ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾದ ಧನಂಜಯ ಅವರು ಆಮೇಲೆ ಪತ್ನಿ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಹಾಸನದ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.
"ಬೆಟ್ಟ ಹತ್ತಿ ದರ್ಶನ ಮಾಡಿ, ಕಾಯಿ ಬಾಳೆ ಹಣ್ಣು ತಿಂದು, ಆ ಕಲ್ಲಿನ ಮೇಲೆ ಮಲ್ಕೊಳ್ಳೊದೆ ಒಂದು ನೆಮ್ಮದಿ. ಈ ಥರ ನಿದ್ದೆ ಮಾಡೋದರಲ್ಲಿ ಸಖತ್ ನೆಮ್ಮದಿ ಸಿಗುತ್ತೆ, ಅದು ದೇವಸ್ಥಾನದಲ್ಲಿ ಮಾತ್ರ, ಅದ್ರಲ್ಲೂ ಕಲ್ಲಿನ ಮೇಲೆ" ಎಂದು ಧನಜಂಯ ಅವರ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ʼಡಾಲಿ ಪಿಕ್ಚರ್ಸ್ʼ ಅಡಿಯಲ್ಲಿ ʼವಿದ್ಯಾಪತಿʼ ಸಿನಿಮಾ ನಿರ್ಮಾಣ ಆಗಿದೆ. ಏಪ್ರಿಲ್ 10ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇನ್ನು ಡಾ ನಾಗಭೂಷಣ್, ಮಲೈಕಾ ವಸುಪಾಲ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹಾಸನದ ಅರಸಿಕೆರೆ ತಾಲೂಕಿನ ಯಾದಪುರದಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನವಿದೆ. ಅರಸಿಕೆರೆಯಿಂದ 8 ಕಿಮೀಟರ್ ದೂರದಲ್ಲಿ ಈ ದೇಗುಲ ಇದೆ. ಬೆಟ್ಟದ ಮೇಲೆ ಈ ದೇವಸ್ಥಾನವಿದೆ. ಶಿವನಿಗೆ ಸಮರ್ಪಿತವಾದ ದೇಗುಲವಿದು.
1101 ಮೆಟ್ಟಿಲು ಇದ್ದು ಬೆಟ್ಟ ಹತ್ತಬಹುದು. ಉತ್ತರ ಹಾಗೂ ದಕ್ಷಿಣವಾಗಿ ಎರಡೂ ಕಡೆಯಿಂದ ಈ ಬೆಟ್ಟ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿ ಪಾದ ಕೂಡ ಇದೆ. ಈ ಬೆಟ್ಟದ ತುದಿಯಲ್ಲೋಂದು ಗೋಪುರ, ಪಕ್ಕದಲ್ಲಿಯೇ ಗಂಗಮ್ಮ ಕೊಳ, ಬೆಟ್ಟದ ಕೆಳಗೆ ಬಸವಣ್ಣನ ದೇಗುಲವೂ ಇದೆ.
ಬೆಟ್ಟದಲ್ಲಿ ಶ್ರೀಗಳ ಸನ್ನಿಧಾನದ ಪಕ್ಕದಲ್ಲಿ ಯಾವಾಗಲೂ ಜೇನುಗೂಡು ಕಟ್ಟುತ್ತದೆ. ಹೀಗಾಗಿ ಇದನ್ನು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಅಂತ ಕರೆಯುತ್ತಾರೆ. ಈ ಜೇನುಗೂಡಿನಲ್ಲಿ ಜೇನುನೊಣಗಳ ರೂಪದಲ್ಲಿ ದೇವತೆಗಳು ವಾಸವಿರುತ್ತವೆ ಎಂದು ನಂಬಲಾಗುತ್ತದೆ. ಇನ್ನು ಜೇನುಕಲ್ಲು ಸಿದ್ದೇಶ್ವರರನ್ನು ಸಿದ್ದೇಶ್ವರ, ಅಜ್ಜಯ್ಯಾ ಎಂದೂ ಕರೆಯುತ್ತಾರೆ.