ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?

Published : Dec 11, 2025, 03:48 PM IST

Actor Darshan Thoogudeepa: ನಟ ದರ್ಶನ್‌ ಜೈಲಿನಿಂದ ಬಂದ ಬಳಿಕ ರಾಜಕೀಯಕ್ಕೆ ಬಂದು, ಅಮೋಘ ಗೆಲುವು ಸಾಧಿಸುತ್ತಾರೆ ಎಂದು ಕೆಲ ಜ್ಯೋತಿಷಿಗಳು ಹೇಳಿದ್ದುಂಟು. ಈಗ ‘ದಿ ಡೆವಿಲ್‌ʼ ಸಿನಿಮಾದಲ್ಲಿ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಿಜ ಜೀವನದಲ್ಲಿ ಏನಾಗುವುದು ಎಂದು ಅವರ ಸಹೋದರ ದಿನಕರ್‌ ಮಾತನಾಡಿದ್ದಾರೆ.

PREV
15
ಸಿನಿಮಾದಲ್ಲಿ ರಾಜಕೀಯ ಎಂಟ್ರಿ

ಸಿನಿಮಾದಲ್ಲಿ ನಟ ದರ್ಶನ್‌ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಹಾಗೆ ನಿಜ ಜೀವನದಲ್ಲಿ ದರ್ಶನ್ ಅವರು ಜೈಲಿನಿಂದ ಬಂದಮೇಲೆ ರಾಜಕೀಯಕ್ಕೆ ಬರ್ತಾರೆ ಎನ್ನುವ ಪ್ರಶ್ನೆ ಇತ್ತು. ಇದಕ್ಕೆ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

25
ಸೆಲೆಬ್ರಿಟಿಗಳೇ ಡಿಸೈಡ್ ಮಾಡ್ತಾರೆ

“ದರ್ಶನ್‌ ಅವರು ರಾಜಕೀಯಕ್ಕೆ ಬರೋದನ್ನು ಸೆಲೆಬ್ರಿಟಿಗಳೇ ಡಿಸೈಡ್ ಮಾಡ್ತಾರೆ. ದರ್ಶನ್ ಪಾಲಿಟಿಕ್ಸ್‌ಗೆ ಬರಬೇಕಾ ಬೇಡವಾ ಅಂತ ಅವರ ಸೆಲೆಬ್ರಿಟಿಗಳು ಏನು ಹೇಳ್ತಾರೆ ಹಂಗೆ ದರ್ಶನ್ ಮಾಡ್ತಾರೆ. ದರ್ಶನ್‌ ಅವರು ರಾಜಕೀಯಕ್ಕೆ ಬರಬೇಕು ಎಂದು ಒಂದಿಷ್ಟು ಅಭಿಮಾನಿಗಳ ಅಪೇಕ್ಷೆ ಕೂಡ ಇದೆ” ಎಂದು ಹೇಳಿದ್ದಾರೆ.

35
ರಾಜಕೀಯದಲ್ಲಿ ಆಸಕ್ತಿ ಇದೆ

“ದರ್ಶನ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ತಮ್ಮನಾಗಿ ನನಗಂತೂ ಆ ಮಾಹಿತಿ ಇಲ್ಲ. ರಾಜಕೀಯಕ್ಕೆ ಬರ್ತೀನಿ ಅಂತ ದರ್ಶನ್ ನನ್ನ ಹತ್ರ ಅಂತೂ ಯಾವತ್ತು ಹೇಳಿಲ್ಲ. ಸೆಲಿಬ್ರಿಟಿಗಳು ಇಷ್ಟ ಪಟ್ರೆ ಏನ್ ಬೇಕಾದ್ರೂ ಮಾಡ್ತಾರೆ. ಅವರ ಸೆಲೆಬ್ರಿಟಿಗೋಸ್ಕರ ಇರೋರು, ಹೇಗೆ ಬರತ್ತೋ ಹಾಗೆ” ಎಂದು ಹೇಳಿದ್ದಾರೆ.

45
ದರ್ಶನ್‌ ಆರಾಮಾಗಿದ್ದಾರೆ

“ಎರಡು ವಾರಗಳ ಹಿಂದೆ ನಾನು ದರ್ಶನ್‌ ಅವರನ್ನು ಭೇಟಿ ಮಾಡಿದ್ದೆ, ಅವರಂತೂ ವಿಶ್ವಾಸ, ಭರವಸೆ ಇಟ್ಟುಕೊಂಡಿದ್ದಾರೆ. ಸೆಲೆಬ್ರಿಟಿಗಳು ಇದ್ದಾರೆ, ಸಿನಿಮಾ ಓಡತ್ತೆ” ಎಂದು ದರ್ಶನ್‌ ತೂಗುದೀಪ ಹೇಳಿದ್ದಾರೆ.

55
ದರ್ಶನ್‌ ಕುಗ್ಗೋದಿಲ್ಲ

“ದರ್ಶನ್ ಅವರು ಯಾವುದಕ್ಕೂ ಕುಗ್ಗೋದಿಲ್ಲ, ಯಾರು ಎಷ್ಟೇ ಟ್ರೈ ಮಾಡಿದರೂ ಆಗೋದಿಲ್ಲ. ದರ್ಶನ್‌ ಕುಗ್ಗಲು ಅವರ ಅಭಿಮಾನಿಗಳು ಬಿಡಲ್ಲ. ಅವರು ಆ ರೇಂಜ್‌ಗೆ ದರ್ಶನ್ ಬೆನ್ನ ಹಿಂದೆ ನಿಂತ್ಕೊಂಡು, ಸಪೋರ್ಟ್ ಮಾಡ್ತಿರ್ತಾರೆ, ಕಾನ್ಫಿಡೆನ್ಸ್ ಕೊಡ್ತಿರ್ತಾರೆ” ಎಂದು ಹೇಳಿದ್ದಾರೆ.

Read more Photos on
click me!

Recommended Stories