ಕನಕಪುರದಲ್ಲಿ ಫಾರ್ಮ್‌ಹೌಸ್‌ ಗೃಹಪ್ರವೇಶ ಮಾಡಿದ ಶಿವರಾಜ್‌ಕುಮಾರ್; ಫೋಟೋ ವೈರಲ್

First Published | Nov 5, 2024, 4:21 PM IST

ಹೊಸ ಫಾರ್ಮ್‌ಹೌಸ್ ನಿರ್ಮಾಣ ಮಾಡಿದ ಶಿವಣ್ಣ. ದೀಪಾವಳಿ ದಿನ ನಡೆಯಿತ್ತು ಅದ್ಧೂರಿ ಪೂಜೆ..ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್..... 

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಹಲವು ವರ್ಷಗಳ ಹಿಂದೆ ಕನಕಪುರದಲ್ಲಿ ದೊಡ್ಡದೊಂದು ಜಮೀನು ಖರೀದಿಸಿದ್ದರು. 

 ಅದೇ ಜಮೀನಿನಲ್ಲಿ ಶಿವಣ್ಣ ಮತ್ತು ಗೀತಕ್ಕೆ ಐಷಾರಾಮಿ ಫಾರ್ಮ್‌ಹೌಸ್ ಕಟ್ಟಿಸಿದ್ದಾರೆ. ನವೆಂಬರ್ 3,2024ರಂದು ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. 

Tap to resize

ಗೃಹಪ್ರವೇಶದಲ್ಲಿ ಆಪ್ತರು ಭಾಗಿಯಾಗಿದ್ದರು. ದೀಪಾವಳಿ ಹಬ್ಬದಂದು ಸತ್ಯನಾರಾಯಣ ಪೂಜೆ ಮಾಡಿಸಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಮನೆ ವಿಶಾಲವಾಗಿ ಕಾಣಿಸುತ್ತಿದೆ.

ತೋಟದ ಮನೆಯನ್ನು ವಿಶಾಲವಾಗಿ ಕಟ್ಟಿಸಿರುವ ಶಿವಣ್ಣ ಸ್ವಿಮ್ಮಿಂಗ್ ಪೂಲ್‌ ಕೂಡ ನಿರ್ಮಾಣ ಮಾಡಿದ್ದಾರೆ. ಪಾರ್ಕಿಂಗ್ ಕೂಡ ವಿಶಾಲವಾಗಿ ಮಾಡಿಕೊಂಡಿದ್ದಾರೆ.

ಶಿವರಾಜ್‌ಕುಮಾರ್, ರುಕ್ಮಿಣಿ ವಸಂತ್ ಮತ್ತು ಛಾಯ ಸಿಂಗ್ ನಟನೆಯ ಭೈರತಿ ರಣಗಲ್ ಸಿನಿಮಾ ಇದೇ ತಿಂಗಳು ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಈವೆಂಟ್‌ ಶಿವಣ್ಣ ಮನೆಯಲ್ಲಿ ನಡೆಯಿತ್ತು.

 ರೇಶ್ಮೆ ಪಂಚೆ ಮತ್ತು ಶೆಲ್ಯೆಯಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡರೆ, ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಗೀತಕ್ಕ ಮಿಂಚಿದ್ದಾರೆ. ಇಬ್ಬರು ಪುತ್ರಿಯರು ಭಾಗಿಯಾಗಿದ್ದಾರೆ. 

ಕನಕಪುರದಲ್ಲಿ ಫಾರ್ಮ್‌ಹೌಸ್ ನಿರ್ಮಾಣ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಅಣ್ಣ ನಮ್ಮ ಊರಿಗೆ ಸ್ವಾಗತ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!