಇಡೀ ಚಿತ್ರರಂಗ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಕೂಡ ಈ ಸುದ್ದಿ ಶಾಕ್ ತಂದಿದೆ.

1212

ಸ್ಪಂದನಾ ಇತ್ತೀಚೆಗೆ ತೂಕ ಇಳಿಸಿಕೊಂಡಿದ್ದರು. 16 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಅವರಿಗೆ 39 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
 

Read more Photos on
click me!

Recommended Stories