ಕಮೋಡ್ ಟು ಕಾಂಡೋಮ್: ನೊಂದುಕೊಳ್ಳುವ ಅವಶ್ಯಕತೆ‌ ಇಲ್ಲ, ಚಕ್ರವರ್ತಿ ಚಂದ್ರಚೂಡ ಯು ಟರ್ನ್

Published : Feb 03, 2026, 12:49 PM IST

'ಕಮೋಡ್ ಟು ಕಾಂಡೋಮ್' ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ, ತಮ್ಮ ಮಾತು ಕನ್ನಡ ಚಿತ್ರರಂಗದ ಬಗ್ಗೆ ಅಲ್ಲ, ತಮಿಳು ಚಿತ್ರರಂಗದ ಕುರಿತಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಕನ್ನಡ ನಿರ್ಮಾಪಕರ ಸಂಘಕ್ಕೆ ಕ್ಷಮೆ ಕೋರಿದ್ದಾರೆ.

PREV
15
ಕಮೋಡ್ ಟು ಕಾಂಡೋಮ್

ಕಮೋಡ್ ಟು ಕಾಂಡೋಮ್ ಪದ ಬಳಕೆ ಮಾಡಿ ವಿವಾದಕ್ಕೆ ಸಿಲುಕಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ತಮ್ಮ ಹೇಳಿಕೆಯಿಂದ ಯು ಟರ್ನ್ ತೆಗೆದುಕೊಂಡಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆದಿದೆ ಎಂದು ಚಕ್ರವರ್ತಿ ಚಂದ್ರಚೂಡ ಆರೋಪಿಸಿದ್ದಾರೆ.

25
ತಪ್ಪಾಗಿ ಅರ್ಥೈಸುವ ಪ್ರಯತ್ನ

ನಾನು ತಮಿಳು ಚಿತ್ರರಂಗ ಹಾಗೂ ಅಲ್ಲಿನ ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ನಾನು ಕನ್ನಡ ಚಿತ್ರರಂಗ ಹಾಗೂ ಕನ್ನಡ ನಿರ್ಮಾಪಕರ ಬಗ್ಗೆ ಮಾತನಾಡಿಲ್ಲ. ತಮಿಳು ಚಿತ್ರರಂಗಲ್ಲಿ ನನಗೆ ಕೆಲಸ ಮಾಡಿದ ಅನುಭವ ಇದೆ. ನನ್ನ ಮಾತನ್ನ ತಿರುಚಿ ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆದಿದೆ. ನನ್ನ‌ ಮಾತಿನಿಂದ ಕನ್ನಡ ನಿರ್ಮಾಪಕರು ನೊಂದುಕೊಳ್ಳುವ ಅವಶ್ಯಕತೆ‌ ಇಲ್ಲ ಎಂದರು.

35
ಈ ವಿಡಿಯೋ ಮಾಡಿದ್ದೇಕೆ?

ನಾನು ನಿರ್ಮಾಪಕರ ಪರವಾಗಿ ಮಾತನಾಡಿದ್ದು, ಆದ್ರೆ ಅದೇ ನಿರ್ಮಾಪಕರು ‌ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಾನು ಪತ್ರಕರ್ತನು ಹೌದು, ನಟನೂ ಹೌದು ನಿರ್ದೇಶಕ ಸಹ ಆಗಿದ್ದೇನೆ. ನಿರ್ಮಾಪಕರ ಕಾಳಜಿಯಿಂದ ವಿಡಿಯೋ ‌ಮಾಡಿದ್ದೇನೆ. ಕೆಲ ನಿರ್ಮಾಪಕರಿಗೆ ನಾನು ಅ ಪದ ಹೇಳಿದ್ದೇನೆ.

45
ನಿರ್ಮಾಪಕರ ಸಂಘಕ್ಕೆ ಕ್ಷಮೆ

ಸಿನಿಮಾದಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್, ಲೈಟ್ ಬಾಯ್ ಅವರ ಪೇಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಅ ಒಂದು ಭಾಗದ ವಿಡಿಯೋ ವನ್ನ ಕಟ್ ಮಾಡಿ ಬಿಟ್ಟಿದ್ದಾರೆ. ಪೂರ್ಣ ಪ್ರಮಾಣದ ವಿಡಿಯೋ ನೋಡಿದ್ರೆ ನಾನು ಏನು ಹೇಳಿದ್ದೇನೆ ಎಂಬುವುದು ಗೊತ್ತಾಗುತ್ತದೆ. ನಾನು ನಿನ್ನೆಯೇ ನಿರ್ಮಾಪಕರ ಸಂಘದ ಜೊತೆ ಮಾತನಾಡಿದ್ದೇನೆ. ನಿಮ್ಮನ್ನ ನೋಯಿಸುವ ಉದ್ದೇಶ ನನಗೆ ಇಲ್ಲ ಎಂದು ಹೇಳಿ ನಿರ್ಮಾಪಕರ ಸಂಘಕ್ಕೆ ಕ್ಷಮೆ ಕೇಳಿದ್ದೇನೆ ಎಂದರು.

55
ಕೆ.ಮಂಜು ವಿರುದ್ಧ ವಾಗ್ದಾಳಿ

ಇದೇ ವೇಳೆ ನಿರ್ಮಾಪಕ ಕೆ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಚೂಡ್, ಇನ್ಮೇಲೆ ಮಂಜು ಅವರನ್ನ ಏಕವಚನದಲ್ಲಿ ಮಾತನಾಡಿಸುತ್ತೇನೆ. ಇಷ್ಟು ದಿನ ಮಂಜಣ್ಣ ಅಂತ ಕರೆಯುತ್ತಿದ್ದೆ. ನನ್ನೊಂದಿಗೆ ನೇರವಾಗಿ ಮಾತನಾಡಿ ಸ್ಪಷ್ಟನೆ ಕೇಳಬಹುದಿತ್ತು. ಆದ್ರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಾನೂನಿನ ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೇನೆ. ವೈಯಕ್ತಿಕ ವಿಚಾರಗಳೆಲ್ಲಾ ಬೇಡ, ನಾನು ಇನ್ಮುಂದೆ ಕೊಬ್ಬರಿ ಮಂಜಾ ಎಂದು ಕರೆಯಲಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಲಾವಿದರಿಗೆ ಕಾಂಡೋಮ್ ಪೂರೈಕೆ: ಸ್ಯಾಂಡಲ್‌ವುಡ್‌ನಲ್ಲಿ ಕೋಲಾಹಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories