ಗತವೈಭವ ಸಿನಿಮಾದ ನಟ ದುಷ್ಯಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುಳಿವು ಕೊಟ್ಟಿದ್ದರು. ಈಗ ಎಂಗೇಜ್ ಆಗಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
26 ಫೆಬ್ರವರಿ ಗುರುವಾರ ಮಧ್ಯಾಹ್ನ ‘ಚಾಮರ ವಜ್ರ’ದಲ್ಲಿ (ಬೆಂಗಳೂರು ಅರಮನೆ ಮೈದಾನ) ರಚನಾ ಮುದ್ದಹನುಮೇಗೌಡ ಅವರೊಂದಿಗಿನ ನನ್ನ ಮದುವೆ ಕಾರ್ಯಕ್ರಮವು ನಡೆಯಲಿದೆ ಎಂದು ದುಷ್ಯಂತ್ ಹೇಳಿದ್ದಾರೆ.
511
ಆರತಕ್ಷತೆ ಎಲ್ಲಿ?
ಬೆಂಗಳೂರಿನ ಮುಖ್ಯ ಅರಮನೆಯಲ್ಲಿ ಮಾರ್ಚ್ 1ರ ಭಾನುವಾರ ಬೀಗರ ಊಟ ಆರತಕ್ಷತೆಯು ನಡೆಯಲಿದೆ. ನಿಮ್ಮ ಹಾರೈಕೆ, ಆಶೀರ್ವಾದ ಇರಲಿ ಎಂದು ದುಷ್ಯಂತ್ ಹೇಳಿದ್ದಾರೆ.
611
ಹುಡುಗಿ ಯಾರು?
ತುಮಕೂರು ಕ್ಷೇತ್ರದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಅವರ ಮಗಳು ರಚನಾ.
711
ರಾಜಕಾರಣದಲ್ಲಿರುವ ಅಪ್ಪಂದಿರು
ಒಟ್ಟಿನಲ್ಲಿ ದುಷ್ಯಂತ್ ಹಾಗೂ ರಚನಾ ಅವರ ತಂದೆ ತುಮಕೂರಿನ ರಾಜಕಾರಣದಲ್ಲಿಯೇ ಇದ್ದವರು
811
ಲವ್? ಅರೇಂಜ್?
ಇವರಿಬ್ಬರದ್ದು ಲವ್ ಮ್ಯಾರೇಜ್? ಅರೇಂಜ್ ಎಂಬ ಬಗ್ಗೆ ಮಾಹಿತಿ ಇಲ್ಲ.
911
ಅದ್ದೂರಿ ಕಾರ್ಯಕ್ರಮ
ದುಷ್ಯಂತ್ ಹಾಗೂ ರಚನಾ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಫೋಟೋಗಳಂತೂ ಒಂದಕ್ಕಿಂತ ಒಂದು ಸುಂದರವಾಗಿವೆ.
1011
ಉಂಗುರ ಬದಲಾಯಿಸಿಕೊಂಡರು
ದುಷ್ಯಂತ್ ಹಾಗೂ ರಚನಾ ಅವರು ಉಂಗುರ ಬದಲಾಯಿಸಿಕೊಂಡ ಫೋಟೋವಿದು
1111
ಶುಭಾಶಯ
ಸಿಂಪಲ್ ಸುನಿ ಸೇರಿದಂತೆ ಅನೇಕರು ದುಷ್ಯಂತ್ ಹಾಗೂ ರಚನಾ ಜೋಡಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.