ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿ ಪಯಣಕ್ಕೆ 20 ವರ್ಷ: ಅಭಿಮಾನಿಗಳಿಗೆ ಎಮೋಶನಲ್ ಸಂದೇಶ

Published : Apr 22, 2026, 04:40 PM IST

ತನ್ನ ಎಕ್ಸ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌, ನನ್ನ ಬದುಕಿನಲ್ಲಿ ಇದು ಮಹತ್ವದ ಮೈಲಿಗಲ್ಲು. ಮೊದಲ ಸಿನಿಮಾ ‘ಚೆಲ್ಲಾಟ’ದಿಂದ ಕನಸುಗಳಿಗೆ ರೆಕ್ಕೆ ಮೂಡಿತು.

PREV
15
ಎರಡು ದಶಕ

ಏಪ್ರಿಲ್‌ 21ಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿಕೊಟ್ಟು ಎರಡು ದಶಕವಾಗಿದೆ. ‘ಚೆಲ್ಲಾಟ’ ಸಿನಿಮಾದಿಂದ ‘ಕೃಷ್ಣಂ ಪ್ರಣಯ ಸಖಿ’ವರೆಗೆ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

25
ಮಹತ್ವದ ಮೈಲಿಗಲ್ಲು

ತನ್ನ ಎಕ್ಸ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಗಣೇಶ್‌, ನನ್ನ ಬದುಕಿನಲ್ಲಿ ಇದು ಮಹತ್ವದ ಮೈಲಿಗಲ್ಲು. ಮೊದಲ ಸಿನಿಮಾ ‘ಚೆಲ್ಲಾಟ’ದಿಂದ ಕನಸುಗಳಿಗೆ ರೆಕ್ಕೆ ಮೂಡಿತು.

35
ಜರ್ನಿಯೇ ಒಂದು ಅದ್ಭುತ

ಸಣ್ಣ ಆರಂಭದಿಂದ, ನೀವಿಂದು ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಅಂತ ಕರೆಯುವವರೆಗೆ ಈ ಜರ್ನಿಯೇ ಒಂದು ಅದ್ಭುತ. ಇದಕ್ಕೆಲ್ಲಾ ಶಕ್ತಿ ತುಂಬಿದ್ದು ಅಭಿಮಾನಿಗಳಾದ ನೀವು.

45
ಹಬ್ಬದ ತರ ಸೆಲೆಬ್ರೇಟ್

ನೀವೇ ನನ್ನ ಬಲ, ನನ್ನ ಉಸಿರು. ಕನ್ನಡಿಗರು ಸಿನಿಮಾದ ಪ್ರತಿ ಫ್ರೇಮ್ ಅನ್ನೂ ಹಬ್ಬದ ತರ ಸೆಲೆಬ್ರೇಟ್ ಮಾಡಿದ್ದೀರಿ. ಸಿನಿಮಾ ಇಂಡಸ್ಟ್ರಿ ನನ್ನನ್ನ ನಂಬಿ, ಈ ಸ್ಥಾನ ಕೊಟ್ಟಿದೆ. ನಿಮಗೆಲ್ಲ ಹೃದಯಾಂತರಾಳದ ಕೃತಜ್ಞತೆ.

55
ಡಬಲ್ ಜೋಶ್‌

ನೀವು ಹಾಕೋ ಪ್ರತಿ ಸೀಟಿ, ಚಪ್ಪಾಳೆ, ಆ ಪ್ರೀತಿಯ ಕಣ್ಣೀರು.. ಎಲ್ಲವನ್ನೂ ನಾನು ಅನುಭವಿಸುತ್ತಿದ್ದೇನೆ, ಹೆಮ್ಮೆಯಿಂದ ನನ್ನ ಜೊತೆ ಇಟ್ಟುಕೊಳ್ಳುತ್ತೇನೆ. ಇದು ಕೇವಲ ಆರಂಭ ಅಷ್ಟೇ. ಇನ್ನು ಮುಂದೆ ಡಬಲ್ ಜೋಶ್‌ನಲ್ಲಿ ನಿಮ್ಮ ಹೃದಯಕ್ಕೆ ಲಗ್ಗೆ ಇಡುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories