ಸ್ಲೀವ್‌ಲೆಸ್ ಬ್ಲೌಸ್, ಗುಲಾಬಿ ಬಣ್ಣದ ಸೀರೆಯುಟ್ಟ ಪುಟ್ಟಗೌರಿ: ಚಂದನವನದ ಚೆಂದುಳ್ಳಿ ಚೆಲುವೆ ಸಾನ್ಯಾ ಅಂತಿದ್ದಾರೆ ಫ್ಯಾನ್ಸ್‌

First Published | Aug 4, 2024, 6:07 PM IST

ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಎಲ್ಲರ ಮನಸನ್ನೂ ಗೆದ್ದ ಹಾಗೂ ಬಿಗ್ ಬಾಸ್ ಸೀಸನ್ 9ರ ಮೂಲಕ ಜನಪ್ರಿಯತೆಗಳಿಸಿದ ನಟಿ ಸಾನ್ಯಾ ಅಯ್ಯರ್,  ಇದೀಗ ಸೀರೆಯುಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸಾನ್ಯಾ ಅಯ್ಯರ್ ನಟಿಸಿರುವ ಹೊಸ ಸಿನಿಮಾ ಗೌರಿ ಬಿಡುಗಡೆಗಾಗಿ ಕಾಯುತ್ತಿದ್ದು, ಚಂದನವನದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಜೊತೆಗೆ ಸಿನಿಮಾದ ಪ್ರಚಾರದ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ನವ ನಾಯಕಿ ಸಾನ್ಯ ಅಯ್ಯರ್ ಸೀರೆಯಲ್ಲಿ ಸುಂದರವಾಗಿಯೇ ಕಾಣಿಸುತ್ತಿದ್ದಾರೆ. ಜೊತೆಗೆ ಸ್ಲೀವ್‌ಲೆಸ್ ಬ್ಲೌಸ್ ಕೂಡ ಅವರ ಸೀರೆಗೆ ಮ್ಯಾಚ್ ಆಗಿದ್ದು, ಅವರು ಧರಿಸಿರುವ ಕಿವಿಯೋಲೆ ಸಖತ್ ಹೈಲೈಟ್ ಆಗಿದೆ.

Tap to resize

ಗೌರಿ ಸಿನಿಮಾದ ಪ್ರಚಾರದಲ್ಲಿರುವ ಸಾನ್ಯಾ, ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ವಿವಿಧ ಪೋಸ್‌ಗಳನ್ನು ಕೊಟ್ಟಿದ್ದಾರೆ. ಜೊತೆಗೆ ಹುಲಿ ವೇಷಧಾರಿಯಲ್ಲಿರೋ ಹುಡುಗಿಯರ ಜೊತೆ ಸಾನ್ಯಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ವಿಶೇಷವಾಗಿ ಸಾನ್ಯಾ ಅಯ್ಯರ್ ಎಲ್ಲೆ ಹೋದ್ರು ಅವರ ತಾಯಿ ದೀಪಾ ಅಯ್ಯರ್ ಕೂಡಾ ಇದ್ದೇ ಇರ್ತಾರೆ. ಅದೇ ರೀತಿ ಈ ಫೋಟೋಶೂಟ್‌ನಲ್ಲಿ ಅವರು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಇದೊಂದು ರೀತಿ ವಿಭಿನ್ನವಾದ ಫೋಟೋಶೂಟ್ ಆಗಿದೆ ಅಂತಲೇ ಹೇಳಬಹುದು.

ಸಾನ್ಯ ಅಯ್ಯರ್ ಫೋಟೋಗಳಿಗೆ ನೆಟ್ಟಿಗರು ಲೈಕ್ಸ್ ಹಾಗೂ ರೆಡ್ ಹಾರ್ಟ್ ಎಮೋಜಿಗಳ ಸುರಿಮಳೆಗೈದಿದ್ದು, ಚಂದನವನದ ಚೆಂದುಳ್ಳಿ ಚೆಲುವೆ ಉದಯೋನ್ಮುಖ ನಟಿ ಅಪ್ಪಟ ಕನ್ನಡತಿ, ನಿಮ್ ನಗು ಚೆನ್ನಾಗಿದೆ, ಕ್ಯೂಟ್‌ ಸಾನುಮಾ, ಬ್ಯೂಟಿಫುಲ್ ಸಾನ್ಯಾ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಗೌರಿ ಸಿನಿಮಾ ಇದೇ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಚಿತ್ರದಲ್ಲಿ ಸಾನ್ಯಾ ಅಯ್ಯರ್‌ಗೆ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
 

ಇನ್ನು ಸಾಮಾಜಿಕ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸಾನ್ಯಾ 'ಗೌರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ತುಂಬಾ ಬದಲಾಗುತ್ತಿದ್ದು, ಹೊಸ ರೀತಿಯ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Latest Videos

click me!