ಬಿಬಿಎಂಪಿಯಲ್ಲಿ ಕೈ-ಕೈ ಹಿಡಿದುಕೊಂಡು ಕುಣಿದಾಡಿದ ಮಾಲಾಶ್ರೀ-ರವಿಚಂದ್ರನ್ ಜೋಡಿ!

First Published | Mar 7, 2024, 3:39 PM IST

ಬೆಂಗಳೂರು (ಮಾ.07): ರಾಮಾಚಾರಿ ಸಿನಿಮಾದ ಮೂಲಕ ಎಲ್ಲರ ಮನೆಮಾತಾದ ಜೋಡಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮಾಲಾಶ್ರೀ ಜೋಡಿ. ಸುಧೀರ್ಘ 30 ವರ್ಷಗಳ ಬಳಿಕ ರವಿಚಂದ್ರನ್ ಮತ್ತು ಮಾಲಾಶ್ರೀ ಬಿಬಿಎಂಪಿಯಲ್ಲಿ ಕಾಣಿಸಿಕೊಂಡಿದ್ದು, ಕೈ-ಕೈ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.
 

ಸುಮಾರು 30 ವರ್ಷಗಳ ಹಿಂದೆ ರಾಮಾಚಾರಿ ಸಿನಿಮಾದಲ್ಲಿ 'ಆಕಾಶದಾಗೆ ಯಾರೋ ಮಾಯಗಾರನು ಚಿತ್ತಾರ ಮಾಡಿ ಹೋಗೋನೇ..., ಈ ಭೂಮಿ ಮ್ಯಾಗೆ ಯಾರೋ ತೋಟಗಾರನು ಮಲೆನಾಡ ಮಾಡಿ ಹೋಗೊನೇ...' ಎಂದು ಹಾಡಿ ಕುಣಿದವರು ಮತ್ತೆ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಹಾಡಿ ಕುಣಿದಿದ್ದಾರೆ.
 

ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮತ್ತು ಮಾಲಾಶ್ರೀ ಇಬ್ಬರೂ ಒಟ್ಟಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
 

Tap to resize

ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ ರವಿಚಂದ್ರನ್ ಅವರು, ಪ್ರೇಮಲೋಕ ಭಾಗ-2 ಶೀಘ್ರದಲ್ಲಿ ಆರಂಭವಾಗಲಿದೆ. ನಾನು ಚಿತ್ರರಂಗದಲ್ಲಿ ಬೆಳೆಯಲು ಡಾ.ರಾಜ್ ಕುಮಾರ್, ಅಂಬರೀಷ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಒಡನಾಟ ಅತ್ಯಂತ ಸಹಕಾರಿಯಾಗಿದೆ ಎಂದರು.
 

ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊಡಮಾಡುವ 'ದಿಟ್ಟ ಮಹಿಳಾ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರಿಗೆ ಒಟ್ಟಿಗೆ ಪ್ರಶಸ್ತಿ ಪ್ರದಾನ ಮಾಡಿದರು.
 

ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೆ ಸಾಧನೆ ಮಾಡುತ್ತಾರೆ. ಮಹಿಳೆಯರು ಸಮಾಜದ ಕಣ್ಣು ಮತ್ತು ಮಹಿಳೆಯರಿಗೆ ಗೌರವ ಕೊಟ್ಟರೆ ದೇವರೆ ಒಲಿಯುತ್ತಾನೆ ಎಂದು ನಟಿ ಮಾಲಾಶ್ರೀ ಹೇಳಿದರು.
 

ಇನ್ನು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರವಿಚಂದ್ರನ್ ಅವರು 'ಹೆಣ್ಣು ಸ್ಪೂರ್ತಿ ಅವಳು ಇಲ್ಲದೇ ಹೋದರೆ ಜೀವನ ವ್ಯರ್ಥ. ಹೆಣ್ಣು ಇಲ್ಲವೆಂದರೆ ಸಮಾಜದಲ್ಲಿ ಏನು ಇಲ್ಲ, ಪುರುಷರಗಿಂತ ಮಹಿಳೆಯರೇ ಹೆಚ್ಚು ಶಕ್ತಿಶಾಲಿಗಳು' ಎಂದು ಹೇಳಿದರು.

ನಾವು ಎಷ್ಟೆ ಡೊಡ್ಡವರಾದರು, ತಾಯಿಗೆ ನಮ್ಮ ಚಿಕ್ಕ ಮಕ್ಕಳಾಗಿ ಇರುತ್ತೇವೆ. ನಾನು ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಅಥವಾ ಮಗಳ ಮುಖ ನೋಡಿಕೊಂಡೇ ಹೊರಡುತ್ತೇನೆ. ಆದರೆ, ಮಹಿಳೆಯರು ಕಷ್ಟ, ಆಳು ದುಖಃ ಹಂಚಿಕೊಳ್ಳುವುದಿಲ್ಲ. ನಗುವು ಮೂಲಕ ಎಲ್ಲರ ಮನಸ್ಸನ ಗೆಲ್ಲುತ್ತಾರೆ ಎಂದು ರವಿಚಂದ್ರನ್ ಹೇಳಿದರು.
 

ಈ ವೇದಿಕೆಯಲ್ಲಿ ನಟಿ ವಿನಯಪ್ರಸಾದ್, ಖ್ಯಾತ ಹಿನ್ನಲೆ ಗಾಯಕಿ ಎಂ.ಡಿ.ಪಲ್ಲವಿ, ಯುನೈಟೆಡ್ ಆಸ್ಪತ್ರೆ ನಿರ್ದೇಶಕಿ ಡಾ.ವೀಣಾ ಸಿದ್ದಾರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತೆ ಎಂ.ಸಿ.ಕವಿತಾ, ನಿರ್ದೇಶಕಿ ಶೀತಲ್ ಶೆಟ್ಟಿ, ಹಿರಿಯ ವಕೀಲೆ ಶೀದೇವಿ ಪಾಟೀಲ್, ಟಿವಿ-9 ನಿರೂಪಕಿ ಶುಭಶ್ರೀ ಜೈನ್, ಹಿರಿಯ ಪತ್ರಕರ್ತೆ ಮಮತಾ ಮಾರ್ದಾಳ್ ಮತ್ತಿತರರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
 

Latest Videos

click me!