ಚಂದನವನದ ಮುದ್ದಾದ ಜೋಡಿಗಳಾದ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ ತಮ್ಮ ಮುದು ಮಗಳು ಪರಿ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
27
ಕೃಷ್ಣ, ಮಿಲನಾ ಹಾಗೂ ಪರಿ ಮೂರು ಜನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಕುಟುಂಬದ ಜೊತೆಗೂ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ Celebrating Pari ಎಂದು ಬರೆದುಕೊಂಡಿದ್ದಾರೆ.
37
ಮಿಲನಾ ನಾಗರಾಜ್ (Milana Nagraj) ಕಳೆದ ವರ್ಷ ಸೆಪ್ಟೆಂಬರ್ 5ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ ‘ಪರಿ’ ಎಂದು ಹೆಸರನ್ನಿಟ್ಟು ಕರೆಯುತ್ತಿದ್ದರು. ಪರಿ ಬಂದಮೇಲೆ ಈ ಜೋಡಿ ಹೆಚ್ಚಾಗೆ ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಮಿಲನಾ ಸಿನಿಮಾ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು, ಮಗಳ ಜೊತೆ ಬ್ಯುಸಿಯಾಗಿದ್ದಾರೆ. ಆದರೆ ಸಿನಿಮಾ ಕೆಲಸಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಸಹ ಮಗಳ ಜೊತೆ ಆಟ ಪಾಟದ ಜೊತೆಗೆ, ಕ್ರಿಕೆಟ್, ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ.
57
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮಿಲನಾ ನಾಗರಾಜ್ ಹೆಚ್ಚಾಗಿ ಮಗಳ ಮುದ್ದಾದ ಫೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತನ್ನ ಪ್ರಪಂಚ ಎನ್ನುತ್ತಾ ಅಮ್ಮ-ಮಗಳು, ಅಪ್ಪ-ಮಗಳ ಫೋಟೊ ಶೇರ್ ಮಾಡುತ್ತಿರುತ್ತಾರೆ.
67
ಪರಿ ಎಷ್ಟು ಮುದ್ದಾಗಿ ಫೋಟೊಗೆ ಪೋಸ್ ಕೊಟ್ಟಿದ್ದಾಳೆಿ. ಇದಕ್ಕೂ ಮುನ್ನ ಮಿಲನಾ ಪರಿ ಜೊತೆಗಿನ ಮುದ್ದಾದ ವಿಡಿಯೋ ಶೇರ್ ಮಾಡಿದ್ದರು. ಇದರಲ್ಲಿ ಮಗಳ ನಗು, ಆಟ, ತುಂಟಾಟಗಳನ್ನು ಕಾಣಬಹುದು.
77
ಇನ್ನು ಮಿಲನಾ ಮತ್ತು ಕೃಷ್ಣ ಹಲವು ವರ್ಷಗಳಿಂದ ಪ್ರೀತಿಸಿದ್ದು 2021ರ ಫೆಬ್ರವರಿ 14ರಂದು ಮದುವೆಯಾಗಿದ್ದರು. ಇಬ್ಬರು ಜೋಡಿಯಾಗಿ ನಟಿಸಿದ ಲವ್ ಮಾಕ್ಟೇಲ್ (Love Mocktail)ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು, ಆ ಸಿನಿಮಾದ ಯಶಸ್ಸಿನ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.