Ayya Movie ಶೂಟಿಂಗ್ ವೇಳೆ ನಟ ದರ್ಶನ್‌ಗೆ ಉಪ್ಪಿಟ್ಟು ಮಾಡಿ ತಿನ್ನಿಸಿದ್ದ ಕುತೂಹಲಕರ ಘಟನೆಯನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಅಡುಗೆ ಪ್ರಯೋಗದ ಹಿಂದಿನ ಮಜವಾದ ಕಥೆಯನ್ನೂ ಅವರು ಬಹಿರಂಗಪಡಿಸಿದ್ದಾರೆ.
ದರ್ಶನ್ ಹೀರೋ ಆಗಿದ್ದ ಅಯ್ಯ ಸಿನಿಮಾ ಶೂಟಿಂಗ್ ಕೆಮ್ಮಣ್ಣು ಗುಂಡಿ, ಕುದ್ರೆಮುಖ ಆಸುಪಾಸಲ್ಲಿ ಇತ್ತು. ಅವತ್ತೊಂದು ದಿನ ಬೆಳ್ ಬೆಳಗ್ಗೆ ಎಲ್ಲರೂ ಎದ್ದು ಆಚೆ ಹೋಗಿದ್ರು. ಕೊನೆಗೆ ನಾನೇ ಎದ್ದುಹೋಗಿ ಉಪ್ಪಿಟ್ಟು ಮಾಡಿದೆ.
25
ಉಪ್ಪಿಟ್ಟನ್ನೇ ತಿನ್ನಬೇಕಿತ್ತು
ಸಾಮಾನ್ಯವಾಗಿ ನಾನ್‌ವೆಜ್ ಅನ್ನೇ ತಿನ್ನುತ್ತಿದ್ದ ದರ್ಶನ್ ಅವತ್ತು ಅಲ್ಲಿ ಬೇರೇನೂ ಸಿಗದ ಕಾರಣ ಉಪ್ಪಿಟ್ಟನ್ನೇ ತಿನ್ನಬೇಕಿತ್ತು. ಇದು ಚೆನ್ನಾಗಿದೆ ಅಂತ ಏನ್ ಗ್ಯಾರಂಟಿ ಅಂತ ದರ್ಶನ್ ಕೇಳಿದ್ರು.
35
ಚನ್ನಾಗಿದೆ ಅಂದ್ರು
ನಾನೇ ಗ್ಯಾರಂಟಿ ಅಂದೆ. ಮರುಮಾತಾಡದೇ ಉಪ್ಪಿಟ್ಟು ತಿಂದರು. ಆಮೇಲೆ ಚನ್ನಾಗಿದೆ ಅಂದ್ರು. ಇದು ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತು.
ಇತ್ತೀಚೆಗೆ ತನ್ನ ಅಡುಗೆ ಸಾಹಸಗಳ ಬಗ್ಗೆ ಓಂ ಪ್ರಕಾಶ್ ಮಾತನಾಡಿದರು. ನಾನು ಮೊದಲ ಸಲ ಅಡುಗೆ ಮಾಡಿದಾಗ ಅದನ್ನ ಕೊಟ್ಟಿದ್ದು ನನ್ನ ಹೆಂಡತಿ ಭವ್ಯಾಗೆ. ಅದನ್ನು ತಿಂದು ಅವಳು ಚೆನ್ನಾಗಿದ್ರೆ ಬೇರೆಯವ್ರಿಗೆ ಕೊಡಾಣ ಅಂತ ಪ್ಲಾನ್ ಇತ್ತು. ಪಾಪ ಅವಳಿಗೆ ಗಂಡ ತನಗೋಸ್ಕರ ಮಾಡಿದ್ದು ಎಂಬ ಮಮಕಾರ.
55
ಅವಳಿಗೂ ಇಷ್ಟ ಆಯ್ತು
ನನ್ನ ಪ್ಲಾನ್ ಗೊತ್ತಿರಲಿಲ್ಲ. ಪುಣ್ಯಕ್ಕೆ ಆ ಅಡುಗೆ ಚೆನ್ನಾಗಿತ್ತು. ಅವಳಿಗೂ ಇಷ್ಟ ಆಯ್ತು. ತಿಂದ ಎಲ್ಲರೂ ಇಷ್ಟಪಟ್ಟರು ಎಂದೂ ಹೇಳಿದ್ದಾರೆ. ಸದ್ಯ ಓಂಪ್ರಕಾಶ್ ರಾವ್ ‘ತ್ರಿಶೂಲಂ’ ಹಾಗೂ ‘ಫೀನಿಕ್ಸ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.