ಮಾನವೀಯ ಗುಣ ಹೊಂದಿದ್ದ ಗುರುಪ್ರಸಾದ್: ಬುದ್ದಿಮಾಂದ್ಯನಿಗೆ ಕಟಿಂಗ್ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದ ಡೈರೆಕ್ಟರ್‌!

First Published | Nov 3, 2024, 8:42 PM IST

ಕಾರವಾರ(ನ.03):  ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಚಿತ್ರ ನಿರ್ದೇಶಕ ಗುರುಪ್ರಸಾದ್ ಇಂದು(ಭಾನುವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಪ್ರಸಾದ್ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನಿರ್ದೇಶಕ ಗುರುಪ್ರಸಾದ್ ಅವರು ಮಾನವೀಯ ಗುಣಗಳನ್ನು ಹೊಂದಿದ್ದರು. 

ಮಾನವೀಯ ಗುಣ ಹೊಂದಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಓರ್ವ ಬುದ್ದಿಮಾಂದ್ಯನನ್ನು ಬದಲಿಸಿದ್ದರು. 2016ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಚಿತ್ರ ನಿರ್ದೇಶನ ಮಾಡಲು ಗುರುಪ್ರಸಾದ್ ಬಂದಿದ್ದ‌ರು. 

ಎರಡನೇ ಸಲ ಚಿತ್ರದ ನಿರ್ದೇಶನ ಮಾಡಲು ಬಂದಿದ್ದ ಗುರುಪ್ರಸಾದ್ ಅವರು ಈ ವೇಳೆ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎನ್ನುವ ಬುದ್ದಿಮಾಂದ್ಯನಿಗೆ ಕಟಿಂಗ್ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದರು. 

Tap to resize

ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದ ಮುತ್ತಣ್ಣ ಎಂಬ ಬುದ್ದಿಮಾಂದ್ಯನನ್ನು ಗುರುಪ್ರಸಾದ್ ಅವರು ಗಮನಿಸಿ ಆತನಿಗೆ ಕಟ್ಟಿಂಗ್ ಮಾಡಿಸಿ ಆತನಿಗೆ ಹೊಸ ಬಟ್ಟೆ ತೊಡಿಸಿದ್ದರು. 

ಬಳಿಕ ಮುತ್ತಣ್ಣನನ್ನು ಚಿತ್ರ ನಿರ್ದೇಶನದಲ್ಲಿ ಕೆಲಸ ಮಾಡಲು ಬಳಸಿಕೊಂಡಿದ್ದರು ಗುರುಪ್ರಸಾದ್.ಇವರ ಮಾನವೀಯತೆ ಗುಣಕ್ಕೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿತ್ತು. 

Latest Videos

click me!