Dr Vishnuvardhan: ಕೀರ್ತಿಯನ್ನು ಡಾ ವಿಷ್ಣುವರ್ಧನ್‌, ಭಾರತಿ ದತ್ತು ತಗೊಂಡಿದ್ದು ಹೇಗೆ? ರಿಯಲ್‌ ತಂದೆ-ತಾಯಿ ಯಾರು?

Published : Jun 07, 2025, 08:17 PM IST

ನಟ ವಿಷ್ಣುವರ್ಧನ್‌, ಭಾರತಿ ಅವರಿಗೆ ಸ್ವಂತ ಮಕ್ಕಳಿಲ್ಲ, ದತ್ತು ಪುತ್ರಿಯರಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ವಿಷ್ಣುವರ್ಧನ್‌ ಅವರು ಮೊದಲ ಮಗಳು ಕೀರ್ತಿಯನ್ನು ಹೇಗೆ ದತ್ತು ತಗೊಂಡರು ಎನ್ನೋದು ಅನೇಕರಿಗೆ ಗೊತ್ತಿಲ್ಲ ಎನ್ನಬಹುದು.

PREV
18

ಕೀರ್ತಿ ಅವರು ಭಾರತಿ ಅವರ ಸಹೋದರಿ ಮಗಳು. ಈ ಬಗ್ಗೆ ಕೀರ್ತಿ ಅವರೇ ʼಕಲಾಮಾಧ್ಯಮʼ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

28

ನನ್ನ ರಿಯಲ್‌ ತಾಯಿ ಜಯಶ್ರೀಗೆ ಮೊದಲ ಮಗು ಹುಟ್ಟಿದಾಗ ಅದನ್ನು ನಮಗೆ ಕೊಡಬೇಕು ಅಂತ ವಿಷ್ಣುವರ್ಧನ್‌, ಭಾರತಿ ಅವರು ಹೇಳಿದ್ದರು.

38

ವಿಷ್ಣುವರ್ಧನ್‌, ಭಾರತಿ ಮದುವೆಯಲ್ಲಿ ನಾನು ಚಿಕ್ಕ ಮಗು. ನನ್ನನ್ನು ವಿಷ್ಣುವರ್ಧನ್‌ ಅವರು ಎತ್ತಿಕೊಂಡ ಫೋಟೋ ಇನ್ನೂ ಇದೆ.

48

ವಿಷ್ಣುವರ್ಧನ್‌, ಭಾರತಿ ಅವರು ಸಿನಿಮಾದಲ್ಲಿ ಬ್ಯುಸಿ ಇದ್ದಿದ್ದರಿಂದ ನಾನು ಅಜ್ಜಿಯ ಜೊತೆಗೆ ಬೆಳೆದೆ. ನನಗೆ ಐದು ವರ್ಷ ಆದನಂತರ ವಿಷ್ಣುವರ್ಧನ್‌ ಅವರ ಜೊತೆ ಬೆಳೆದೆ ಎಂದಿದ್ದಾರೆ.

58

ವಿಷ್ಣುವರ್ಧನ್‌ ಅವರು ದತ್ತು ತಗೊಳ್ಳುವಾಗ, “ಜನರು ಏನೇ ಹೇಳಿದರೂ ಅದರ ಬಗ್ಗೆ ಆಲೋಚಿಸಬೇಡ. ನೀನು ನಮ್ಮ ಮಗಳು, ನೀನು ಕೊನೇವರೆಗೂ ನಮ್ಮ ಮಗಳಾಗಿಯೇ ಇರುತ್ತೀಯಾ. ನಾವು ನಿನ್ನನ್ನು ಪ್ರೀತಿ ಮಾಡ್ತೀವಿ. ನೀನು ನಮ್ಮನ್ನು ಪ್ರೀತಿ ಮಾಡ್ತೀಯಾ. ಬೇರೆ ಯಾರ ಬಗ್ಗೆಯೂ ಆಲೋಚಿಸಬೇಡ” ಎಂದು ಕೀರ್ತಿಗೆ ಹೇಳಿದ್ದರಂತೆ.

68

ಕೀರ್ತಿ ಸಂಪತ್‌ಕುಮಾರ್‌ ಎನ್ನೋದು ಅವರ ಒರಿಜಿನಲ್‌, ಅಫಿಶಿಯಲ್‌ ನೇಮ್‌ ಅಂತೆ.

78

ನನ್ನ ತಂದೆ ತುಂಬ ಸ್ಟ್ರಿಕ್ಟ್‌ ಆಗಿದ್ದರು. ನಾನು ಇನ್‌ಟೈಮ್‌ಗೆ ಮನೆಯಲ್ಲಿ ಇರಬೇಕಿತ್ತು. ಆದರೆ ಮೊಮ್ಮಕ್ಕಳು ಅಂದ್ರೆ ಅವರಿಗೆ ತುಂಬ ಇಷ್ಟ. ಮೊಮ್ಮಕ್ಕಳು ಏನು ಮಾಡಿದ್ರೂ ಅವರು ಏನೂ ಹೇಳುತ್ತಿರಲಿಲ್ಲ ಎಂದಿದ್ದಾರೆ. 

88

ಅಂದಹಾಗೆ ಕೀರ್ತಿ ಅವರು ವಿಷ್ಣುವರ್ಧನ್‌ರ ದೊಡ್ಡ ಅಭಿಮಾನಿಯಂತೆ. ವಿಷ್ಣು ಸಿನಿಮಾಗಳನ್ನು ಅವರು ತಪ್ಪದೇ ನೋಡುತ್ತಿದ್ದರು. 

Read more Photos on
click me!

Recommended Stories