ನಟ ದರ್ಶನ್ ಇತ್ತೀಚೆಗಷ್ಟೇ 'ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ' ಎಂದು ಜೈಲಿನಿಂದಲೇ ಮೆಸೇಜ್ ಮಾಡಿದ್ದರು. ಇದೀಗ ಸಿನಿಮಾಗೆ ದೊಡ್ಡಮಟ್ಟದಲ್ಲಿ ಸಿನಿಪ್ರೇಮಿಗಳು ಥಿಯೇಟರ್‌ಗಳಿಗೆ ಲಗ್ಗೆ ಹಾಕುತ್ತಿದ್ದು, ದರ್ಶನ್ ಫ್ಯಾನ್ಸ್ ಸಂಖ್ಯೆಯಲ್ಲಿ ಸ್ವಲ್ಪವೂ ಇಳಿಮುಖವಾಗಿಲ್ಲ ಎನ್ನಲಾಗುತ್ತಿದೆ.
Darshan Thoogudeepa The Devil Movie: ನಟ ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾ ಬೆಳ್ಳಂಬೆಳಿಗ್ಗೆ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಸಾಕಷ್ಟು ದುಬಾರಿ ಆಗಿದ್ದರೂ ಕೇರ್ ಎನ್ನದೇ ದರ್ಶನ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಡೆವಿಲ್ ನೋಡಿ ಥ್ರಿಲ್ ಅನುಭವಿಸುತ್ತಿದ್ದಾರೆ.
212
ದರ್ಶನ್ 'ದಿ ಡೆವಿಲ್' ಕ್ರೇಜ್
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಕೂಡ ಅವರ ಅಭಿಮಾನಿಗಳು ಸ್ವಲ್ಪವೂ ಎದೆಗುಂದದೇ ತಮ್ಮ ಬಾಸ್ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದು, ಇದೀಗ ಇಡೀ ಕರ್ನಾಟಕದಲ್ಲಿ ಡೆವಿಲ್ ಹವಾ ಜೋರಾಗಿದೆ.
312
ದರ್ಶನ್ 'ದಿ ಡೆವಿಲ್' ಕ್ರೇಜ್
ಬಿಡುಗಡೆ ಆಗಿರುವ ಡೆವಿಲ್ ಸಿನಿಮಾ ಬಗ್ಗೆ ಏನೂ ರೀವ್ಯೂ ಬರೆಯುವ ಹಾಗಿಲ್ಲ. ಏಕೆಂದರೆ, ಡೆವಿಲ್ ಟೀಮ್ ಈ ಬಗ್ಗೆ ಕೋರ್ಟ್‌ನಿಂದ ತಡೆಯಾಜ್ಞೆ ಜಾರಿ ಮಾಡಿಸಿದೆ. ವಿಮರ್ಶೆ ಮಾತ್ರವಲ್ಲ, ಕಾಮೆಂಟ್ ಕೂಡ ಮಾಡೋ ಹಾಗಿಲ್ಲ.
ದರ್ಶನ್ ತೂಗುದೀಪ ಹಾಗೂ ರಚನಾ ರೈ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ದಿ ಡೆವಿಲ್' ಸಿನಿಮಾ ರಿಲೀಸ್ ಬಳಿಕ ದರ್ಶನ್ ಫ್ಯಾನ್ಸ್ ಥಿಯೇಟರ್ ಕಡೆ ಮುಗಿಬಿದ್ದಿದ್ದಾರೆ. ಅದ್ಯಾವ ಮಟ್ಟಿಗೆ ದರ್ಶನ್ ಕ್ರೇಜ್ ಹರಡಿದೆ ಎಂದರೆ, ಬೆಂಗಳೂರಿನ ಬೀದಿಬೀದಿಗಳಲ್ಲಿ ದರ್ಶನ್ ಪೋಸ್ಟರ್, ಕಟೌಟ್ ಕಾಣಿಸುತ್ತಿದೆ.
512
ದರ್ಶನ್ 'ದಿ ಡೆವಿಲ್' ಕ್ರೇಜ್
ಸಿನಿಮಾ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಾಗೂ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಅದನ್ನು ನೀವೇ ಸ್ವತಃ ನೋಡಬಹುದು. ದರ್ಶನ್ ಅನುಪಸ್ಥಿತಿಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ, ಹಾಗೆಯೇ ಫಸ್ಟ್ ಶೋಗೆ ದೊಡ್ಡ ಮಟ್ಟದಲ್ಲಿ ಜನರು ಬಂದು ಸಿನಿಮಾ ನೋಡಿದ್ದು, ಅರ್ಧ ಸಿನಿಮಾ ಗೆದ್ದಂತೆ ಎನ್ನಬಹುದು.
612
ದರ್ಶನ್ 'ದಿ ಡೆವಿಲ್' ಕ್ರೇಜ್
ದುಬಾರಿಯಾದ ಟಿಕೆಟ್ ದರ
ಬೆಂಗಳೂರಿನಲ್ಲಂತೂ ದರ್ಶನ್ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಕಳೆದ ರಾತ್ರಿಯೇ ಥಿಯೇಟರ್‌ಗಳೆಲ್ಲವೂ ಝಗಮಗ ಎನ್ನುವಂತೆ ಸಿಂಗಾರಗೊಂಡಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೇ ಫ್ಯಾನ್ಸ್ ಶೋ ಶುರುವಾಗಿದೆ. ಎಲ್ಲಿ ನೋಡಿದರೂ ದರ್ಶನ್ ಕಟೌಟ್‌ಗಳು, ಹಾರಗಳೇ ಕಾಣಿಸುತ್ತಿವೆ.
712
ದರ್ಶನ್ 'ದಿ ಡೆವಿಲ್' ಕ್ರೇಜ್
ಅಂದಹಾಗೆ ದರ್ಶನ್ ಸಿನಿಮಾವನ್ನು ನೋಡಲು ಜನಸಾಗರವೇ ಹರಿದು ಬಂದಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ದರ್ಶನ್ ಸಿನಿಮಾವನ್ನು ನೋಡಿದ ಬಹುತೇಕರು ಸಿನಿಮಾ ಸಖತ್ ಆಗಿದೆ, ಡಬಲ್ ಆಕ್ಟಿಂಗ್ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.
812
ದರ್ಶನ್ 'ದಿ ಡೆವಿಲ್' ಕ್ರೇಜ್
ಮಲ್ಟಿಫ್ಲೆಕ್ಸ್‌ಗಳಲ್ಲಿ ದಿನಕ್ಕೆ 15-30 ಶೋಗಳನ್ನು ಇಡಲಾಗಿದೆ. ಸದ್ಯಕ್ಕಂತೂ ಸಿನಿಮಾ ಹೌಸ್‌ಫುಲ್ ಆಗೋದು ಗ್ಯಾರಂಟಿ. ಟಿಕೆಟ್ ರೇಟ್ ಜಾಸ್ತಿ ಇದ್ದರೂ, ಮಾಲ್‌ಗಳಲ್ಲಿ ಪಾರ್ಕಿಂಗ್ ದರ ಜಾಸ್ತಿ ಇದ್ದರೂ ಸಿನಿಮಾ ನೋಡಲು ಬರುತ್ತಿರುವವರ ಸಂಖ್ಯೆಗೇನೂ ಕಡಿಮೆ ಆಗಿಲ್ಲ.
912
ದರ್ಶನ್ 'ದಿ ಡೆವಿಲ್' ಕ್ರೇಜ್
ನಟ ದರ್ಶನ್ ಇತ್ತೀಚೆಗಷ್ಟೇ 'ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ' ಎಂದು ಜೈಲಿನಿಂದಲೇ ಮೆಸೇಜ್ ಮಾಡಿದ್ದರು. ಇದೀಗ ಸಿನಿಮಾಗೆ ದೊಡ್ಡಮಟ್ಟದಲ್ಲಿ ಸಿನಿಪ್ರೇಮಿಗಳು ಥಿಯೇಟರ್‌ಗಳಿಗೆ ಲಗ್ಗೆ ಹಾಕುತ್ತಿದ್ದು, ದರ್ಶನ್ ಫ್ಯಾನ್ಸ್ ಸಂಖ್ಯೆಯಲ್ಲಿ ಸ್ವಲ್ಪವೂ ಇಳಿಮುಖವಾಗಿಲ್ಲ ಎನ್ನಲಾಗುತ್ತಿದೆ.
1012
ದರ್ಶನ್ 'ದಿ ಡೆವಿಲ್' ಕ್ರೇಜ್
ರಿವ್ಯೂ ಮಾಡೋ ಹಾಗಿಲ್ಲ, ರೇಟಿಂಗ್ ಕೊಡೋ ಹಾಗಿಲ್ಲ!
ಹೌದು, ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದ ರಿವ್ಯೂ ಮಾಡೋ ಹಾಗಿಲ್ಲ.. ರೇಟಿಂಗ್ ಕೊಡೋ ಹಾಗಿಲ್ಲ..! ಬುಕ್ ಮೈ ಶೋ ಆನ್‌ಲೈನ್ ಬುಕ್ಕಿಂಗ್ ಆ್ಯಪ್‌ನಲ್ಲಿ ರಿವ್ಯೂ ರೇಟಿಂಗ್ ಕೊಡಲು ಅವಕಾಶ ಇಲ್ಲ. ಈ ರೀತಿ ರೇಟಿಂಗ್ ಮಾಡಬಾರದು, ಕಾಮೆಂಟ್ ಮಾಡಬಾರದು ಎನ್ನೋ ಕಾರಣಕ್ಕೆ 'ದಿ ಡೆವಿಲ್' ಸಿನಿಮಾ ತಂಡವು ಕೋರ್ಟ್ ಆದೇಶ ತಂದಿದೆ.
1112
ದರ್ಶನ್ 'ದಿ ಡೆವಿಲ್' ಕ್ರೇಜ್
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಇದ್ದಾರೆ. ಹೀಗಾಗಿ ಯಾವುದೇ ಕಾಮೆಂಟ್ಸ್ ಬರುವುದನ್ನು ತಪ್ಪಿಸಲು ಕೋರ್ಟ್‌ನಿಂದ ಆದೇಶ ತರಲಾಗಿದೆ.
1212
ದರ್ಶನ್ 'ದಿ ಡೆವಿಲ್' ಕ್ರೇಜ್
ಒಮ್ಮೆ ಜಾಮೀನು ಸಿಕ್ಕಿತ್ತು, ಮತ್ತೆ ಜೈಲು ಸೇರಿದ್ದಾರೆ
ನಟ ದರ್ಶನ್ ಅವರು ಜೈಲುಪಾಲಾಗಿ ಮುಂದಿನ ವರ್ಷದ ಜೂನ್ ತಿಂಗಳಿಗೆ ಎರಡು ವರ್ಷಗಳು ಕಳೆಯಲಿವೆ. ಒಮ್ಮೆ ಬೆನ್ನುನೋವಿನ ಕಾರಣಕ್ಕೆ ಜೈಲಿನಿಂದ ಜಾಮೀನು ಪಡೆದು ಬಂದಿದ್ದರೂ ಕೂಡ ಮತ್ತೆ ಜೈಲು ಸೇರಿ ಇದೀಗ ಆರೋಪಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು'ದಿ ಡೆವಿಲ್' ಸಿನಿಮಾ ಮೂಲಕ ತಮ್ಮ 'ಬಾಸ್' ದರ್ಶನ ಮಾಡುತ್ತಿದ್ದಾರೆ.