ಕನ್ನಡಕ್ಕೆ ಅಪರೂಪ ಎನಿಸುವ ಅಪ್ಪ, ಮಗನ ಸಂಘರ್ಷದ ಕತೆ 'ಬ್ರ್ಯಾಟ್' ಚಿತ್ರದ್ದು: ಡಾರ್ಲಿಂಗ್ ಕೃಷ್ಣ
ನಾನು ಇದುವರೆಗೂ ಮಾಡದೆ ಇರುವ ಪಾತ್ರ ಮಾಡಬೇಕು. ಶಶಾಂಕ್ ಇದುವರೆಗೂ ಮಾಡಿರದ ಚಿತ್ರ ಮಾಡಬೇಕು ಎನ್ನುವ ನಮ್ಮಿಬ್ಬರ ಆಲೋಚನೆಯಲ್ಲಿ ಹುಟ್ಟಿಕೊಂಡು ಸಿನಿಮಾ ಇದು ಎಂದರು ಡಾರ್ಲಿಂಗ್ ಕೃಷ್ಣ.
ನಾನು ಇದುವರೆಗೂ ಮಾಡದೆ ಇರುವ ಪಾತ್ರ ಮಾಡಬೇಕು. ಶಶಾಂಕ್ ಇದುವರೆಗೂ ಮಾಡಿರದ ಚಿತ್ರ ಮಾಡಬೇಕು ಎನ್ನುವ ನಮ್ಮಿಬ್ಬರ ಆಲೋಚನೆಯಲ್ಲಿ ಹುಟ್ಟಿಕೊಂಡು ಸಿನಿಮಾ ಇದು ಎಂದರು ಡಾರ್ಲಿಂಗ್ ಕೃಷ್ಣ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿರುವ, ಶಶಾಂಕ್ ನಿರ್ದೇಶನದ ಚಿತ್ರಕ್ಕೆ ‘ಬ್ರ್ಯಾಟ್’ ಎಂದು ಹೆಸರಿಡಲಾಗಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಈ ಸಿನಿಮಾ ಮೂಡಿ ಬರುತ್ತಿದೆ.
‘ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ನಿರ್ಮಿಸಿದ್ದ ಮಂಜುನಾಥ್ ಕಂದಕೂರ್ ಚಿತ್ರದ ನಿರ್ಮಾಪಕರು. ಡಾರ್ಲಿಂಗ್ ಕೃಷ್ಣ, ‘ನಾನು ಇದುವರೆಗೂ ಮಾಡದೆ ಇರುವ ಪಾತ್ರ ಮಾಡಬೇಕು. ಶಶಾಂಕ್ ಇದುವರೆಗೂ ಮಾಡಿರದ ಚಿತ್ರ ಮಾಡಬೇಕು ಎನ್ನುವ ನಮ್ಮಿಬ್ಬರ ಆಲೋಚನೆಯಲ್ಲಿ ಹುಟ್ಟಿಕೊಂಡು ಸಿನಿಮಾ ಇದು.
ಕನ್ನಡದ ಮಟ್ಟಿಗೆ ತೀರಾ ಅಪರೂಪ ಎನಿಸುವ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕಾಗಿ ಮೊದಲ ಬಾರಿಗೆ ವರ್ಕ್ ಶಾಪ್ ಮಾಡಿದ್ದೇನೆ’ ಎಂದರು. ನಿರ್ದೇಶಕ ಶಶಾಂಕ್, ಅತೀ ಹೆಚ್ಚು ತರಲೆ ಮಾಡುವ ಹುಡುಗರನ್ನು ಸಾಮಾನ್ಯವಾಗಿ ‘ಬ್ರ್ಯಾಟ್’ ಎನ್ನುತ್ತೇವೆ.
ಅದರಲ್ಲೂ ಹದಿನಾರು ವರ್ಷದ ಒಳಗಿರುವ ಮಕ್ಕಳಿಗೆ ಈ ಪದ ಬಳಸುವುದು ಹೆಚ್ಚು. ನಮ್ಮ ಚಿತ್ರದ ಕತೆ ಕೂಡ ಈ ವಯಸ್ಸಿನವರಿಗೆ ಹತ್ತಿರವಾಗಿದೆ. ಹೀಗಾಗಿ ಈ ಶೀರ್ಷಿಕೆ ಸೂಕ್ತ ಎನಿಸಿತು.
ಇದು ಅಪ್ಪ, ಮಗನ ಸಂಘರ್ಷದ ಕತೆ. ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯಿಸುತ್ತಿದ್ದಾರೆ ಎಂದರು. ಮನಿಶಾ ಚಿತ್ರದ ನಾಯಕಿ. ಅರ್ಜುನ್ ಜನ್ಯ ಸಂಗೀತ ಇದೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ತಾರಾಬಳಗದಲ್ಲಿದ್ದಾರೆ.