ಸಲಗ: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ದುನಿಯಾ ವಿಜಯ್ ಟೀಂ

First Published | Oct 5, 2021, 12:09 PM IST

ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾದ ಸಲಗ ಟೀಂ. ಮಾಜಿ ಸಿಎಂ ಬೆಂಬಲ ಪಡೆದ ದುನಿಯಾ ವಿಜಯ್....

ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ 100% ಸೀಟಿಂಗ್ ಅವಕಾಶ ನೀಡಿದ ಬೆನ್ನಲ್ಲೆ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ರೆಡಿ ಆಗಿವೆ.  ಇಡೀ ಚಿತ್ರರಂಗ (Movie Industry) ಕಾಯುತ್ತಿದ್ದ ಬಿಗ್ ಬಜೆಟ್ ಸಿನಿಮಾ (Big Budge Movie) 'ಸಲಗ' (Salaga) ಅಕ್ಟೋಬರ್ 14ರಂದು ಬಿಡುಗಡೆ ಆಗುತ್ತಿದೆ. 

ಸಿನಿಮಾ ಪ್ರಚಾರದಲ್ಲಿ (Movie Promotion) ಬ್ಯುಸಿಯಾಗಿರು ಸಲಗ ಟೀಂ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Former Karnataka Chief Minister Siddaramaiah) ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. 

Tap to resize

'ದುನಿಯಾ ವಿಜಯ್ (Dunia Vijay) ಒಬ್ಬ ಪ್ರತಿಭಾನ್ವಿತ (Talented) ನಟ (Actor) ಅವರ ಸಿನಿಮಾ (movie) ಯಶಸ್ವಿಯಾಗಲಿ' ಎಂದು ಸಿದ್ಧು ಶುಭ ಹಾರೈಸಿದ್ದಾರೆ. ಸಲಗ ತಂಡದ ಜೊತೆಗಿರುವ ಸಿದ್ಧ ಫೋಟೋ ವೈರಲ್ (Photo Viral) ಆಗುತ್ತಿವೆ. 

'ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು, ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಭೇಟಿ ಮಾಡಿದರು. ಶಾಸಕರಾದ ಭೈರತಿ ಸುರೇಶ್ (Bhairathi Suresh) ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ (Talented Actor), ಹೆಚ್ಚಿಇನ ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ'ಎಂದು ಸಿದ್ಧರಾಮಯ್ಯ ಅವರು ಟ್ಟೀಟ್ (Tweet)ಮಾಡಿದ್ದಾರೆ. 

2019ರಲ್ಲಿ ಜೂನ್ 6ರಂದು ಬೆಂಗಳೂರಿನ (Bengaluru) ಮಹಾಕಾಳಿ ದೇವಸ್ಥಾನದಲ್ಲಿ (Mahakali Temple) ಸಲಗ ಚಿತ್ರದ ಮುಹೂರ್ತ ನಡೆದಿತ್ತು. ಮುಹೂರ್ತದ ಸಮಯದಲ್ಲೂ ಸಿದ್ಧರಾಮಯ್ಯ (Siddaramaiah) ಸಮಾರಂಭಕ್ಕೆ ಬಂದು ಶುಭಾಶಯ (Best Wishes) ತಿಳಿಸಿದ್ದರು. 

ಸಲಗ ಚಿತ್ರದಲ್ಲಿ ದುನಿಯಾ ವಿಜಯ್‌ಗೆ ಜೋಡಿಯಾಗಿ ನಟಿ ಸಂಜನಾ ಆನಂದ್ (Sanjana Anand) ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್ (Dolly Dhananjay) ಮಿಂಚಿದ್ದಾರೆ. ಚರಣ್ ರಾಜ್ ಅವರ ಹಾಡು ಈಗಾಗಲೇ ದೊಡ್ಡ  ದಾಖಲೆ ಬರೆದಿವೆ.

Latest Videos

click me!