Published : Aug 09, 2025, 05:03 PM ISTUpdated : Aug 09, 2025, 05:36 PM IST
ಗಾಯಕ ಚಂದನ್ ಶೆಟ್ಟಿ ಅವರು ( Chandan Shetty ) ಹಾಡಿನ ಮೂಲಕ ಡಿವೋರ್ಸ್, ಬ್ರೇಕಪ್‌ನಿಂದ ಕಲಿತ ಪಾಠವನ್ನು ಹೇಳಿದ್ದಾರೆ. ಹಾಗಾದರೆ ಲವ್‌ನಲ್ಲಿ ಗುಡ್ ಲಕ್ಸ್ ಮ್ಯಾಟರ್ ಆಗತ್ತಾ ಎಂಬ ಪ್ರಶ್ನೆಗೆ ಅವರು ಜೋಶ್ ಟಾಕ್ಸ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ಹಾಡಿನಲ್ಲಿ ಕ್ಯಾಚಿ ಇರಬೇಕು, ಹುಡುಗಿಯರಿಗೆ ಅವರನ್ನು ಹೊಗಳಿದರೆ ಇಷ್ಟ ಆಗುತ್ತದೆ. ಹೀಗಾಗಿ ನನ್ನ ಹಾಡಿನಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ್ದೇನೆ. ನಮ್ಮ ಆಡಿಯೆನ್ಸ್ ಹೀಗಿದ್ದಾರೆ ಅಂತ ಟಾರ್ಗೆಟ್ ಮಾಡಿ ನಾನು ಸಾಹಿತ್ಯವನ್ನು ಬರೆಯುತ್ತೇನೆ. ಮೂರೇ ಮೂರು ಪೆಗ್‌ಗೆ ಹಾಡು ಬರೆದಾಗ ನನ್ನ ವಯಸ್ಸು 26 ಆಗಿತ್ತು. ನಿಜಕ್ಕೂ ಒಂದು ಸಂಬಂಧದಲ್ಲಿ ಬ್ಯೂಟಿ ಅಗತ್ಯವಿಲ್ಲ” ಎಂದು ಚಂದನ ಶೆಟ್ಟಿ ( Chandan Shetty ) ಹೇಳಿದ್ದಾರೆ.
25
ನೋಡೋಕೆ ಚೆನ್ನಾಗಿದ್ದಾರೆ ಅಂತ ಲವ್ ಮಾಡಬಾರದು!
“ಲವ್‌ನಲ್ಲಿ ನಿರೀಕ್ಷೆ ಇರಬಾರದು. ನಮ್ಮ ಮನಸ್ಸಿಗೆ ಕೆಲ ಕಾರಣಕ್ಕೆ ಅವರು ಇಷ್ಟವಾಗ್ತಾರೆ. ಚೆನ್ನಾಗಿದ್ದಾರೆ ಅಂತ ಲವ್ ಮಾಡಿರುತ್ತೇವೆ, ಆಮೇಲೆ ಅವರ ಮನಸ್ಸಿನಲ್ಲಿ ಇರೋದು ಬೇರೆ ಇರುತ್ತದೆ. ಆಗ ಮೋಸ ಹೋದಹಾಗೆ ಅನಿಸುತ್ತದೆ. ಆ ಪಾಠವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಬ್ಯೂಟಿ ಎಲ್ಲವೂ ಅಲ್ಲ” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
35
ಪ್ರೀತಿಯಲ್ಲಿ ನಾನು ಅಂಧನಾಗಿದ್ದೆ
“ನಾನು ತುಂಬ ಪ್ರೀತಿಸಿ ಮದುವೆಯಾದೆ. ನಾನು ಅವಳನ್ನು ಎಷ್ಟು ಪ್ರೀತಿಸ್ತೀನಿ ಎನ್ನೋದನ್ನು ಕೂಡ ಜಗತ್ತಿಗೆ ತೋರಿಸಿದೆ. ನಾನು ಪ್ರೀತಿಯಲ್ಲಿ ಅಂಧನಾಗಿದ್ದೆ. ಮದುವೆಯಾಗಿ ನಾಲ್ಕು ವರ್ಷಗಳಾದ ಬಳಿಕ ಇದು ಹೊಂದಾಣಿಕೆ ಆಗಲ್ಲ ಅಂತ ಅರ್ಥ ಆಯ್ತು. ಬಲವಂತವಾಗಿ ಯಾರ ಜೊತೆಯೂ ನಮ್ಮನ್ನು ಇರಿಸಿಕೊಳ್ಳೋಕೆ ಆಗೋದಿಲ್ಲ. ನಾವು ಯಾರನ್ನೂ ಕಂಟ್ರೋಲ್ ಮಾಡಬಾರದು” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
“ಮದುವೆ ಯಶಸ್ವಿಯಾಗಲು ಹಣ, ಗುಡ್ ಲುಕ್ ಸಾಕಾಗೋದಿಲ್ಲ. ಬ್ಯೂಟಿ ಕಾನ್ಶಿಯಸ್ ಆದಾಗ ಜೀವನದ ಚಿಕ್ಕ ಚಿಕ್ಕ ವಿಷಯವನ್ನು ಕಳೆದುಕೊಳ್ಳೋಕೆ ಶುರು ಮಾಡ್ತೀವಿ. ಮೇಕಪ್ ಇಲ್ಲದೆ ಹೊರಗಡೆ ಹೋದಾಗ ಅವರಿಗೆ ಕಾನ್ಫಿಡೆನ್ಸ್ ಇರೋದಿಲ್ಲ” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ
55
ಹಾಡಿನಲ್ಲಿ ಡಿವೋರ್ಸ್ ಪಾಠ ಹೇಳಿದ ಚಂದನ್ ಶೆಟ್ಟಿ
“ಮದುವೆಗೂ ಮುನ್ನ ಬ್ರೇಕಪ್ ಆಗಿತ್ತು. ಡಿವೋರ್ಸ್, ಬ್ರೇಕಪ್ ಎಲ್ಲ ಸೇರಿಸಿ ನಾನು ಹಾಡು ಬರೆಯುತ್ತೇನೆ. ಏನೇ ನಿನ್ನ ಮೈಮಾಟದಾಟ, ಇನ್ನೇಳು ಜನುಮಕೂ ಕಲಿಸೀಯಾ ಪಾಠ, ನೂರೆಂಟು ಹುಡುಗಿಯರು ಕೊಡುತ್ತಿದ್ರು ಕಾಟ, ನೀ ಬಂದು ಕಿತ್ತೋದಗದಿ ಇದ್ದೊಂದು ಹಾರ್ಟ್” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.