ಈ ಮುದ್ದು ಬಾಲೆ ಸ್ಯಾಂಡಲ್'ವುಡ್’ನ ಸ್ಟಾರ್ ನಟಿ ..ಈಕೆಯ ಪತಿ‌ ಕೂಡ ನಟ.. ಯಾರು ಗೆಸ್ ಮಾಡಿ…

First Published | Nov 5, 2024, 3:18 PM IST

ಈ ಫೋಟೊದಲ್ಲಿರೋ ಪುಟ್ಟ ಬಾಲೆ ಕನ್ನಡ ಸಿನಿಮಾಗಳಲ್ಲಿ ಮಿಂಚಿದ ಸ್ಟಾರ್ ನಟಿ, ಈಕೆ ಗಂಡ ಕೂಡ ಸಿನಿಮಾದಲ್ಲಿ ಹೀರೋ, ವಿಲನ್ ಆಗಿ ಮಿಂಚಿದವರು ಯಾರ್ ಗೊತ್ತಾ? 
 

ಈ ಬ್ಲ್ಯಾಕ್ ಅಂಡ್ ವೈಟ್ ಫೋಟೊದಲ್ಲಿ ತುಂಬಾನೆ ಮುಗ್ಧೆಯಾಗಿ ಕಾಣಿಸ್ತಿರೋ ಈ ಮುದ್ದು ಚೆಲುವೆ ಯಾರು ಅನ್ನೋದು ನಿಮಗೆ ಗೊತ್ತಾ? ಈ ಮುದ್ದು ಬಾಲೆ ಸ್ಯಾಂಡಲ್ ವುಡ್ ನಟಿ, ಸಿನಿಮಾಗಳಲ್ಲಿ ಹೀರೋ, ವಿಲನ್ ಪಾತ್ರಗಳಲ್ಲಿ ಮಿಂಚಿದ ನಟನನ್ನು ಮದುವೆಯಾಗಿ ಇತ್ತೀಚೆಗಷ್ಟೇ ಗುಡ್ ನ್ಯೂಸ್ ಕೊಟ್ಟ ಬೆಡಗಿ ಈಕೆ… ಇನ್ನಾದರೂ ಗೆಸ್ ಮಾಡಬಹುದು ಅಲ್ವಾ? 
 

ಆ ಕಣ್ಣುಗಳನ್ನ ನೋಡಿದ್ರೆ ಗೊತ್ತಾಗುತ್ತೆ ಯಾರು ಅನ್ನೋದು, ಇದು ಬೇರೆ ಯಾರೂ ಅಲ್ಲ, ಚಂದನವನದ ಸುಂದ್ರಿ ಸ್ಟಾರ್ ನಟಿ ಹರಿಪ್ರಿಯಾ (Haripriya) ಆವರ ಬಾಲ್ಯದ ಫೋಟೊ. ಈ ಫೋಟೊವನ್ನು ಇತ್ತೀಚೆಗೆ ನಟಿಯ ಹುಟ್ಟುಹಬ್ಬದ ದಿನ ಪತಿ ವಸಿಷ್ಠ ಸಿಂಹ ಶೇರ್ ಮಾಡಿದ ಫೋಟೊ ಇದಾಗಿದೆ. 
 

Tap to resize

ಕಳೆದ ವರ್ಷ ಜನವರಿ 26ರಂದು ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ, ಇದೀಗ ಮದುವೆಯಾಗಿ ಎರಡು ವರ್ಷ ತುಂಬುತ್ತಿದ್ದಂತೆ ಗುಡ್ ನ್ಯೂಸ್ ನೀಡಿದ್ದಾರೆ. ತಾವಿಬ್ಬರು ಪೋಷಕರಾಗುತ್ತಿರೋದಾಗಿ ಈ ಜೋಡಿ ತಿಳಿಸಿದ್ದಾರೆ. 
 

ಅಕ್ಟೋಬರ್ 29ರಂದು ಹರಿಪ್ರಿಯಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಸೆಲೆಬ್ರೇಷನ್ ಗಾಗಿ ಈ ಜೋಡಿ ಮಾಲ್ಡೀವ್ಸ್ ಗೆ ತೆರಳಿದ್ದರು. ಅಲ್ಲಿನ ಮುದ್ದಾದ ವಿಡೀಯೋಗಳನ್ನು ಶೇರ್ ಮಾಡುವ ಮೂಲಕ ಹರಿಪ್ರಿಯಾ ತಾವು ಗರ್ಭಿಣಿ ಅನ್ನೋದನ್ನು ತಿಳಿಸಿದ್ದರು. ಹರಿಪ್ರಿಯಾ ಅವರಿಗೆ 5 ತಿಂಗಳಾಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಡೆಲಿವರಿಯಾಗುವ ಸಾಧ್ಯತೆ ಇದೆ. 
 

Haripriya

ತಾವು ತಾಯಿಯಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿರುವ ಹರಿಪ್ರಿಯಾ, ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ 'ಕುಡಿ'ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ ಎಂದು ಬರೆದುಕೊಂಡಿದ್ದರು. ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು. 

ಹರಿಪ್ರಿಯಾ ಕರಿಯರ್ ಬಗ್ಗೆ ಹೇಳೋದಾದ್ರೆ 2008ರಲ್ಲಿ ಚಂದನವನಕ್ಕೆ ಎಂಟ್ರಿ ಕೊಟ್ಟ ಹರಿಪ್ರಿಯಾ, ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.  ಬೆಲ್ ಬಾಟಮ್ 2, ಹ್ಯಾಪಿ ಎಂಡಿಂಗ್, ಲಗಾಮ್ ಹಾಗೂ ಶಶಾಂಕ್ ಅವರ ಒಂದು ಸಿನಿಮಾದಲ್ಲೂ ಹರಿಪ್ರಿಯಾ ನಟಿಸಿದ್ದು, ಈ ಸಿನಿಮಾಗಳು ಯಾವಾಗ ಬಿಡುಗಡೆಯಾಗಲಿದೆ ಅನ್ನೋದು ತಿಳಿದು ಬಂದಿಲ್ಲ. 

ಇನ್ನು ವಸಿಷ್ಠ ಸಿಂಹನ (Vasistha Simha) ಬಗ್ಗೆ ಹೇಳೋದಾದ್ರೆ ಇವರು ಗಾಯಕರೂ ಹೌದು, ನಟನೂ ಹೌದು, ಆರ್ಯಾಸ್ ಲವ್ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ವಸಿಷ್ಠ ಮೊದಲಿಗೆ ಖಳನಾಯಕನಾಗಿ ಹಾಗೂ ನಂತರದಲ್ಲಿ ನಾಯಕನಾಗಿ ಗುರುತಿಸಿಕೊಂಡವರು. ಕನ್ನಡ ಸಿನಿಮಾಗಳ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಸಿಷ್ಠ ಸಿಂಹ ಭೈರತಿ ರಣಗಲ್ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾ ಇದೇ ನವಂಬರ್ 15 ರಂದು ಬಿಡುಗಡೆಯಾಗಲಿದೆ. ಇನ್ನು ತೆಲುಗಿನ ಒಡೆಲಾ 2 ಸಿನಿಮಾದಲ್ಲೂ ವಸಿಷ್ಠ ನಟಿಸುತ್ತಿದ್ದಾರೆ.
 

Latest Videos

click me!