ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!

Published : Dec 06, 2025, 04:56 PM IST

ಕೆಲವೇ ಗಂಟೆಗಳಲ್ಲಿ ಡೆವಿಲ್ ಟ್ರೇಲರ್‌ ಮೂರು ಮಿಲಿಯನ್‌ ವೀಕ್ಷಣೆ ಕಂಡಿದೆ. ದರ್ಶನ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ, ಪವರ್‌ಫುಲ್‌ ಡೈಲಾಗ್‌ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

PREV
16
ಮೂರು ಮಿಲಿಯನ್‌ ವೀಕ್ಷಣೆ

ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರದ ಟ್ರೇಲರ್‌ಗೆ ಅದ್ದೂರಿ ವೆಲ್‌ಕಮ್‌ ದೊರೆತಿದೆ. ಕೆಲವೇ ಗಂಟೆಗಳಲ್ಲಿ ಟ್ರೇಲರ್‌ ಮೂರು ಮಿಲಿಯನ್‌ ವೀಕ್ಷಣೆ ಕಂಡಿದೆ. ದರ್ಶನ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ, ಪವರ್‌ಫುಲ್‌ ಡೈಲಾಗ್‌ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

26
ಕಿಕ್‌ನಲ್ಲಿದ್ದರೆ ಫುಲ್ ಆನ್ ಡೆವಿಲ್

‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದೀನಿ ಚಿನ್ನ’, ‘ಲುಕ್‌ನಲ್ಲಿ ಹೀರೋನೇ.. ಕಿಕ್‌ನಲ್ಲಿದ್ದರೆ ಫುಲ್ ಆನ್ ಡೆವಿಲ್’ ಎಂಬ ಸಂಭಾಷಣೆಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

36
ನಾಯಕಿಯಾಗಿ ರಚನಾ

‘ಡೆವಿಲ್’ ಸಿನಿಮಾನಲ್ಲಿ ರಚನಾ ನಾಯಕಿಯಾಗಿದ್ದು ಅವರೊಟ್ಟಿಗಿನ ಕೆಲವು ದೃಶ್ಯಗಳು ಟ್ರೇಲರ್​​ನಲ್ಲಿವೆ. ರಚನಾ ಟ್ರೇಲರ್​​ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

46
ಮಹತ್ವದ ಪಾತ್ರ

‘ಡೆವಿಲ್’ ಸಿನಿಮಾದಲ್ಲಿ ಮಾಜಿ ಬಿಗ್​​ಬಾಸ್ ಸ್ಪರ್ಧಿ ವಿನಯ್ ಗೌಡ ಅವರಿಗೂ ಮಹತ್ವದ ಪಾತ್ರ ಇದ್ದಂತಿದೆ. ಟ್ರೇಲರ್​​ನಲ್ಲಿಯೂ ಅವರ ಪಾತ್ರ ಕೆಲವು ಬಾರಿ ಕಾಣಿಸಿಕೊಳ್ಳುತ್ತದೆ.

56
ಪಾತ್ರದ ಬಗ್ಗೆ ಕುತೂಹಲ

ಸಿನಿಮಾ ರಿಲೀಸ್‌ (ಡಿ.11) ಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ವಿಲನ್ ಶೇಡ್​​ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿರುವ ದರ್ಶನ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ ಗಿಲ್ಲಿ ನಟನ ಪಾತ್ರವೂ ಹೈಲೈಟ್‌ ಆಗಿದೆ.

66
ಚಿತ್ರದಲ್ಲಿ ಬಹುದೊಡ್ಡ ತಾರಾಗಣ

ಅಚ್ಯುತ್‌ ಕುಮಾರ್‌, ಮಹೇಶ್ ಮಂಜ್ರೇಕರ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ, ಚಂದು ಸೇರಿದಂತೆ ದೊಡ್ಡ ತಾರಾಗಣವಿರುವುದು ರಿವೀಲ್‌ ಆಗಿದೆ. ಪ್ರಕಾಶ್‌ ವೀರ್‌ ಈ ಸಿನಿಮಾ ನಿರ್ದೇಶಿಸಿ, ನಿರ್ಮಿಸಿದ್ದಾರೆ.

Read more Photos on
click me!

Recommended Stories