ಮಾ. 15ರಂದು ದೊಡ್ಮನೆ ಹುಡುಗಿ 'ಹೈಡ್ ಆ್ಯಂಡ್‌ ಸೀಕ್‌' ಬರ್ತಿದೆ!

Published : Mar 08, 2024, 10:53 AM IST

ಹೈಡ್ ಆ್ಯಂಡ್‌ ಸೀಕ್‌ ಸಿನಿಮಾ ಮಾರ್ಚ್‌ 15ರಂದು ರಿಲೀಸ್ ಆಗ್ತಿದೆ. ಜನರ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ.... 

PREV
16
ಮಾ. 15ರಂದು ದೊಡ್ಮನೆ ಹುಡುಗಿ 'ಹೈಡ್ ಆ್ಯಂಡ್‌ ಸೀಕ್‌' ಬರ್ತಿದೆ!

ಯುವ ನಟ ಅನೂಪ್‌ ರೇವಣ್ಣ ಈ ಬಾರಿ ‘ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾ ಮೂಲಕ ಬಂದಿದ್ದಾರೆ. ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಮಾ.15ರಂದು ಬಿಡುಗಡೆ ಆಗುತ್ತಿದೆ.

26

ಪುನೀತ್ ನಾಗರಾಜು ಹಾಗೂ ವಸಂತ್ ರಾವ್ ಎಂ. ಕುಲಕರ್ಣಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಪುನೀತ್ ನಾಗರಾಜು ಅವರೇ ರಚನೆ, ನಿರ್ದೇಶನ ಮಾಡಿದ್ದಾರೆ.

36

 ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದ್ದು, ಚಿತ್ರದಲ್ಲಿ ಅನೂಪ್ ರೇವಣ್ಣ ಕಿಡ್ನಾಪರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಕುರಿತು ಅನೂಪ್, ‘ನನ್ನ ಸಿನಿಮಾ ಕೆರಿಯರ್‌ನ ವಿಭಿನ್ನ ಸಿನಿಮಾ ಇದು. 

46

ಕುತೂಹಲಕರ ಕತೆ ಇದೆ. ಆಸಕ್ತಿಕರ ಪಾತ್ರ ಇದೆ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾ. ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಶೇಡ್ ಇರುವ ಪಾತ್ರ ನನ್ನದು. 

56

ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ನನಗೆ ತುಂಬಾ ಇಷ್ಟವಾಗಿದೆ, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎನ್ನುತ್ತಾರೆ. ಸಿನಿಮಾದಲ್ಲಿ ಒಳ್ಳೆ ತಾರ ಬಳಗವಿದೆ.

66

 ಸಿನಿಮಾದಲ್ಲಿ ಬಲರಾಜವಾಡಿ, ಸೂರಜ್, ಜಗ್ಗಿ ತಾರಾಗಣದಲ್ಲಿದ್ದಾರೆ. ರಿಜೋ ಪಿ. ಜಾನ್ ಛಾಯಾಗ್ರಹಣ, ಸ್ಯಾಂಡಿ ಅದಾನಿ ಸಂಗೀತ ಸಂಯೋಜನೆ, ಮಧು ತುಂಬಕೆರೆ ಸಂಕಲನವಿದೆ.

Read more Photos on
click me!

Recommended Stories