Filmfare Awards 2026: ದಾವಣಗೆರೆ ಹುಡುಗಿ, ಕಲಬುರಗಿ ಸೊಸೆ ಶ್ರುತಿ ಪ್ರಹ್ಲಾದ್‌ಗೆ ಫಿಲ್ಮ್‌ಫೇರ್ ಕಿರೀಟ

Published : Feb 22, 2026, 10:31 AM IST

Filmfare Awards 2026: ದಾವಣಗೆರೆಯ ಮಗಳು ಮತ್ತು ಕಲಬುರಗಿಯ ಸೊಸೆ ಶ್ರುತಿ ಪ್ರಹ್ಲಾದ ಈಗಾಗಲೇ 50ಕ್ಕೂ ಹೆಚ್ಚು ಸಿನೆಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ದರಾಗಿದ್ದಾರೆ. ಈಗ ಇವರಿಗೆ ಹಿತ್ತಲಕ ಕರಿಯಬ್ಯಾಡ ಮಾವ ಹಾಡಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
14
ಹಿತ್ತಲಕ ಕರಿಬ್ಯಾಡ ಮಾವ ಹಾಡು

ಶ್ರುತಿ ಪ್ರಹ್ಲಾದ್ ಹಾಡಿದ "ಹಿತ್ತಲಕ ಕರಿಬ್ಯಾಡ ಮಾವ" ಎಂಬ ಕರಟಕ ದಮನಕ ಸಿನೆಮಾದ ಹಾಡು ಬಹಳಷ್ಟು ಜನಪ್ರಿಯ ಆಗಿತ್ತಲ್ಲದೇ ಇದೇ ಹಾಡಿಗೆ ಈಗ ಫಿಲಂಫೇರ್ ಪ್ರಶಸ್ತಿ ಸಹ ಶ್ರುತಿ ಅವರ ಮುಡಿಗೇರಿದೆ.

24
ಅಂತಿಮ‌ ಸುತ್ತಿಗೆ ಆಯ್ಕೆ

ಇದೇ ಹಾಡು ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯ ಅಂತಿಮ‌ ಸುತ್ತಿಗೆ ಆಯ್ಕೆ ಆಗಿತ್ತು. ಕನ್ನಡದ ಹಿನ್ನೆಲೆ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇಂದೂ ನಾಗರಾಜ, ಶಿವಾನಿ ಸ್ವಾಮಿ ಮತ್ತು ವೈಶ್ ಅಂತಿಮ ಸುತ್ತಿನ ಸಹ ಸ್ಪರ್ಧಿಗಳಿದ್ದರು. ಫಿಲ್ಮ್‌ಫೇರ್ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಗಾಯಕಿ ಅಂತಿಮ ಸ್ಪರ್ಧೆಯು ಕೋಚಿನ್ ನಗರದಲ್ಲಿ ಏರ್ಪಟ್ಟಿತ್ತು.

34
ಕಲಬುರಗಿಗೂ ಹೆಮ್ಮೆ

ನಮ್ಮ ಊರಿನ ಯುವ ಗಾಯಕಿ ಶ್ರುತಿ ಪ್ರಹ್ಲಾದಗೆ ಫಿಲ್ಮ್‌ಫೇರ್ ಅವಾರ್ಡ್ ಲಭಿಸುವ ಮೂಲಕ ತವರು ಜಿಲ್ಲೆ ಜೊತೆಗೆ ಸೊಸೆಯಾದ ಕಲಬುರಗಿ ಜಿಲ್ಲೆಗೂ ಕೀರ್ತಿ ತರುವ ಸಾಧನೆ ಮಾಡಿದ್ದಾರೆ‌. 

44
ಅಭಿನಂದನೆ

ಶ್ರುತಿ ಪ್ರಹ್ಲಾದರನ್ನು ದಾವಣಗೆರೆ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಇತರರು ಅಭಿನಂದಿಸಿದ್ದಾರೆ. ಅಂದಹಾಗೆ ಅನೇಕರು ಇವರಿಗೆ ಅಭಿನಂದಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories